ಬಂಧೂಕುಧಾರಿಗಳು ಏಕಾಏಕಿ ಟಿವಿ ಸ್ಟುಡಿಯೋದೊಳಗೆ ನುಗ್ಗಿ, ಸಿಬ್ಬಂದಿಯನ್ನು ಬೆದರಿಸಿರುವ ಘಟನೆ ಈಕ್ವೇಡರ್ನಲ್ಲಿ ನಡೆದಿದೆ. ಕೆಲವು ಮುಸುಕುಧಾರಿ ಬಂದೂಕುಧಾರಿಗಳು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದ್ದಾರೆ. ವ್ಯಕ್ತಿಯೊಬ್ಬರು ಕೈಮುಗಿದು ಅವರಿಗೆ ಏನೋ ಹೇಳುತ್ತಿರುವುದನ್ನು ಕಾಣಬಹುದು.
ಸುದ್ದಿ ಸಂಸ್ಥೆ AFP ಪ್ರಕಾರ, ಈ ಘಟನೆ ಮಂಗಳವಾರ (ಜನವರಿ 9) ನಡೆದಿದೆ. ಅಲ್ಲಿ ಹಲವಾರು ಪತ್ರಕರ್ತರು ಮತ್ತು ಸಿಬ್ಬಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಳ್ಳಲಾಗಿದೆ ಇಡೀ ಘಟನೆಯು ಚಾನೆಲ್ನ ಲೈವ್ನಲ್ಲಿ ಪ್ರಸಾರವಾಗುತ್ತಿತ್ತು.
ಪ್ರಬಲ ಗ್ಯಾಂಗ್ ನಾಯಕನೊಬ್ಬ ಜೈಲಿನಿಂದ ತಪ್ಪಿಸಿಕೊಂಡಿದ್ದು ಸರ್ಕಾರವು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದೆ.
ರ್ಕಾರ ತುರ್ತುಪರಿಸ್ಥಿತಿ ಹೇರಿದ ನಂತರ ದೇಶವು ಸರಣಿ ದಾಳಿಗೆ ತುತ್ತಾಗುತ್ತಿದೆ. ಇತರ ವರದಿಗಳಲ್ಲಿ, ಅತ್ಯಂತ ಅಪಾಯಕಾರಿ ಡ್ರಗ್ ಲಾರ್ಡ್ ಜೋಸ್ ಅಡಾಲ್ಫೊ ಮಾಕಿಯಾಸ್ (ಫಿಟೊ ಎಂದೂ ಕರೆಯುತ್ತಾರೆ) ಜೈಲಿನಿಂದ ತಪ್ಪಿಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
ಮತ್ತಷ್ಟು ಓದಿ:Gangster Tillu Tajpuriya Murder: ತಿಹಾರ್ ಜೈಲಿನಲ್ಲಿ ಗ್ಯಾಂಗ್ಸ್ಟರ್ ತಿಲ್ಲು ತಾಜ್ಪುರಿಯಾ ಹತ್ಯೆ
ಸಿಗ್ನಲ್ ಕಡಿತಗೊಳ್ಳುವ ಮೊದಲು ಚಾನಲ್ ಕನಿಷ್ಠ 15 ನಿಮಿಷಗಳ ಕಾಲ ನೇರ ಪ್ರಸಾರ ಮಾಡಿದೆ. ಗುಂಡು ಹಾರಿಸಬೇಡಿ ಎನ್ನುವ ಕೂಗು, ನೆಲದ ಮೇಲೆ ಬಿದ್ದಿರುವ ಸಿಬ್ಬಂದಿ ಎಲ್ಲವೂ ಲೈವ್ನಲ್ಲಿ ಪ್ರಸಾರವಾಗಿದೆ.
BREAKING: Gunmen storm TV channel in Ecuador, take hostages pic.twitter.com/UYQrYoOBcC
— BNO News (@BNONews) January 9, 2024
ಈಗಾಗಲೇ ಪೊಲೀಸರು 13 ಮಂದಿಯನ್ನು ಬಂಧಿಸಿದ್ದಾರೆ, ಎರಡು ಸಿಬ್ಬಂದಿ ಗಾಯಗೊಂಡಿದ್ದಾರೆ. ಅಧ್ಯಕ್ಷ 60 ದಿನಗಳ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.ಜೈಲುಗಳಲ್ಲಿ ಸೇರಿದಂತೆ ಮಿಲಿಟರಿ ಗಸ್ತುಗಳನ್ನು ಸಕ್ರಿಯಗೊಳಿಸಲಾಗಿದೆ. ಕ್ರಿಮಿನಲ್ ಗ್ಯಾಂಗ್ನ ನಾಯಕ ಅಡಾಲ್ಪೊ ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳಾಗಿರಿಸಿಕೊಂಡು ಜೈಲಿನಿಂದ ಓಡಿ ಹೋಗಿದ್ದ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