ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಸೇರಿದ 1,350 ಕೋಟಿ ರೂಪಾಯಿ ಮೌಲ್ಯದ ವಜ್ರ, ಚಿನ್ನಾಭರಣ, ಹರಳುಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭಾರತಕ್ಕೆ ತಂದಿದ್ದಾರೆ. 2,340 ಕೆಜಿ ತೂಕದ ವಜ್ರ, ಹರಳು, ಚಿನ್ನಾಭರಣ, ಬೆಳ್ಳಿಯನ್ನು ಇ.ಡಿ ಅಧಿಕಾರಿಗಳು ತಂದಿದ್ದಾರೆ.
ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಹಾಂಗ್ ಕಾಂಗ್, ಯುಎಇ ಯಲ್ಲಿ ಕಂಪನಿಯೊಂದರ ಗೋಡೌನ್ ನಲ್ಲಿಟ್ಟಿದ್ದರು. ಮೆಹುಲ್ ಚೋಕ್ಸಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13 ಸಾವಿರ ಕೋಟಿ ರೂಪಾಯಿ ವಂಚಿಸಿದ್ದಾನೆ. 2018 ರಲ್ಲಿ ದುಬೈನಿಂದ ಹಾಂಗ್ ಕಾಂಗ್ ಗೆ ವಜ್ರ, ಚಿನ್ನಾಭರಣ ರವಾನೆ ಮಾಡಲಾಗಿತ್ತು. ಈ ಬಗ್ಗೆ ಗುಪ್ತಚರ ಮೂಲಗಳಿಂದ ಮಾಹಿತಿ ಪಡೆದ ಇ.ಡಿ, ಹಾಂಗ್ ಕಾಂಗ್ ನಲ್ಲಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಈಗ ಭಾರತಕ್ಕೆ ತಂದಿದೆ.
108 ಬಾಕ್ಸ್ ಗಳ ಪೈಕಿ 32 ಬಾಕ್ಸ್ ನೀರವ್ ಮೋದಿಗೆ ಸೇರಿವೆ. ಉಳಿದವು ಮೆಹುಲ್ ಚೋಕ್ಸಿಗೆ ಸೇರಿವೆ. ಈ ಬಾಕ್ಸ್ ಗಳಲ್ಲಿ ವಜ್ರ, ಚಿನ್ನಾಭರಣ ಇಟ್ಟು ಸಾಗಿಸಲಾಗಿದೆ. ಈ ಮೊದಲು ಕೂಡ 33 ಬಾಕ್ಸ್ ಗಳಲ್ಲಿ 137 ಕೋಟಿ ರೂಪಾಯಿ ಮೌಲ್ಯದ ವಜ್ರ, ಚಿನ್ನಾಭರಣ ಭಾರತಕ್ಕೆ ತರಲಾಗಿತ್ತು. ನೀರವ್ ಮೋದಿ ಸದ್ಯ ಲಂಡನ್ ಜೈಲಿನಲ್ಲಿದ್ದಾನೆ. ಮೆಹುಲ್ ಚೋಕ್ಸಿ ಆಫ್ರಿಕಾ ದೇಶಗಳಲ್ಲಿ ತಲೆಮರೆಸಿಕೊಂಡಿದ್ದಾನೆ.