ಪಾಕ್ ಸರ್ಕಾರ ದೇಶದ ಜನರಿಗೆ 24×7 ಅನಿಲ ಪೂರೈಕೆಯನ್ನು ನೀಡಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ (Pakistan) ಪೆಟ್ರೋಲಿಯಂ ರಾಜ್ಯ ಸಚಿವ ಮುಸಾದಿಕ್ ಮಲಿಕ್ (Musadik Malik )ಹೇಳಿದ್ದಾರೆ ಎಂದು ದಿ ನ್ಯೂಸ್ ಇಂಟರ್ನ್ಯಾಷನಲ್ ವರದಿ ಮಾಡಿದೆ. ಹದಗೆಡುತ್ತಿರುವ ಆರ್ಥಿಕ ಬಿಕ್ಕಟ್ಟಿನ (Economic Crisis) ನಡುವೆ ದಿನವೂ ಲೋಡ್-ಶೆಡ್ಡಿಂಗ್ ಇರುತ್ತದೆ. ನಮ್ಮ ನಿಕ್ಷೇಪಗಳು ಕುಸಿದಿರುವುದರಿಂದ ನಾವು 24 ಗಂಟೆಗಳ ಕಾಲ ಅನಿಲವನ್ನು ಒದಗಿಸಲು ಸಾಧ್ಯವಿಲ್ಲ. ಆದರೆ ಸೆಹ್ರಿ ಮತ್ತು ಇಫ್ತಾರ್ ಸಮಯದಲ್ಲಿ ಗ್ಯಾಸ್ ಲೋಡ್-ಶೆಡ್ಡಿಂಗ್ ಇರುವುದಿಲ್ಲ ಎಂದಿದ್ದಾರೆ. ಜನರು ಎದುರಿಸುತ್ತಿರುವ ಗ್ಯಾಸ್ ಪೂರೈಕೆ ಸಮಸ್ಯೆಯನ್ನು ಪರಿಹರಿಸಲು ಕರಾಚಿಗೆ ಭೇಟಿ ನೀಡುವುದಾಗಿ ಮುಸಾದಿಕ್ ಮಲಿಕ್ ಹೇಳಿದ್ದಾರೆ .ಶ್ರೀಮಂತರು ಮತ್ತು ಬಡವರ ಗ್ಯಾಸ್ ಬಿಲ್ ಅನ್ನು ಪ್ರತ್ಯೇಕಿಸಲಾಗಿದೆ. ಶ್ರೀಮಂತರು ಈಗ ಹೆಚ್ಚು ಪಾವತಿಸಬೇಕಾಗುತ್ತದೆ ಎಂದಿದ್ದಾರೆ ಸಚಿವರು.
ಈ ಹಿಂದೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಅನಿಲದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲಾಗುವುದು. ಯಾವುದೇ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ವರದಿ ತಿಳಿಸಿದೆ. ಸುಯಿ ಸದರ್ನ್ ಗ್ಯಾಸ್ ಕಂಪನಿ (ಎಸ್‌ಎಸ್‌ಜಿಸಿ) ಕಳೆದ ವಾರ ಕಡಿಮೆ ಅನಿಲ ಪೂರೈಕೆಯ ಮಧ್ಯೆ ವಿದ್ಯುತ್ ಸ್ಥಾವರಗಳು ಮತ್ತು ಕೈಗಾರಿಕೆಗಳಿಗೆ ಸರಬರಾಜನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿತು.
ಪೂರೈಕೆಯಲ್ಲಿನ ಕಡಿತದಿಂದಾಗಿ ಪೈಪ್‌ಲೈನ್‌ಗಳಲ್ಲಿನ ಅನಿಲದ ಪ್ರಮಾಣವು ಕಡಿಮೆಯಾಗಿದೆ. ಹಾಗಾಗಿ ಕರಾಚಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಕೆಸಿಸಿಐ) ಕರಾಚಿಯಲ್ಲಿ ಅನಿಲ ಪೂರೈಕೆಯ ಕೊರತೆಯ ಕುರಿತು ತಕ್ಷಣದ ಸರ್ಕಾರದ ಕ್ರಮಕ್ಕೆ ಕರೆ ನೀಡಿದೆ.
ಕೈಗಾರಿಕೆಗಳು ಅನಿಲವಿಲ್ಲದೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಮತ್ತು ಉತ್ಪಾದನೆಯನ್ನು ಸ್ಥಗಿತಗೊಳಿಸಲು ಒತ್ತಾಯಿಸಲಾಗುವುದು ಎಂದು ಕೆಸಿಸಿಐ ಹೇಳಿದೆ.
ಇದನ್ನೂ ಓದಿ: Dubai Bus Accident: ದುಬೈನಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯನಿಗೆ 11 ಕೋಟಿ ರೂ. ಪರಿಹಾರ
ಕರಾಚಿಯ ವ್ಯಾಪಾರ ಸಮುದಾಯದ ಬಗ್ಗೆ ಇಂತಹ ಧೋರಣೆ ಹೊಂದಿರುವುದು ಸರಿಯಲ್ಲ. ಇದು ಹಲವಾರು ವಿರೋಧಾಭಾಸಗಳು ಮತ್ತು ಸವಾಲುಗಳನ್ನು ಎದುರಿಸುತ್ತಿದ್ದರೂ, ರಫ್ತು ವಿಷಯದಲ್ಲಿ ಸುಮಾರು 54 ಪ್ರತಿಶತ ಮತ್ತು ಆದಾಯದ ವಿಷಯದಲ್ಲಿ ಶೇಕಡಾ 68 ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ” ಎಂದು ಕೆಸಿಸಿಐ ಅಧ್ಯಕ್ಷ ಮುಹಮ್ಮದ್ ತಾರಿಕ್ ಯೂಸುಫ್ ಹೇಳಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