AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರು ಮಾರಾಟ ಮಾಡಿ ಕೇವಲ 24 ಗಂಟೆಯೊಳಗೆ ಅದೇ ಕಾರು ಕದ್ದು ಮತ್ತೆ ಮಾರಾಟ ಮಾಡುತ್ತಿದ್ದ ವ್ಯಕ್ತಿ ಸೆರೆ

ಕಾನ್ಸಾಸ್‌ನಲ್ಲಿ ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಕಾರು ಮಾರಾಟ ಮಾಡಿ, 24 ಗಂಟೆಯೊಳಗೆ ಕದ್ದು ಮತ್ತೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಾಮಡೌ ಡಿಯಲ್ಲೋ ಎಂಬಾತ ಒಂದೇ ಕಾರನ್ನು 8 ಬಾರಿ ಮಾರಾಟ ಮಾಡಿ ವಂಚಿಸಿದ್ದಾನೆ. ನಕಲಿ ದಾಖಲೆಗಳನ್ನು ಬಳಸಿ ಖರೀದಿದಾರರನ್ನು ವಂಚಿಸಿ, ಹಣ ಹಾಗೂ ಕಾರು ಎರಡನ್ನೂ ಕಳೆದುಕೊಳ್ಳುವಂತೆ ಮಾಡಿದ್ದಾನೆ. ಈ ವಂಚಕನಿಗೆ 98 ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.

ಕಾರು ಮಾರಾಟ ಮಾಡಿ ಕೇವಲ 24 ಗಂಟೆಯೊಳಗೆ ಅದೇ ಕಾರು ಕದ್ದು ಮತ್ತೆ ಮಾರಾಟ ಮಾಡುತ್ತಿದ್ದ ವ್ಯಕ್ತಿ ಸೆರೆ
ಕ್ರೈಂ
ನಯನಾ ರಾಜೀವ್
|

Updated on: Jan 23, 2026 | 9:47 AM

Share

ಕಾನ್ಸಾಸ್, ಜನವರಿ 23: ವ್ಯಕ್ತಿಯೊಬ್ಬ ಫೇಸ್​ಬುಕ್​ನಲ್ಲಿ ಕಾರು(Car) ಮಾರಾಟ ಮಾಡಿ ಅದೇ ದಿನ ಆ ಕಾರನ್ನು ಕದಿಯುತ್ತಿದ್ದ ಕಳ್ಳನನ್ನು ಕಾನ್ಸಾಸ್ ನಗರದ ಸೆರೆಹಿಡಿಯಲಾಗಿದೆ. ಆ ವ್ಯಕ್ತಿ ಇಲ್ಲಿಯವರೆಗೆ ಒಂದೇ ಕಾರನ್ನು 8 ಬಾರಿ ಮಾರಾಟ ಮಾಡಿದ್ದಾನೆ. ಈ ಹಗರಣದಲ್ಲಿ ವಾಹನಗಳನ್ನು ಬಹು ಖರೀದಿದಾರರಿಗೆ ಮಾರಾಟ ಮಾಡಿ ಒಂದು ದಿನದೊಳಗೆ ಕದಿಯಲಾಗುತ್ತಿತ್ತು. ಒಪ್ಪಂದಗಳನ್ನು ಕಾನೂನುಬದ್ಧವಾಗಿ ಕಾಣುವಂತೆ ಮಾಡಲು ನಕಲಿ ದಾಖಲೆಗಳನ್ನು ಬಳಸಿದ್ದ. ಮಮಡೌ ಡಿಯಲ್ಲೋ ಎಂಬಾತನೇ ಹೀಗೆ ಕಾರುಗಳನ್ನು ಮಾರಾಟ ಮಾಡಿ ಕದಿಯುತ್ತಿದ್ದ ವ್ಯಕ್ತಿ.

ಕಾರನ್ನು ಕೊಡುವ ಮೊದಲು ಸಾವಿರಾರು ಡಾಲರ್​ಗಳನ್ನು ತನ್ನ ಅಕೌಂಟ್​ಗೆ ಹಾಕಿಸಿಕೊಳ್ಳುತ್ತಿದ್ದ, ಬಳಿಕ ಮಾರಾಟ ಮಾಡಿ, 24 ಗಂಟೆಯೊಳಗೆ ಅದನ್ನು ಕದಿಯುತ್ತಿದ್ದ. ಕೆಲವಂತೂ 24 ಗಂಟೆಯಲ್ಲಿ 7-8 ಗಂಟೆಗಳಲ್ಲಿ ಕದಿಯುತ್ತಿದ್ದ. ಆರೋಪಿ ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಕಾರುಗಳನ್ನು ಮಾರಾಟ ಮಾಡುತ್ತಿದ್ದ ಮತ್ತು ವಹಿವಾಟುಗಳನ್ನು ಪೂರ್ಣಗೊಳಿಸಲು ಖರೀದಿದಾರರನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದ.

