Afghanistan: ಅಫ್ಘಾನಿಸ್ತಾನದಲ್ಲಿ ಭೂಕಂಪ, ಕಾಬೂಲ್​ ಹಿಂದಿನ ಸರ್ಕಾರಕ್ಕಿಂತ ತಾಲೀಬಾನಿಗಳ ಕೈಯಲ್ಲಿ ಸುರಕ್ಷಿತವಾಗಿದೆ ಎಂದ ರಷ್ಯಾ!

| Updated By: ಸಾಧು ಶ್ರೀನಾಥ್​

Updated on: Aug 17, 2021 | 8:38 AM

Afghanistan: ಅಫ್ಘಾನಿಸ್ತಾನದಲ್ಲಿ ಭೂಕಂಪ, ತಾಲೀಬಾನಿಗಳ ಹಿಡಿತದಲ್ಲಿ ಕಾಬೂಲ್​ ನಗರ ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿದೆ ಎಂದ ರಷ್ಯಾ!

Afghanistan: ಅಫ್ಘಾನಿಸ್ತಾನದಲ್ಲಿ ಭೂಕಂಪ, ಕಾಬೂಲ್​ ಹಿಂದಿನ ಸರ್ಕಾರಕ್ಕಿಂತ ತಾಲೀಬಾನಿಗಳ ಕೈಯಲ್ಲಿ ಸುರಕ್ಷಿತವಾಗಿದೆ ಎಂದ ರಷ್ಯಾ!
ಅಫ್ಘಾನಿಸ್ತಾನದಲ್ಲಿ ಭೂಕಂಪ, ಕಾಬೂಲ್​ ಹಿಂದಿನ ಸರ್ಕಾರಕ್ಕಿಂತ ತಾಲೀಬಾನಿಗಳ ಕೈಯಲ್ಲಿ ಸುರಕ್ಷಿತವಾಗಿದೆ ಎಂದ ರಷ್ಯಾ!
Follow us on

ಕಾಬೂಲ್: ಮೊದಲೇ ಅರಾಜಕತೆಯಿಂದ ನೆಲ ಕಚ್ಚಿರುವ ಅಫ್ಘಾನಿಸ್ತಾನದ ಮೇಲೆ ಈಗ ಪ್ರಕೃತಿಯೂ ಮುನಿಸಿಕೊಂಡಂತಿದೆ. ಆಫ್ಘನ್​ ನೆಲೆಗಳು ಕಂಪಿಸತೊಡಗಿವೆ. ಅಫ್ಘಾನಿಸ್ತಾನದ ಫೈಜಾಬಾದ್‌ನಲ್ಲಿ (Fayzabad) ಲಘು ಭೂಕಂಪ (earthquake ) ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.5ರಷ್ಟು ದಾಖಲಾಗಿದೆ. ತಕ್ಷಣಕ್ಕೆ, ಯಾವುದೇ ಸಾವು ನೋವು ವರದಿಯಾಗಿಲ್ಲ.

ತಾಲೀಬಾನಿಗಳ ಹಿಡಿತದಲ್ಲಿ ಕಾಬೂಲ್​ ನಗರ ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿದೆ:
ಅಫ್ಘಾನಿಸ್ತಾನದ ಬಹುತೇಕ ಭೂಭಾಗಗಳಲ್ಲಿ ತಾಲೀಬಾನಿಗಳ ಆಟಾಟೋಪ ಮುಂದುವರಿದಿದೆ. ಬಹುತೇಕ ಜನರು ದಿಕ್ಕಾಪಾಲಗಿದ್ದು, ಮನೆಗಳಲ್ಲೇ ಉಳಿದಿರುವ ಮಂದಿ ರಕ್ಷಣೆಗಾಗಿ ಕಾದುಕುಳಿತಿದ್ದಾರೆ. ಆದರೆ ತಾಲೀಬಾನಿಗಳು ಅಫ್ಘಾನಿಸ್ತಾನವನ್ನು ತನ್ನ ಕಬ್ಜಾಗೆ ತೆಗೆದುಕೊಂಡು ಮೊದಲ 24 ಗಂಟೆಗಳು ಕಳೆದಿವೆ. ಈ ಅವಧಿಯಲ್ಲಿ, ಹಿಂದಿನ ಸರ್ಕಾರಕ್ಕಿಂತ ತಾಲೀಬಾನಿಗಳ ಕೈಯಲ್ಲಿ ಕಾಬೂಲ್​ ಸುರಕ್ಷಿತವಾಗಿದೆ ಎಂದು ರಷ್ಯಾ ಹೇಳಿದೆ.

ತಾಲೀಬಾನಿಗಳು (Taliban ) ಕಾಬೂಲ್​ ನಗರವನ್ನು ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿರಿಸಿದ್ದಾರೆ ಎಂದು ಅಫ್ಘಾನಿಸ್ತಾನದ ರಷ್ಯಾ ಅಂಬಾಸಿಡರ್​ ಮಿಟ್ರಿ ಝಿರನೋವ್ (Dmitry Zhirnov)​ ಹೇಳಿದ್ದಾರೆ.

ವಿದೇಶಾಂಗ ಸಚಿವ ಜೈಶಂಕರ್​ರಿಂದ ಭಾರತೀಯರಿಗೆ ಅಭಯ:
ಈ ಮಧ್ಯೆ, ಅಫ್ಘಾನಿಸ್ತಾನದಲ್ಲಿರುವ ಭಾರತೀಯರ ರಕ್ಷಣೆ ಮೊದಲ ಆದ್ಯತೆ, ಕಾಬೂಲ್‌ನಲ್ಲಿರುವ ಸಿಖ್ ಮುಖಂಡರು, ಹಿಂದೂ ಮುಖಂಡರ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಟ್ವೀಟ್ ಮಾಡಿ ಅಭಯ ನೀಡಿದ್ದಾರೆ.

ಇನ್ನು ನಿನ್ನೆ ಕಾಬೂಲ್​ನಲ್ಲಿ ಅಮೆರಿಕದ ಸೇನಾ ವಿಮಾನವೇರಿ ಪಲಾಯನಗೈಯಲು ಅಫ್ಘಾನಿಸ್ತಾನದ ಜನ ಹರಸಾಹಸ ಪಟ್ಟಿದ್ದಾರೆ. ಆ ವೇಳೆ ಸೇನೆ ವಿಮಾನದ ಒಳಗಿನ ದೃಶ್ಯ ಇಲ್ಲಿದೆ:


Afghanistan: ಅಫ್ಘಾನಿಸ್ತಾನದಲ್ಲಿ ಅಲ್ಲೋಲ ಕಲ್ಲೋಲ, ಕಾಬೂಲ್ ಏರ್‌ಪೋರ್ಟ್‌ ಬಳಿ ಫೈರಿಂಗ್, ವಿಮಾನಗಳ ಹಾರಾಟ ರದ್ದು

(Earthquake in Afghanistan Kabul safer in Taliban hands says Russia ambassador to Afghanistan)

Published On - 8:23 am, Tue, 17 August 21