ದೆಹಲಿ ಜುಲೈ 29: ತನ್ನ ಫೇಸ್‌ಬುಕ್ (Facebook) ಸ್ನೇಹಿತ ನಸ್ರುಲ್ಲಾನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ(Pakistan) ತೆರಳಿದ ಭಾರತೀಯ ಮಹಿಳೆ ಅಂಜು(Anju). ಈಕೆ ತನ್ನ ಪತಿ ಅರವಿಂದ್ ಕುಮಾರ್ ಅವರನ್ನು ಅಲ್ವಾರ್‌ನಲ್ಲಿ ಬಿಟ್ಟು ಪಾಕಿಸ್ತಾನಿಯನ್ನು ಮದುವೆಯಾಗಿದ್ದಾಳೆ. ಹೀಗೆ ಪಾಕಿಸ್ತಾನಕ್ಕೆ ಬಂದು ಮತಾಂತರಗೊಂಡ ಈಕೆಗೆ, ಪಾಕ್ ಸ್ಟಾರ್ ಗ್ರೂಪ್ ಆಫ್ ಕಂಪನಿಗಳ ಸಿಇಒ ಮೊಹ್ಸಿನ್ ಖಾನ್ ಅಬ್ಬಾಸಿ ಅವರು 10 ಮಾರ್ಲಾ ವಸತಿ ಭೂಮಿ, 50,000 ಪಿಕೆಆರ್ ಚೆಕ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಉಡುಗೊರೆಗಳು ಈಗ ಫಾತಿಮಾ ಆಗಿ ಮತಾಂತರಗೊಂಡಿರುವ ಅಂಜುಗೆ ಪಾಕಿಸ್ತಾನ ತಮ್ಮದೇ ಮನೆ ಎಂಬಂತೆ ಭಾಸವಾಗುವಂತೆ ಮಾಡುತ್ತದೆ ಎಂದು ಖಾನ್ ಹೇಳಿದ್ದಾರೆ. ಮೊಹ್ಸಿನ್ ಖಾನ್ ಅಬ್ಬಾಸಿ ಅವರು ಅಂಜು ಮತ್ತು ನಸ್ರುಲ್ಲಾ ಅವರೊಂದಿಗೆ ಸಂವಾದ ನಡೆಸಿ ನಂತರ ಉಡುಗೊರೆಗಳ ಕುರಿತು ಹೇಳಿಕೆ ನೀಡುವ ವಿಡಿಯೊ ವೈರಲ್ ಆಗಿದೆ.
ಅಂಜು ಭಾರತದಿಂದ ಇಲ್ಲಿಗೆ ಬಂದು ಇಸ್ಲಾಂಗೆ ಮತಾಂತರಗೊಂಡಿದ್ದಾಳೆ. ಆದ್ದರಿಂದ ಈ ಉಡುಗೊರೆಗಳು ಅವಳನ್ನು ಸ್ವಾಗತಿಸಲು ಅಭಿನಂದನೆ ಸಲ್ಲಿಸಲು ಕೊಡುತ್ತಿದ್ದೇವೆ. ಇದು ಅವಳನ್ನು ಪ್ರಶಂಸಿಸಲು ಒಂದು ಸಣ್ಣ ಪ್ರಯತ್ನವಾಗಿದೆ ಎಂದು ಮೊಹ್ಸಿನ್ ಖಾನ್ ಅಬ್ಬಾಸಿ ಹೇಳಿದ್ದಾರೆ.
Anju received 10 Marla housing land,cheque of 50K, & other Gifts, given by Islamabad Based businessman & CEO of Pak Star Group of Companies Mohsin Khan Abbasi. CEO PSG said that, #Anju has converted to Islam and married Nasrullah,so we are welcoming her. #AnjuNasrullahLoveStory pic.twitter.com/22j5CWM9LC
— Ghulam Abbas Shah (@ghulamabbasshah) July 29, 2023
ಇನ್ನೊಂದು ವಿಷಯವೆಂದರೆ ಯಾರಾದರೂ ಇಲ್ಲಿಗೆ ಬಂದಾಗ ಅವರಿಗೆ ಎದುರಾಗುವ ಮುಖ್ಯ ಸಮಸ್ಯೆ ವಸತಿ. ನಮ್ಮಲ್ಲಿ ಪ್ರಾಜೆಕ್ಟ್ ಚಾಲನೆಯಲ್ಲಿರುವ ಕಾರಣ, ನಾವು ಅವರಿಗೆ ಇಲ್ಲಿ ಅವಕಾಶ ಕಲ್ಪಿಸಬಹುದು ಎಂದು ನಾವು ಭಾವಿಸಿದ್ದೇವೆ. ನಮ್ಮ ಆಡಳಿತ ಮಂಡಳಿ ಅದನ್ನು ಅನುಮೋದಿಸಿದೆ. ನಾವು ಅವಳ ಹೆಸರಿಗೆ ಜಮೀನು ನೀಡಿದ್ದೇವೆ. ಇಸ್ಲಾಂಗೆ ಮತಾಂತರಗೊಂಡ ನಂತರ ಅವಳು ಯಾವುದೇ ತೊಂದರೆ ಎದುರಿಸಲಿಲ್ಲ ಎಂದು ಅವಳು ಭಾವಿಸದಿರಲು ಹೀಗೆ ಮಾಡಿದ್ದು. ಉಳಿದವು ಎಲ್ಲಾ ಸಣ್ಣ ಉಡುಗೊರೆಗಳಾಗಿವೆ. ಇದರಿಂದ ಅವಳು ಇದನ್ನು ತನ್ನ ಮನೆಯನ್ನಾಗಿ ಮಾಡಿಕೊಳ್ಳಬಹುದು ಎಂದು ಮೊಹ್ಸಿನ್ ಖಾನ್ ಅಬ್ಬಾಸಿ ಹೇಳಿದರು.
