ಲಂಡನ್: ಅಂತಾರಾಷ್ಟ್ರೀಯ ವರದಿಗಾರಿಕೆಯಲ್ಲಿ ಅತ್ಯುನ್ನತ ವೃತ್ತಿಪರತೆ ಸಾಧಿಸಿ ತೋರಿಸಿರುವ ತಮಿಳು ಮೂಲದ ಮೇಘಾ ರಾಜಗೋಪಾಲನ್ ಗ್ರಂಥಿಗೆ ಈ ಬಾರಿಯ ಪುಲಿಟ್ಜರ್ ಪ್ರಶಸ್ತಿ (Pulitzer prize 2021 ) ದಕ್ಕಿದೆ. ಮೇಘಾ ರಾಜಗೋಪಾಲನ್ (Megha Rajagopalan GRANTEE) ಪ್ರಸ್ತುತ ಲಂಡನ್ನಲ್ಲಿ ನೆಲೆಸಿದ್ದು, ಬಜ್ಫೀಡ್ ನ್ಯೂಸ್ (BuzzFeed News) ಸುದ್ದಿ ಸಂಸ್ಥೆಯಲ್ಲಿ ವರದಿಗಾರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚೀನಾ, ಥಾಯ್ಲೆಂಡ್, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಪ್ರಾಂತ್ಯಗಳಲ್ಲಿಯೂ ಮೇಘಾ, ಈ ಹಿಂದೆ ಬಜ್ಫೀಡ್ ನ್ಯೂಸ್ ಸಂಸ್ಥೆಗಾಗಿ ಸೇವೆ ಸಲ್ಲಿಸಿದ್ದಾರೆ. ಅದಕ್ಕೂ ಮೊದಲು ಚೀನಾದಲ್ಲಿ ರಾಯ್ಟರ್ಸ್ ಸುದ್ದಿ ಸಂಸ್ಥೆಗಾಗಿ ರಾಜಕೀಯ ವರದಿಗಾರರಾಗಿ ದುಡಿದಿದ್ದಾರೆ.
ಏಷ್ಯಾ ಮತ್ತು ಮಧ್ಯ ಪ್ರಾಚ್ಯದ 23 ರಾಷ್ಟ್ರಗಳಲ್ಲಿ ಮೇಘಾ ರಾಜಗೋಪಾಲನ್ ಗ್ರಂಥಿ ಉತ್ತರ ಕೊರಿಯಾದ ಅಣು ಬಿಕ್ಕಟ್ಟು, ಅಫಘಾನಿಸ್ತಾನದಲ್ಲಿನ ಶಾಂತಿ ಪ್ರಕ್ರಿಯೆ ಸೇರಿದಂತೆ ಅನೇಕ ಪ್ರಮುಖ ವಿಷಯಗಳ ಬಗ್ಗೆ ವರದಿ ಮಾಡಿದ್ದಾರೆ. ಚೀನಾದ ಪಶ್ಚಿಮ ತುದಿಯಲ್ಲಿರುವ ಉಘುರ್ ಮುಸಲ್ಮಾನರ ತಡೆ ಶಿಬಿರಗಳಿಗೆ (internment camp) ಭೇಟಿ ನೀಡಿದ ಮೊದಲ ಪತ್ರಕರ್ತೆ ಮೇಘಾ ರಾಜಗೋಪಾಲನ್. ಅದಕ್ಕಾಗಿ ಅವರಿಗೆ 2018ನೇ ಸಾಲಿನ ಮಾನವ ಹಕ್ಕುಗಳ ಮಾಧ್ಯಮ ಪ್ರಶಸ್ತಿ ನೀಡಲಾಯಿತು.
ಇನ್ನು, ಫೇಸ್ಬುಕ್ ಮತ್ತು ಶ್ರೀಲಂಕಾದ ಧಾರ್ಮಿಕ ಹಿಂಸಾಚಾರ ನಡುವಣ ಸಂಪರ್ಕಗಳನ್ನು ಪತ್ತೆ ಹಚ್ಚಿದ ತನಿಖಾ ಪತ್ರಿಕೋದ್ಯಮಿ ಮೇಘಾ ರಾಜಗೋಪಾಲನ್. 2019ರಲ್ಲಿ ಅವರಿಗೆ ಮಿರರ್ ಅವಾರ್ಡ್ನಿಂದ ಗೌರವಿಸಲಾಯಿತು. ಬೀಜಿಂಗ್ನಲ್ಲಿ ಫುಲ್ಬ್ರೈಟ್ ಫೆಲೋ ಆಗಿದ್ದ ಮೇಘಾ ರಾಜಗೋಪಾಲನ್ ವಾಷಿಂಗ್ಟನ್ ಡಿಸಿಯಲ್ಲಿ ರೀಸರ್ಚ್ ಫೆಲೋ ಆಗಿದ್ದರು. ತಮಿಳು ಮತ್ತು ಮ್ಯಾಂಡರಿನ್ (Mandarin Chinese) ಚೀನೀ ಭಾಷೆಗಳನ್ನು ಅವರು ಕರಗತ ಮಾಡಿಕೊಂಡಿದ್ದಾರೆ. ಬಜ್ಫೀಡ್ ನ್ಯೂಸ್ ಸುದ್ದಿ ಸಂಸ್ಥೆಯ ಇನ್ನೂ ಇಬ್ಬರ ಜೊತೆ ಮೇಘಾ ರಾಜಗೋಪಾಲನ್ ಈ ಬಾರಿಯ ಪುಲಿಟ್ಜರ್ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.
Congratulations to @meghara, @alisonkilling and Christo Buschek of @BuzzFeedNews. #Pulitzer pic.twitter.com/oXKPxCAvn4
— The Pulitzer Prizes (@PulitzerPrizes) June 11, 2021
(Excellent journalism Megha Rajagopalan Grantee of BuzzFeed News based in London awarded the 2021 pulitzer prize in international reporting)
Puri Rath Yatra 2021: ಕೊರೊನಾದ್ದೇ ಪ್ರತಾಪ… ಪುರಿ ಜಗನ್ನಾಥ ರಥ ಯಾತ್ರೆ ಈ ಬಾರಿಯೂ ಭಕ್ತರಿಲ್ಲದೆ ಭಣಗುಡಲಿದೆ!
Published On - 10:15 am, Sat, 12 June 21