ಐಸ್​​ಲ್ಯಾಂಡ್​ನಲ್ಲಿ ಸ್ಫೋಟಗೊಂಡಿರುವ ಜ್ವಾಲಾಮುಖಿಯ ವಿಡಿಯೋ ಸಿಕ್ಕಾಪಟೆ ವೈರಲ್​; ನೀವು ಒಮ್ಮೆ ನೋಡಿ.. ಅದೆಷ್ಟು ರೌದ್ರ- ಸುಂದರ !

|

Updated on: Mar 23, 2021 | 7:15 PM

ಐಸ್​ಲ್ಯಾಂಡ್​ ಪದೇಪದೆ ಭೂಕಂಪಕ್ಕೆ ತುತ್ತಾಗುತ್ತಿರುವ ಪರಿಣಾಮ ಇದೀಗ ಜ್ವಾಲಾಮುಖಿ ಎದ್ದಿದೆ ಎಂದು ತಜ್ಞರು ಹೇಳಿದ್ದಾರೆ. ಈ ಜ್ವಾಲಾಮುಖಿ ಸಣ್ಣಪ್ರಮಾಣದಲ್ಲಿ ಸ್ಫೋಟಗೊಂಡಿದ್ದು, ಅಷ್ಟೇನೂ ಹಾನಿಯಾಗುವುದಿಲ್ಲ ಎಂದೂ ಹೇಳಲಾಗಿದೆ.

ಐಸ್​​ಲ್ಯಾಂಡ್​ನಲ್ಲಿ ಸ್ಫೋಟಗೊಂಡಿರುವ ಜ್ವಾಲಾಮುಖಿಯ ವಿಡಿಯೋ ಸಿಕ್ಕಾಪಟೆ ವೈರಲ್​; ನೀವು ಒಮ್ಮೆ ನೋಡಿ.. ಅದೆಷ್ಟು ರೌದ್ರ- ಸುಂದರ !
ಫಾಗ್ರಾಡಾಲ್ಸ್‌ಫಾಲ್ ಪರ್ವತದಲ್ಲಿ ಎದ್ದಿರುವ ಜ್ವಾಲಾಮುಖಿ
Follow us on

ಐಸ್​ಲ್ಯಾಂಡ್​​ನ ಫಾಗ್ರಾಡಾಲ್ಸ್‌ಫಾಲ್ ಪರ್ವತದಲ್ಲಿ ಎದ್ದಿರುವ ಜ್ವಾಲಾಮುಖಿಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ಈ ಜೀವಂತ ಜ್ವಾಲಾಮುಖಿ ನೋಡಲು ಭಯಾನಕವಾಗಿದ್ದರೂ, ತುಂಬ ಸುಂದರವಾಗಿದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐಸ್​ಲ್ಯಾಂಡ್​​ನ ರಾಜಧಾನಿ ರೆಯ್ಕ್​ಜಾವಿಕ್​​ನಿಂದ 40 ಕಿಮೀ ದೂರದಲ್ಲಿರುವ ಫಾಗ್ರಾಡಾಲ್ಸ್‌ಫಾಲ್ ಪರ್ವತದಲ್ಲಿ ಮಾರ್ಚ್​ 19ರಂದು ಸ್ಫೋಟಗೊಂಡಿದೆ. ಕಳೆದ 800 ವರ್ಷಗಳಲ್ಲಿ ಇದೇ ಮೊದಲಬಾರಿಗೆ ಎದ್ದಿರುವ ಜ್ವಲಾಮುಖಿ ಇದಾಗಿದೆ. ​

ಐಸ್​ಲ್ಯಾಂಡ್​ ಪದೇಪದೆ ಭೂಕಂಪಕ್ಕೆ ತುತ್ತಾಗುತ್ತಿರುವ ಪರಿಣಾಮ ಇದೀಗ ಜ್ವಾಲಾಮುಖಿ ಎದ್ದಿದೆ ಎಂದು ತಜ್ಞರು ಹೇಳಿದ್ದಾರೆ. ಈ ಜ್ವಾಲಾಮುಖಿ ಸಣ್ಣಪ್ರಮಾಣದಲ್ಲಿ ಸ್ಫೋಟಗೊಂಡಿದ್ದು, ಅಷ್ಟೇನೂ ಹಾನಿಯಾಗುವುದಿಲ್ಲ ಎಂದೂ ಹೇಳಲಾಗಿದೆ. ಆದರೆ ಡ್ರೋನ್​​ ಕ್ಯಾಮರಾದಲ್ಲಿ ಸೆರೆಯಾದ ಅದರ ಫೋಟೋ ಮತ್ತು ವಿಡಿಯೋಗಳು ತುಂಬ ಸುಂದರವಾಗಿಯೂ, ಭಯಹುಟ್ಟಿಸುವಂತೆಯೂ ಇದೆ. ಜಾರ್ನ್ ಸ್ಟೈನ್ಬೆಕ್​​ರವರು ಸೆರೆಹಿಡಿದ ವೈಮಾನಿಕ ವಿಡಿಯೋ, ಫೋಟೋಗಳನ್ನು ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Published On - 7:04 pm, Tue, 23 March 21