ಇದನ್ನೂ ಓದಿ: ಪಾಸ್ಪೋರ್ಟ್, ವೀಸಾ ದಾಖಲೆಗಳಿಲ್ಲದೆ ಪಾಕಿಸ್ತಾನದಲ್ಲಿರುವ ಪ್ರಿಯಕರನ ಭೇಟಿಗಾಗಿ ಹೊರಟ ಬಾಲಕಿ ಜೈಪುರದಲ್ಲಿ ಪೊಲೀಸರ ವಶಕ್ಕೆ
ಅಂಜು ಅವರ ಪತಿ ಅರವಿಂದ್ ಕುಮಾರ್ ಅವರು ಅಂಜು ಯಾರನ್ನೂ ಮದುವೆಯಾಗಲು ಸಾಧ್ಯವಿಲ್ಲ, ಏಕೆಂದರೆ ಅವಳು ಇನ್ನೂ ತನ್ನ ಹೆಂಡತಿಯಾಗಿದ್ದಾಳೆ ಎಂದಿದ್ದಾರೆ. 2007 ರಲ್ಲಿ ವಿವಾಹವಾದ ದಂಪತಿಗೆ ಮಗಳಿದ್ದಾಳೆ. ಜುಲೈ 20 ರಂದು ಅಂಜು ತನ್ನ ಸ್ನೇಹಿತರನ್ನು ಭೇಟಿಯಾಗಲು ಜೈಪುರಕ್ಕೆ ಹೋಗುವುದಾಗಿ ಹೇಳಿದ್ದರು. ಆಗ ಆಕೆ ವಾಘಾ ಮೂಲಕ ಗಡಿ ದಾಟಿ ಪಾಕಿಸ್ತಾನದಲ್ಲಿದ್ದಾಳೆ ಎಂದು ಮನೆಯವರಿಗೆ ಗೊತ್ತಾಯಿತು. ನಂತರ ನಸ್ರುಲ್ಲಾ ಅವರೊಂದಿಗಿನ ವಿವಾಹದ ಸುದ್ದಿ ಮಾಧ್ಯಮ, ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತು.
ತಾನು ಮೂರು ವರ್ಷಗಳ ಹಿಂದೆ ದೆಹಲಿಯಲ್ಲಿ ವಿಚ್ಛೇದನದ ಪತ್ರವನ್ನು ಸಲ್ಲಿಸಿದ್ದೇನೆ ಎಂದು ಅಂಜು ಹೇಳಿಕೊಂಡಿದ್ದಾಳೆ ಆದರೆ ತನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಅರವಿಂದ್ ಹೇಳಿದರು. 34 ವರ್ಷದ ಅಂಜು ತನಗಿಂತ ಐದು ವರ್ಷ ಕಿರಿಯ ನಸ್ರುಲ್ಲಾ ಜತೆ 2019 ರಲ್ಲಿ ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗಿದ್ದಾರೆ. ಜುಲೈ 22 ರಂದು, ಅಂಜು ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಬಂದಿದ್ದು, ನಸ್ರುಲ್ಲಾ ಆಕೆಯನ್ನು ರಾವಲ್ಪಿಂಡಿಯಲ್ಲಿ ಬರಮಾಡಿಕೊಂಡರು. ಅವರು ಮಾನ್ಯವಾದ 30 ದಿನಗಳ ವೀಸಾದಲ್ಲಿ ಪ್ರಯಾಣಿಸಿದರು. ಅಂಜು ತನ್ನ ವೀಸಾ ಅವಧಿ ಮುಗಿದ ನಂತರ ಭಾರತಕ್ಕೆ ಹಿಂತಿರುಗುವುದಾಗಿ ನಸ್ರುಲ್ಲಾ ಈ ಹಿಂದೆ ಹೇಳಿಕೊಂಡಿದ್ದರು. ಆದರೆ ನಂತರ ಅವರು ವಿವಾಹವಾದರು. ಈಗ ಅಂಜು ಮತಾಂತರಗೊಂಡು ಫಾತಿಮಾ ಆಗಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:00 pm, Sat, 29 July 23