ಚೀನಾ ಕಿರಿಕ್ ಆಯ್ತು.. ಪಾಕಿಸ್ತಾನದ ಪಾಪ ಕೃತ್ಯಗಳು ಆಯ್ತು.. ಇದೀಗ ಕೊರೊನಾ ಕಾಟದ ನಡುವೆ ಭಾರತಕ್ಕೆ ಮತ್ತೊಂದು ಕಂಟಕ ಎದುರಾಗಿದೆ.. ಗಡಿ ವಿಚಾರಕ್ಕೆ ಚೀನಾ, ಪಾಕಿಸ್ತಾನ ಕ್ಯಾತೆ ತೆಗೀತಿರೋವಾಗ್ಲೇ ನೇಪಾಳ ಉದ್ಧಟತನದ ಹೆಜ್ಜೆ ಇಟ್ಟಿದೆ.. ಭಾರತ ಹಾಗೂ ನೇಪಾಳ ನಡುವೆ ಗಡಿಗಾಗಿ ಸಂಘರ್ಷ ತಾರಕಕ್ಕೇರಿದ್ದು ನೇಪಾಳ ಒಂದು ಹೆಜ್ಜೆ ಮುಂದೆ ಹೋಗಿದೆ.. ಭಾರತದ ಭೂಭಾಗ ಕಬಳಿಸೋ ನೇಪಾಳದ ಹುನ್ನಾರ ಬಟಾಬಯಲಾಗಿದೆ.
ಭಾರತದ ಕಲಾಪನಿ, ಲಿಪುಲೇಖ ನೇಪಾಳಕ್ಕೆ ಸೇರ್ಪಡೆ..!
ನೇಪಾಳ ಸಂಸತ್‌ನ ಕೆಳಮನೆಯಲ್ಲಿ ನಕಾಶೆ ಬದಲಾವಣೆಗೆ ಒಪ್ಪಿಗೆ..!
ಇನ್ನೊಂದು ಆತಂಕಕಾರಿ ವಿಚಾರ ಅಂದ್ರೆ ಭಾರತದ ಭೂಭಾಗ ನೇಪಾಳ ಭೂಪ್ರದೇಶವೆಂದು ನಕಾಶೆ ಬದಲಾವಣೆಗೆ ನೇಪಾಳ ಸಂಸತ್‌ನ ಕೆಳಮನೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಭಾರತದ ಕಲಾಪನಿ, ಲಿಪುಲೇಖ ಪ್ರದೇಶಗಳನ್ನು ನೇಪಾಳಕ್ಕೆ ಸೇರ್ಪಡೆಗೆ ಗ್ರೀನ್ ಸಿಗ್ನಲ್ ಸಿಕ್ಕಿರೋದು ಭಾರತಕ್ಕೆ ದೊಡ್ಡ ತಲೆನೋವಾಗಿದೆ. ನೇಪಾಳ ಸಂಸತ್‌ನ ಲೋವರ್ ಹೌಸ್ನಲ್ಲಿ ಸಮ್ಮತಿ ಸಿಕ್ಕಿರೋದ್ರಿಂದ ಸಂಸತ್‌ನ ಮೇಲ್ಮನೆಗೆ ರವಾನಿಸಲಾಗುತ್ತೆ. ಸಂಸತ್‌ನ ಎರಡೂ ಹೌಸ್ನಲ್ಲಿ ರಾಷ್ಟ್ರಪತಿ ಅಂಕಿತಕ್ಕೆ ಕಳಿಸಲಾಗುತ್ತೆ.
