Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ರೇಲ್​ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಮುಂದಾದ ಭಾರತ ಸರ್ಕಾರ:‘ಆಪರೇಷನ್ ಅಜಯ್’ ಘೋಷಣೆ

ಇಸ್ರೇಲ್‌ನಿಂದ ಹಿಂದಿರುಗಲು ಬಯಸುವ ಭಾರತದ ನಾಗರಿಕರಿಗೆ  ಅನುಕೂಲವಾಗುವಂತೆ ‘ಆಪರೇಷನ್ ಅಜಯ್’  ಅನ್ನು ಪ್ರಾರಂಭಿಸಲಾಗುತ್ತಿದ್ದು, ವಿಶೇಷ ಚಾರ್ಟರ್ ವಿಮಾನಗಳು ಮತ್ತು ಇನ್ನಿತರ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಜೊತೆಗೆ ನಮ್ಮ ಪ್ರಜೆಗಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಸಂಪೂರ್ಣವಾಗಿ ಬದ್ಧವಾಗಿದೆ" ಎಂದು ಜೈಶಂಕರ್ ಅವರು ಟ್ವೀಟ್ ಮಾಡಿದ್ದಾರೆ.

ಇಸ್ರೇಲ್​ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಮುಂದಾದ ಭಾರತ ಸರ್ಕಾರ:‘ಆಪರೇಷನ್ ಅಜಯ್’ ಘೋಷಣೆ
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:Oct 11, 2023 | 10:58 PM

ನವದೆಹಲಿ, ಅ.11: ಇಸ್ರೇಲ್(Israel)​​, ಹಮಾಸ್(Hamas)ಬಂಡುಕೋರರ ನಡುವೆ ಯುದ್ಧ ಮುಂದುವರೆದಿದ್ದು, ಯುದ್ಧ ಪೀಡಿತ ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಆಪರೇಷನ್ ಅಜಯ್’ ಆರಂಭಿಸುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್(Jaishankar) ಬುಧವಾರ ಘೋಷಿಸಿದ್ದಾರೆ. ಇಸ್ರೇಲ್‌ನಿಂದ ಹಿಂದಿರುಗಲು ಬಯಸುವ ಭಾರತದ ನಾಗರಿಕರಿಗೆ  ಅನುಕೂಲವಾಗುವಂತೆ ‘ಆಪರೇಷನ್ ಅಜಯ್’  ಅನ್ನು ಪ್ರಾರಂಭಿಸಲಾಗುತ್ತಿದ್ದು, ವಿಶೇಷ ಚಾರ್ಟರ್ ವಿಮಾನಗಳು ಮತ್ತು ಇನ್ನಿತರ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಜೊತೆಗೆ ನಮ್ಮ ಪ್ರಜೆಗಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಸಂಪೂರ್ಣವಾಗಿ ಬದ್ಧವಾಗಿದೆ” ಎಂದು ಜೈಶಂಕರ್ ಅವರು ಟ್ವೀಟ್ ಮಾಡಿದ್ದಾರೆ.

ಇಸ್ರೇಲ್​ ಹಾಗೂ ಹಮಾಸ್ ಉಗ್ರಗಾಮಿಗಳ ಯುದ್ಧ ಮುಂದುವರೆದಿದೆ. ಈ ಹಿನ್ನಲೆ ಪ್ರತೀಕಾರ ತೀರಿಸಿಕೊಳ್ಳಲು ಇಸ್ರೇಲ್ ಬೃಹತ್ ಸೇನಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಪರಿಣಾಮ ಭಾರತೀಯ ಪ್ರಜೆಗಳ ಸುರಕ್ಷತೆಯ ಬಗ್ಗೆ ಇದೀಗ ಕಳವಳ ವ್ಯಕ್ತಪಡಿಸಲಾಗಿದ್ದು, ಇಸ್ರೇಲ್‌ನಲ್ಲಿ ನೆಲೆಸಿರುವ 18,000 ಭಾರತೀಯ ಪ್ರಜೆಗಳಲ್ಲಿ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಈ ಬಗ್ಗೆ ಇದುವರೆಗೆ ಯಾವುದೇ ಮನವಿಗಳು ಬಂದಿಲ್ಲವಾದ್ದರಿಂದ ನಾಗರಿಕರನ್ನು ಸ್ಥಳಾಂತರಿಸುವ ಯಾವುದೇ ಯೋಜನೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಭಾರತೀಯರಲ್ಲಿ ಸುಮಾರು 900 ಭಾರತೀಯ ವಿದ್ಯಾರ್ಥಿಗಳು, ಹಿರಿಯರ ಆರೈಕೆ ಮಾಡುವವರು, ವಜ್ರದ ವ್ಯಾಪಾರಿಗಳು ಸೇರಿದಂತೆ ಐಟಿ ವೃತ್ತಿಪರರು ಇದ್ದಾರೆ. ಇದೀಗ ಭಾರತ ಸರ್ಕಾರ ಅವರನ್ನು ಕರೆತರಲು ಆಪರೇಷನ್​ ಅಜಯ್​ ಅನ್ನು ಪ್ರಾರಂಭಿಸಿದೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:49 pm, Wed, 11 October 23

