ಹಮಾಸ್ ವಿರುದ್ಧದ ಯುದ್ಧಕ್ಕೆ ಮಗ ಅವ್ನೆರ್​​ನ್ನು ಕಳಿಸಿದ್ದಾರೆಯೇ ಇಸ್ರೇಲ್ ಪ್ರಧಾನಿ ನೆತನ್ಯಾಹು?

|

Updated on: Oct 11, 2023 | 6:43 PM

Fact check:ವೈರಲ್ ಚಿತ್ರವನ್ನು ರಿವರ್ಸ್ ಇಮೇಜ್ ಚೆಕ್ ಮಾಡಿದಾಗ, 2014ರಲ್ಲಿ ಈ ಫೋಟೊವಿರುವ ಹಲವಾರು ವರದಿಗಳು ಸಿಕ್ಕಿವೆ. ಡಿಸೆಂಬರ್ 30, 2014 ರಂದು ಪ್ರಕಟವಾದ ದಿ ಜೆರುಸಲೆಮ್ ಪೋಸ್ಟ್‌ನಲ್ಲಿನ ವರದಿಯಲ್ಲಿಯೂ ಚಿತ್ರವನ್ನು ತೋರಿಸುತ್ತದೆ. ಸೇನಾ ತರಬೇತಿ ವೇಳೆ ನೆತನ್ಯಾಹು ಮಗ ಗಾಯಗೊಂಡಿದ್ದಾರೆ ಎಂದು ಈ ಸುದ್ದಿಗೆ ಶೀರ್ಷಿಕೆ ನೀಡಲಾಗಿದೆ.

ಹಮಾಸ್ ವಿರುದ್ಧದ ಯುದ್ಧಕ್ಕೆ ಮಗ ಅವ್ನೆರ್​​ನ್ನು ಕಳಿಸಿದ್ದಾರೆಯೇ ಇಸ್ರೇಲ್ ಪ್ರಧಾನಿ ನೆತನ್ಯಾಹು?
ಬೆಂಜಮಿನ್ ನೆತನ್ಯಾಹು ಮಗನ ಜತೆ
Follow us on

ದೆಹಲಿ ಅಕ್ಟೋಬರ್ 11: ಹಮಾಸ್ (Hamas)ವಿರುದ್ಧದ ಯುದ್ಧಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ತನ್ನ ಮಗ ಅವ್ನೆರ್​​ನ್ನು (Avner) ಕಳುಹಿಸಿದ್ದಾರೆ ಎಂಬ ಬರಹದೊಂದಿಗೆ ಫೋಟೊವೊಂದು ವೈರಲ್ ಆಗಿದೆ. ಆದಾಗ್ಯೂ ನೆತನ್ಯಾಹು ಮಗನ ಜತೆ ಇರುವ ಈ ಫೋಟೊ 2014ರದ್ದು, ಅದು ಯುದ್ಧಕ್ಕೆ ಕಳಿಸುವ ಫೋಟೊ ಅಲ್ಲ.

ಫ್ಯಾಕ್ಟ್ ಚೆಕ್

ನ್ಯೂಸ್‌ಚೆಕರ್ ವೈರಲ್ ಚಿತ್ರವನ್ನು ರಿವರ್ಸ್ ಇಮೇಜ್ ಚೆಕ್ ಮಾಡಿದಾಗ, 2014ರಲ್ಲಿ ಈ ಫೋಟೊವಿರುವ ಹಲವಾರು ವರದಿಗಳು ಸಿಕ್ಕಿವೆ.
ಡಿಸೆಂಬರ್ 30, 2014 ರಂದು ಪ್ರಕಟವಾದ ದಿ ಜೆರುಸಲೆಮ್ ಪೋಸ್ಟ್‌ನಲ್ಲಿನ ವರದಿಯಲ್ಲಿಯೂ ಚಿತ್ರವನ್ನು ತೋರಿಸುತ್ತದೆ. ಸೇನಾ ತರಬೇತಿ ವೇಳೆ ನೆತನ್ಯಾಹು ಮಗ ಗಾಯಗೊಂಡಿದ್ದಾರೆ ಎಂದು ಈ ಸುದ್ದಿಗೆ ಶೀರ್ಷಿಕೆ ನೀಡಲಾಗಿದೆ.

ನೆತನ್ಯಾಹು ಅವರ ಮಗ ಅವ್ನೆರ್ ಅವರನ್ನು ಡಿಸೆಂಬರ್ 2014 ರಲ್ಲಿ IDF ಗೆ ಸೇರ್ಪಡೆ ಮಾಡಲಾಗಿದ್ದು , ಪ್ರಧಾನಿ ಬೆಂಜಮಿನ್ ನೆತನ್ಯಾಹು ತನ್ನ ಮಗನನ್ನು ಸೈನ್ಯಕ್ಕೆ ಕಳುಹಿಸುತ್ತಿದ್ದಾರೆ ಎಂಬ ಶೀರ್ಷಿಕೆ ನೀಡಲಾಗಿದೆ.

ಡಿಸೆಂಬರ್ 1, 2014 ರಂದು ಪ್ರಕಟವಾದ ಟೈಮ್ಸ್ ಆಫ್ ಇಸ್ರೇಲ್ ವರದಿಯು ಅದೇ ಚಿತ್ರವನ್ನು ಹೊಂದಿದೆ. ಅದರ ಶೀರ್ಷಿಕೆಯು “ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅವರ ಪತ್ನಿ ಸಾರಾ, ತಮ್ಮ ಮಗ ಅವ್ನೆರ್ ಅವರೊಂದಿಗೆ ಡಿಸೆಂಬರ್ 01, 2014 ರಂದು ಜೆರುಸಲೆಮ್​​​ನ ಅಮ್ಯುನಿಷನ್ ಹಿಲ್​​​ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಇಸ್ರೇಲ್ ಯುದ್ಧದ ಬಗ್ಗೆ ಕಾಂಗ್ರೆಸ್ ಪಕ್ಷ ಹೇಳಿದ್ದೇನು? ಹೇಳಿಕೆಗೆ ಖಂಡನೆ ವ್ಯಕ್ತವಾಗುತ್ತಿರುವುದೇಕೆ?

ನೆತನ್ಯಾಹು ಅವರ ಮಗ ತನ್ನ ಹೆತ್ತವರೊಂದಿಗೆ ಸೈನ್ಯಕ್ಕೆ ಸೇರ್ಪಡೆಗೊಳ್ಳಲು ಆಗಮಿಸಿದ್ದಾನೆ ಎಂದು ವರದಿಯಲ್ಲಿದೆ.

ಹೀಗಾಗಿ, ನೆತನ್ಯಾಹು ತನ್ನ ಮಗನನ್ನು ಸೈನ್ಯಕ್ಕೆ ಕಳುಹಿಸುತ್ತಿರುವ ಚಿತ್ರವು ಇತ್ತೀಚಿನದಲ್ಲ.ಇದು 2014ದ್ದು ಎಂಬುದು ಸ್ಪಷ್ಟ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