ಅಂತ್ಯಕ್ರಿಯೆಗೂ ಮುನ್ನ ಶವಪೆಟ್ಟಿಗೆಯಲ್ಲಿ ಎದ್ದು ಕುಳಿತಿದ್ದ ವೃದ್ಧೆ ಸಾವು

ಇನ್ನೇನು ಅಂತ್ಯಕ್ರಿಯೆ ನೆರವೇರಿಸಬೇಕು ಎನ್ನುವ ಸಮಯದಲ್ಲಿ ಶವಪೆಟ್ಟಿಗೆಯೊಳಗೆ ಎದ್ದು ಕುಳಿತಿದ್ದ ವೃದ್ಧೆ ವಾರದ ಬಳಿಕ ಇದೀಗ ಕೊನೆಯುಸಿರೆಳೆದಿದ್ದಾರೆ.

ಅಂತ್ಯಕ್ರಿಯೆಗೂ ಮುನ್ನ ಶವಪೆಟ್ಟಿಗೆಯಲ್ಲಿ ಎದ್ದು ಕುಳಿತಿದ್ದ ವೃದ್ಧೆ ಸಾವು
ಶವಪೆಟ್ಟಿಗೆ

Updated on: Jun 19, 2023 | 9:53 AM

ಇನ್ನೇನು ಅಂತ್ಯಕ್ರಿಯೆ ನೆರವೇರಿಸಬೇಕು ಎನ್ನುವ ಸಮಯದಲ್ಲಿ ಶವಪೆಟ್ಟಿಗೆಯೊಳಗೆ ಎದ್ದು ಕುಳಿತಿದ್ದ ವೃದ್ಧೆ ವಾರದ ಬಳಿಕ ಇದೀಗ ಕೊನೆಯುಸಿರೆಳೆದಿದ್ದಾರೆ. 76 ವರ್ಷದ ಬೆಲ್ಲಾ ಮೊಂಟೊಯಾ ಅವರು ಮೃತಪಟ್ಟಿದ್ದಾರೆಂದು ಘೋಷಿಸಲಾಗಿತ್ತು, ಅಂತ್ಯಕ್ರಿಯೆಯ ಸಮಯದಲ್ಲಿ ಶವಪೆಟ್ಟಿಗೆಯನ್ನು ಬಡಿದು ಕುಟುಂಬ ಸದಸ್ಯರನ್ನು ಅಚ್ಚರಿಗೊಳಿಸಿದರು.

ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಒಂದು ವಾರಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು ಈಗ ನಿಧನರಾಗಿದ್ದಾರೆ.

ಮತ್ತಷ್ಟು ಓದಿ: ಇಂದಿಗೂ ಕಾರ್ಯಾಚರಿಸುತ್ತಿವೆ ಹಾರಾಡುವ ಶವಪೆಟ್ಟಿಗೆಗಳ ಆಘಾತಕಾರಿ ಸತ್ಯ: ವೈಮಾನಿಕ ಉದ್ಯಮಕ್ಕೆ ಹೊಡೆತ ನೀಡುತ್ತಿರುವ ಹಳೆಯದಾದ ಮಿಗ್-21

ತೀವ್ರ ನಿಗಾ ಘಟಕದಲ್ಲಿರಿಸಿದಾಗಲೇ ಬೆಲ್ಲಾ ಅವರು ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ ಎಂದು ಈಕ್ವೆಡಾರ್​ನ ಆರೋಗ್ಯ ಸಚಿವಾಲಯ ತಿಳಿಸಿದೆ.

ಬೆಲ್ಲಾ ಅವರು ಕ್ಯಾಟಲೆಪ್ಸಿ ಎಂಬ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಜೂನ್ 9 ರಂದು ಅವರು ಮೃತಪಟ್ಟಿದ್ದಾರೆ ಎಂದು ಭಾವಿಸಿ ಶವಪೆಟ್ಟಿಗೆಯಲ್ಲಿರಿಸಲಾಗಿತ್ತು. ಇನ್ನೇನು ಅಂತ್ಯಕ್ರಿಯೆ ಮಾಡಬೇಕು ಎನ್ನುವಷ್ಟರಲ್ಲಿ ಶವಪೆಟ್ಟಿಗೆಯನ್ನು ಬಡಿದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:53 am, Mon, 19 June 23