ಮಾರಾಟದ ಬಿಲ್‌ಗಳನ್ನು ಒಳಗೊಂಡಿರುವ ದಾಖಲೆಗಳನ್ನು ನೀಡಿದ ನಂತರ ಖರೀದಿದಾರರು ಕಾನೂನುಬದ್ಧವಾಗಿ ಒಡೆತನದ ವಾಹನಗಳನ್ನು ಖರೀದಿಸುತ್ತಿದ್ದೇವೆ ಎಂದು ನಂಬಿಕೊಂಡಿದ್ದರು. ಖರೀದಿಸಿ ಒಂದು ದಿನದೊಳಗೆ ಮಾರಾಟ ಮಾಡುವುದರಿಂದ ಹೊಸ ಮಾಲೀಕರಿಗೆ ಇತ್ತ ಹಣವೂ ಇಲ್ಲ ಅತ್ತ ಕಾರೂ ಇಲ್ಲದಂತಾಗಿತ್ತು. ಎಲ್ಲಾ ಆರೋಪಗಳಲ್ಲೂ ಶಿಕ್ಷೆ ವಿಧಿಸಿದರೆ, ಅವನಿಗೆ 98 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.

ಮತ್ತಷ್ಟು ಓದಿ: ವೇಗವಾಗಿ ಬಂದು ಬೈಕ್​​ಗೆ ಗುದ್ದಿದ ಕಾರು: 10 ಅಡಿ ಎತ್ತರಕ್ಕೆ ಹಾರಿಬಿದ್ದ ಸವಾರ

ಒಂದೇ ರೀತಿ ಒಂದೇ ಕಾರನ್ನು 8 ಬಾರಿ ಮಾರಾಟ ಮಾಡಿದ ಈತನ ಬುದ್ಧಿವಂತಿಕೆ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಅನೇಕರು ಆತ ಒಂದೇ ಕಾರನ್ನು ಇಷ್ಟು ಸುಲಭವಾಗಿ ಮಾರಾಟ ಮಾಡಲು ಹೇಗೆ ಸಾಧ್ಯವಾಗಿದೆ ಎನ್ನುವ ಪ್ರಶ್ನೆ ಕೇಳುತ್ತಿದ್ದಾರೆ.

ಖರೀದಿದಾರರಿಗೆ 2013 ರ ಬೂದು ಬಣ್ಣದ ಹೋಂಡಾ ಸಿವಿಕ್ ಅಥವಾ 2013 ರ ಕಂದು ಬಣ್ಣದ ಬ್ಯೂಕ್ ವೆರಾನೊವನ್ನು ಖರೀದಿಸುತ್ತಿದ್ದರು. ಆದರೆ ಅದೇ ವಾಹನವು ಶೀಘ್ರದಲ್ಲೇ ಮತ್ತೊಂದು ಮಾರಾಟ ಸೈಟ್‌ನಲ್ಲಿ ಕಾಣಿಸಿಕೊಳ್ಳುತ್ತಿತ್ತು. ವರದಿಯಾದ ಒಂದು ಪ್ರಕರಣದಲ್ಲಿ ಈ ವಂಚಕ ಕೇವಲ ಮಾರಾಟ ಮಾಡಿದ 7 ಗಂಟೆಯ ಒಳಗೆ ಕಾರನ್ನು ವಾಪಸ್ ಕದಿದ್ದ. ಮನೆಯ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆ ಆಗಿತ್ತು. ಹೀಗಾಗಿ ಡಿಯಲ್ಲೋ ವಿರುದ್ಧ ಈಗ 14 ಪ್ರಕರಣಗಳು ದಾಖಲಾಗಿವೆ. ಮೋಟಾರು ವಾಹನ ಕಾಯ್ದೆಯ ಹಲವು ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ.

ಈ ಎಲ್ಲಾ ಪ್ರಕರಣಗಳು 2025ರ ಮೇ ಹಾಗೂ ಜೂನ್ ತಿಂಗಳ ಸಮಯದಲ್ಲಿ ನಡೆದಿದೆ. ಕಾನ್ಸಾಸ್ ಸಿಟಿ ಪೊಲೀಸರು ಫೇಸ್‌ಬುಕ್ ಮಾರುಕಟ್ಟೆ ಖರೀದಿಗಳಿಗೆ ಸಂಬಂಧಿಸಿದಂತೆ ಹಲವಾರು ಕದ್ದ ವಾಹನ ವರದಿಗಳನ್ನು ಸ್ವೀಕರಿಸಿದ ನಂತರ ಈ ವಿಚಾರ ಬೆಳಕಿಗೆ ಬಂದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