ಗುತ್ತಿಗೆದಾರರು ಈ ಸರ್ಕಾರವನ್ನೂ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ: ಸೋಮಣ್ಣ
ಗುತ್ತಿಗೆದಾರರು ಈ ಸರ್ಕಾರವನ್ನೂ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ: ಸೋಮಣ್ಣ
ಪುಣ್ಯಸ್ನಾನ ಮಾಡಿ ಸಂಗಮ ತೀರದಲ್ಲೇ ಬಟ್ಟೆ ಬಿಸಾಡಿ ಹೋಗುತ್ತಿರುವ ಜನ
ಪುಣ್ಯಸ್ನಾನ ಮಾಡಿ ಸಂಗಮ ತೀರದಲ್ಲೇ ಬಟ್ಟೆ ಬಿಸಾಡಿ ಹೋಗುತ್ತಿರುವ ಜನ
ಎಲೆಕೋಸು ಬೆಲೆ ದಿಢೀರ್​​ ಕುಸಿತ: ಕುರಿಗಳನ್ನ ಬಿಟ್ಟು ಬೆಳೆ ನಾಶ ಪಡಿಸಿದ ರೈತ
ಎಲೆಕೋಸು ಬೆಲೆ ದಿಢೀರ್​​ ಕುಸಿತ: ಕುರಿಗಳನ್ನ ಬಿಟ್ಟು ಬೆಳೆ ನಾಶ ಪಡಿಸಿದ ರೈತ
ಸಂಸದರಾಗಿ 50ನೇ ಬಾರಿಗೆ ವಾರಾಣಸಿಗೆ ಪ್ರಧಾನಿ ಮೋದಿ ಭೇಟಿ
ಸಂಸದರಾಗಿ 50ನೇ ಬಾರಿಗೆ ವಾರಾಣಸಿಗೆ ಪ್ರಧಾನಿ ಮೋದಿ ಭೇಟಿ
ಅಂಬೇಡ್ಕರ್ ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದು ನೆಹರೂ: ಕಾರಜೋಳ
ಅಂಬೇಡ್ಕರ್ ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದು ನೆಹರೂ: ಕಾರಜೋಳ
ಕರಡಿಗಳಲ್ಲಿ ಮಾನವರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ, ಕೆಲವೊಮ್ಮೆ ಮಾರಣಾಂತಿಕ
ಕರಡಿಗಳಲ್ಲಿ ಮಾನವರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ, ಕೆಲವೊಮ್ಮೆ ಮಾರಣಾಂತಿಕ
ಒಂದೇ ಸ್ಟ್ರಾಟಿಜಿ ಎಲ್ಲ ಪಂದ್ಯಗಳಿಗೆ ನಡೆಯಲ್ಲ, ಬದಲಾಯಿಸಬೇಕು: ಅಭಿಮಾನಿ
ಒಂದೇ ಸ್ಟ್ರಾಟಿಜಿ ಎಲ್ಲ ಪಂದ್ಯಗಳಿಗೆ ನಡೆಯಲ್ಲ, ಬದಲಾಯಿಸಬೇಕು: ಅಭಿಮಾನಿ
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!