ಆಹಾರ ಅರಸಿ ಗ್ರಾಮಗಳಿಗೆ ನುಗ್ಗಿದ ಹಿಮಕರಡಿಗಳು

|

Updated on: Dec 08, 2019 | 1:45 PM

ರಷ್ಯಾದಲ್ಲಿ ಹೊಸದೊಂದು ತಲೆನೋವು ಶುರುವಾಗಿದೆ. ಹವಾಮಾನ ವೈಪರಿತ್ಯದ ಪರಿಣಾಮ ಹಿಮಕರಡಿಗಳ ಗುಂಪು ಆಹಾರ ಅರಸಿ ರಷ್ಯಾದ ಗ್ರಾಮಗಳಿಗೆ ನುಗ್ಗುತ್ತಿವೆ. ಈ ರೀತಿ ಹಿಮಕರಡಿಗಳು ನುಗ್ಗುತ್ತಿರವ ದೃಶ್ಯವನ್ನ ಡ್ರೋಣ್​ಗಳಿಂದ ಸೆರೆಹಿಡಿಯಲಾಗಿದ್ದು, ಜನ ಮನೆಬಿಟ್ಟು ಹೊರಗೆ ಬರಲು ಭಯಪಡುವಂತಾಗಿದೆ. 15 ಟ್ರಂಪ್ ಸರ್ಕಾರದ ವಿರುದ್ಧ ಆಕ್ರೋಶ: ಹವಾಮಾನ ಬದಲಾವಣೆ ಬಗ್ಗೆ ಟ್ರಂಪ್ ಸರ್ಕಾರದ ನಿಲುವು ವಿರೋಧಿಸಿ ಅಮೆರಿಕದಲ್ಲಿ ಪ್ರತಿಭಟನೆ ಆರಂಭವಾಗಿದೆ. ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್​ನಲ್ಲಿ ಯುವ ಸಮೂಹ ಟ್ರಂಪ್ ಸರ್ಕಾರದ ವಿರುದ್ಧ ತಿರುಗಿಬಿದ್ದಿದೆ. ಕ್ಲೈಮೆಟ್ ಚೇಂಜ್ ಕುರಿತು ಸ್ಪಷ್ಟ ನಿಲುವು ತಾಳುವಂತೆ […]

ಆಹಾರ ಅರಸಿ ಗ್ರಾಮಗಳಿಗೆ ನುಗ್ಗಿದ ಹಿಮಕರಡಿಗಳು
Follow us on

ರಷ್ಯಾದಲ್ಲಿ ಹೊಸದೊಂದು ತಲೆನೋವು ಶುರುವಾಗಿದೆ. ಹವಾಮಾನ ವೈಪರಿತ್ಯದ ಪರಿಣಾಮ ಹಿಮಕರಡಿಗಳ ಗುಂಪು ಆಹಾರ ಅರಸಿ ರಷ್ಯಾದ ಗ್ರಾಮಗಳಿಗೆ ನುಗ್ಗುತ್ತಿವೆ. ಈ ರೀತಿ ಹಿಮಕರಡಿಗಳು ನುಗ್ಗುತ್ತಿರವ ದೃಶ್ಯವನ್ನ ಡ್ರೋಣ್​ಗಳಿಂದ ಸೆರೆಹಿಡಿಯಲಾಗಿದ್ದು, ಜನ ಮನೆಬಿಟ್ಟು ಹೊರಗೆ ಬರಲು ಭಯಪಡುವಂತಾಗಿದೆ.

15 ಟ್ರಂಪ್ ಸರ್ಕಾರದ ವಿರುದ್ಧ ಆಕ್ರೋಶ:
ಹವಾಮಾನ ಬದಲಾವಣೆ ಬಗ್ಗೆ ಟ್ರಂಪ್ ಸರ್ಕಾರದ ನಿಲುವು ವಿರೋಧಿಸಿ ಅಮೆರಿಕದಲ್ಲಿ ಪ್ರತಿಭಟನೆ ಆರಂಭವಾಗಿದೆ. ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್​ನಲ್ಲಿ ಯುವ ಸಮೂಹ ಟ್ರಂಪ್ ಸರ್ಕಾರದ ವಿರುದ್ಧ ತಿರುಗಿಬಿದ್ದಿದೆ. ಕ್ಲೈಮೆಟ್ ಚೇಂಜ್ ಕುರಿತು ಸ್ಪಷ್ಟ ನಿಲುವು ತಾಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಸಮುದ್ರದ ಒಳಗೆ ಹುಲ್ಲಿನ ಹಾವಳಿ..!
ಸ್ಪೇನ್​ನ ಸಮುದ್ರದಲ್ಲಿ ಕಳೆ ಹೆಚ್ಚಾಗಿದ್ದು, ಸ್ವಚ್ಛಗೊಳಿಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಮುದ್ರದಲ್ಲಿ ಹೀಗೆ ಬೆಳೆದಿರುವ ಹುಲ್ಲು, ನೂರಾರು ಕಿಲೋಮೀಟರ್ ದೂರಕ್ಕೆ ವ್ಯಾಪಿಸಿದ್ದು, ದಡಕ್ಕೆ ಬಂದು ಸೇರುತ್ತಿದೆ. ಇದನ್ನು ಹವಾಮಾನ ವೈಪರಿತ್ಯದ ಪರಿಣಾಮ ಅಂತಲೂ ಕೆಲ ತಜ್ಞರು ದೂರುತಿದ್ದಾರೆ.

ಸರ್ಕಾರದ ವಿರುದ್ಧ ತೀವ್ರ ಆಕ್ರೋಶ:
ಚಿಲಿಯಲ್ಲಿ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಮತ್ತಷ್ಟು ಉಗ್ರರೂಪ ತಾಳಿದೆ. ಪ್ರತಿಭಟನಾಕಾರರ ಕಂಡ ಕಂಡ ಕಡೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದ್ಕಡೆ ಚಿಲಿಯ ಪೊಲೀಸ್ ವಾಹನಗಳನ್ನ ಟಾರ್ಗೆಟ್ ಮಾಡಲಾಗುತ್ತಿದ್ದು, ತೀವ್ರ ಆಕ್ರೋಶ ವ್ಯಕ್ತವಾಗ್ತಿದೆ.

Published On - 1:44 pm, Sun, 8 December 19