ಇನ್ನು, ಟಿಬೆಟ್‌ನ ಕೈಲಾಸ ಮಾನಸ ಸರೋವರಕ್ಕೆ ಹೋಗಲು ಸಂಪರ್ಕ ರಸ್ತೆ ಕಲ್ಪಿಸುವ ಲಿಪುಲೇಖ ಪಾಸ್ ಕಾಲಾಪಾನಿ ಸಮೀಪವಿದೆ. ಇದು ಭಾರತ ಹಾಗೂ ನೇಪಾಳ ನಡುವಿನ ವಿವಾದಿತ ಪ್ರದೇಶ. ಉತ್ತರಾಖಂಡದ ಪಿತೋರಗಢ ಜಿಲ್ಲೆ ಭಾಗ ಎಂದು ಭಾರತ ಹೇಳಿಕೊಳ್ಳುತ್ತದೆ. ಇತ್ತ ನೇಪಾಳ ಕೂಡ ಕಾಲಾಪಾನಿ ಪ್ರದೇಶ ಧರ್ಚುಲಾ ಜಿಲ್ಲೆಯಲ್ಲಿದೆ ಎಂದು ಮೊಂಡು ವಾದ ಮಾಡ್ತಿದೆ. ಕೊರೊನಾ ಸಂಕಷ್ಟದ ನಡುವೆ ನೇಪಾಳ ಗಡಿ ಕ್ಯಾತೆ ತೆಗೆದಿರೋದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ನೇಪಾಳದ ನಕಾಶೆ ಬದಲಾವಣೆ ನಿರ್ಧಾರಕ್ಕೆ ಭಾರತ ತಿರುಗೇಟು..!
ಭೂಪಟ ಪರಿಷ್ಕರಣೆಗೆ ಹೆಜ್ಜೆ ಇಟ್ಟಿರೋ ನೇಪಾಳದ ನಿರ್ಧಾರಕ್ಕೆ ಭಾರತ ಖಡಕ್ ಉತ್ತರ ರವಾನಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ಅನುರಾಗ ಶ್ರೀವಾಸ್ತವ್ ತಿರುಗೇಟು ನೀಡಿದ್ದು ಭಾರತೀಯ ಭೂಪ್ರದೇಶಗಳನ್ನು ಸೇರಿಸಿಕೊಂಡು ನೇಪಾಳ ಭೂಪಟ ಪರಿಷ್ಕರಿಸೋ ನಿರ್ಧಾರ ಸಮಂಜಸವಲ್ಲ. ಐತಿಹಾಸಿಕ ಅಂಶಗಳು, ಸಾಕ್ಷ್ಯಗಳನ್ನು ಆಧರಿಸಿಲ್ಲ. ಗಡಿ ವಿಚಾರವಾಗಿ ಮಾತುಕತೆ ನಡೆಸುವ ಎಲ್ಲಾ ನಿರ್ಧಾರಗಳನ್ನು ನೇಪಾಳ ಉಲ್ಲಂಘಿಸಿದೆ ಅಂತ ಖಡಕ್ ಸಂದೇಶ ರವಾನಿಸಿದ್ದಾರೆ.
ಒಟ್ನಲ್ಲಿ, ಗಡಿಯಲ್ಲಿ ಚೀನಾ, ಪಾಕಿಸ್ತಾನದ ಕ್ಯಾತೆ ನಡುವೆ ನೇಪಾಳ ತನ್ನ ಹಳೇ ಚಾಳಿ ಮುಂದುವರಿಸಿದೆ. ಇಡೀ ಜಗತ್ತೇ ಕೊರೊನಾ ಕ್ರೌರ್ಯದಲ್ಲಿ ಬೆಂದು ಹೋಗ್ತಿರೋವಾಗ್ಲೇ ಇಂಥಾ ನಾಚಿಕೆಗೇಡಿನ ನಿರ್ಧಾರ ಬೇಕಿತ್ತಾ ಅನ್ನೋದು ಭಾರತೀಯರ ಪ್ರಶ್ನೆ.. ಭಾರತದ ಭೂ ಪ್ರದೇಶವನ್ನು ತನ್ನ ತೆಕ್ಕೆಗೆ ಬಾಚಿಕೊಳ್ಳೋಕೆ ಹೊರಟಿರೋ ನೇಪಾಳದ ನಿರ್ಧಾರ ನಿಜಕ್ಕೂ ನಾಚಿಕೆಗೇಡಿನ ನಿರ್ಧಾರ ಅನ್ನೋದ್ರಲ್ಲಿ ನೋ ಡೌಟ್..
Published On - 9:28 am, Sun, 14 June 20