ಇಸ್ರೇಲ್ನಲ್ಲಿ ಸಿಲುಕಿದ ಬಾಗಲಕೋಟೆ ಯುವತಿ: ಕುಟುಂಬಸ್ಥರಿಗೆ ಧೈರ್ಯ ತುಂಬಿದ ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರಿಂದ ಪೂಜಾ ತಾಯಿ ಅವರೊಂದಿಗೆ ಮಾತನಾಡಿಸಿದ್ದಾರೆ. 'ಪೂಜಾ ಅವರೊಂದಿಗೆ ಮಾತನಾಡಿದ್ದೇನೆ, ಅವರು ಸುರಕ್ಷಿತವಾಗಿದ್ದಾರೆ. ನೀವು ಯಾವುದೇ ಆತಂಕಕ್ಕೊಳಗಾಗಬೇಡಿ ಎಂದು ಹೇಳುವ ಮೂಲಕ ಪೂಜಾ ಕುಟುಂಬಸ್ಥರಿಗೆ ಸಿಎಂ ಧೈರ್ಯ ತುಂಬಿದ್ದಾರೆ.
ಬಾಗಲಕೋಟೆ, ಅ.11: ಇಸ್ರೇಲ್(Israel) ಹಾಗೂ ಪ್ಯಾಲೆಸ್ತೀನ್ ನಡುವೆ ಸಂಘರ್ಷ ನಡೆಯುತ್ತಿದ್ದು, ಈವರೆಗೂ 3 ಸಾವಿರಕ್ಕಿಂತ ಅಧಿಕ ಜನ ಸಾವನ್ನಪ್ಪಿದ್ದಾರೆ. ಈ ಸ್ಥಳದಲ್ಲಿ ಕರ್ನಾಟಕದ ಬಾಗಲಕೋಟೆ(Bagalakote) ಜಿಲ್ಲೆಯ ರಬಕವಿ ಪಟ್ಟಣದ ಸಾಪ್ಟವೇರ್ ಇಂಜಿನಿಯರ್ ಪೂಜಾ ಉಮದಿ ಕೂಡ ಇದ್ದು, ಇಂದು(ಅ.11) ಕರೆಯ ಮೂಲಕ ಯುವತಿಯ ಕುಟುಂಬಸ್ಥರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಧೈರ್ಯ ಹೇಳಿದ್ದಾರೆ. ಹೌದು, ಪೂಜಾ ಹಾಗೂ ಅವರ ಕುಟುಂಬಸ್ಥರೊಂದಿಗೆ ಸಚಿವ ಆರ್ ಬಿ ತಿಮ್ಮಾಪೂರ ಕೂಡ ಮಾತುಕತೆ ನಡೆಸಿದ್ದು, ಪೂಜಾ ಅವರೊಂದಿಗೆ ಅಲ್ಲಿನ ಪರಿಸ್ಥಿತಿ ಹಾಗೂ ಸುರಕ್ಷತೆ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಈ ಕುರಿತು ಪೂಜಾ ಕುಟುಂಬಸ್ಥರಿಗೆ ಧೈರ್ಯ ಹೇಳುವಂತೆ ಮುಖ್ಯಮಂತ್ರಿಗಳಿಗೆ ಸಚಿವ ಆರ್ ಬಿ ತಿಮ್ಮಾಪೂರ ಮನವಿ ಮಾಡಿದ್ದು, ಅದರಂತೆ ಮ್ಮ ಮೊಬೈಲ್ನಲ್ಲಿಯೇ ಕರೆ ಮಾಡಿಕೊಟ್ಟು, ಸಿದ್ದರಾಮಯ್ಯ ಅವರಿಂದ ಪೂಜಾ ತಾಯಿ ಅವರೊಂದಿಗೆ ಮಾತನಾಡಿಸಿದ್ದಾರೆ. ‘ಪೂಜಾ ಅವರೊಂದಿಗೆ ಮಾತನಾಡಿದ್ದೇನೆ, ಅವರು ಸುರಕ್ಷಿತವಾಗಿದ್ದಾರೆ. ನೀವು ಯಾವುದೇ ಆತಂಕಕ್ಕೊಳಗಾಗಬೇಡಿ ಎಂದು ಹೇಳುವ ಮೂಲಕ ಪೂಜಾ ಕುಟುಂಬಸ್ಥರಿಗೆ ಸಿಎಂ ಧೈರ್ಯ ತುಂಬಿದ್ದಾರೆ.
ಇದನ್ನೂ ಓದಿ:ಹಮಾಸ್ ಉಗ್ರರ ವಶದಿಂದ ಗಾಜಾ ಗಡಿಯನ್ನು ಹಿಂಪಡೆದ ಇಸ್ರೇಲ್, ಸಂಘರ್ಷದಲ್ಲಿ ಇಲ್ಲಿಯವರೆಗೆ 3 ಸಾವಿರಕ್ಕೂ ಅಧಿಕ ಮಂದಿ ಸಾವು
ಕಳೆದ ಮುಕ್ಕಾಲು ವರ್ಷದಿಂದ ಇಸ್ರೇಲ್ನಲ್ಲಿರುವ ಪೂಜಾ
ಇನ್ನು ಪೂಜಾ ಅವರು ಕಳೆದ ವರ್ಷದಿಂದ ಇಸ್ರೇಲ್ನಲ್ಲಿದ್ದು, ಖಾಸಗಿ ಕಂಪನಿಯಲ್ಲಿ ಸಾಪ್ಟವೇರ್ ಇಂಜಿನಿಯರ್ ಆಗಿದ್ದಾರೆ. ಈ ಘಟನೆಯಿಂದ ನಿನ್ನೆ(ಅ.10) ಆಕೆಯ ತಂದೆ-ತಾಯಿ ಆತಂಕ ವ್ಯಕ್ತಪಡಿಸಿದ್ದರು. ಇದರಿಂದ ಬಾಗಲಕೋಟೆ ಉಸ್ತುವಾರಿ ಸಚಿವ ತಿಮ್ಮಾಪುರ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಕರೆ ಮಾಡಿ ಧೈರ್ಯ ತುಂಬಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:08 pm, Wed, 11 October 23