AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಡೀ ಜಗತ್ತೇ ನಮ್ಮ ಕಾನೂನಿನ ಮುಷ್ಠಿಯಲ್ಲಿರಲಿದೆ: ಎಚ್ಚರಿಕೆ ನೀಡಿದ ಹಮಾಸ್ ಕಮಾಂಡರ್ ಅಲ್-ಜಹರ್

ಇಡೀ ಜಗತ್ತೇ ನಮ್ಮ ಕಾನೂನಿನ ಮುಷ್ಠಿಯಲ್ಲಿರಲಿದೆ ಎಂದು ಹಮಾಸ್ ಕಮಾಂಡರ್ ಮಹಮೂದ್ ಅಲ್-ಜಹರ್ ಎಚ್ಚರಿಕೆ ನೀಡಿದ್ದಾರೆ. ಇಸ್ರೇಲ್ ಮತ್ತು ಗಾಜಾ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಹಮಾಸ್ ಕಮಾಂಡರ್ ಮಹಮೂದ್ ಅಲ್-ಜಹರ್ ಅವರ ಈ ಹೇಳಿಕೆಯು ಕೇವಲ ಇಸ್ರೇಲ್ ಮಾತ್ರವಲ್ಲ ಜಗತ್ತಿನ ಇತರೆ ದೇಶಗಳನ್ನು ಕೂಡ ಕೆರಳಿಸಿದೆ. ಇಸ್ರೇಲ್ ಕೇವಲ ಆರಂಭವಷ್ಟೇ, ನಾವು ಇಡೀ ಪ್ರಪಂಚದಾದ್ಯಂತ ನಮ್ಮ ಪ್ರಭಾವವನ್ನು ಹೆಚ್ಚಿಸುತ್ತೇವೆ. ವಿಶ್ವದ 510 ಮಿಲಿಯನ್ ಚದರ ಕಿ.ಮೀ ಪ್ರದೇಶವು ನಮ್ಮ ಕಾನೂನಿನಡಿ ಬರಲಿದೆ ಎಂದು ಕಮಾಂಡರ್ ಹೇಳಿದ್ದಾರೆ.

ಇಡೀ ಜಗತ್ತೇ ನಮ್ಮ ಕಾನೂನಿನ ಮುಷ್ಠಿಯಲ್ಲಿರಲಿದೆ: ಎಚ್ಚರಿಕೆ ನೀಡಿದ ಹಮಾಸ್ ಕಮಾಂಡರ್ ಅಲ್-ಜಹರ್
ಅಲ್ ಜಹರ್
Follow us
ನಯನಾ ರಾಜೀವ್
|

Updated on: Oct 12, 2023 | 11:08 AM

ಇಡೀ ಜಗತ್ತೇ ನಮ್ಮ ಕಾನೂನಿನ ಮುಷ್ಠಿಯಲ್ಲಿರಲಿದೆ ಎಂದು ಹಮಾಸ್ ಕಮಾಂಡರ್ ಮಹಮೂದ್ ಅಲ್-ಜಹರ್ ಎಚ್ಚರಿಕೆ ನೀಡಿದ್ದಾರೆ. ಇಸ್ರೇಲ್(Israel) ಮತ್ತು ಗಾಜಾ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಹಮಾಸ್ ಕಮಾಂಡರ್ ಮಹಮೂದ್ ಅಲ್-ಜಹರ್ ಅವರ ಈ ಹೇಳಿಕೆಯು ಕೇವಲ ಇಸ್ರೇಲ್ ಮಾತ್ರವಲ್ಲ ಜಗತ್ತಿನ ಇತರೆ ದೇಶಗಳನ್ನು ಕೂಡ ಕೆರಳಿಸಿದೆ. ಇಸ್ರೇಲ್ ಕೇವಲ ಆರಂಭವಷ್ಟೇ, ನಾವು ಇಡೀ ಪ್ರಪಂಚದಾದ್ಯಂತ ನಮ್ಮ ಪ್ರಭಾವವನ್ನು ಹೆಚ್ಚಿಸುತ್ತೇವೆ. ವಿಶ್ವದ 510 ಮಿಲಿಯನ್ ಚದರ ಕಿ.ಮೀ ಪ್ರದೇಶವು ನಮ್ಮ ಕಾನೂನಿನಡಿ ಬರಲಿದೆ ಎಂದು ಕಮಾಂಡರ್ ಹೇಳಿದ್ದಾರೆ.

ಹಮಾಸ್ ಕಮಾಂಡರ್ ಜಹರ್ ವಿಡಿಯೋ ಬಹಿರಂಗವಾದ ಬಳಿಕ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ಹಮಾಸ್ ವಿರುದ್ಧದ ಹೋರಾಟವನ್ನು ಮುಂದುವರೆಸುವ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ.

ಗಾಜಾ ಪಟ್ಟಿಯಲ್ಲಿರುವ ಹಮಾಸ್ ಉಗ್ರರ ನೆಲೆ ಮೇಲೆ ಇಸ್ರೇಲ್ ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತಿದೆ. ಇಸ್ರೇಲ್ ಹಾಗೂ ಭಯೋತ್ಪಾದಕ ಸಂಘಟನೆ ಹಮಾಸ್ ನಡುವಿನ ಯುದ್ಧದಲ್ಲಿ 3 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ಇಸ್ರೇಲ್ ಹಮಾಸ್ ಉಗ್ರರ ವಾಸದಲ್ಲಿದ್ದ ಗಾಜಾ ಗಡಿಯನ್ನು ಹಿಂಪಡೆಯುವಲ್ಲಿ ಯಶಸ್ವಿಯಾಗಿದೆ. ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ಸಂಘರ್ಷದಲ್ಲಿ ಇದುವರೆಗೆ 3 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಸ್ರೇಲ್ ಸೇನೆ ಮತ್ತು ಉಗ್ರ ಸಂಘಟನೆ ಹಮಾಸ್ ನಡುವಿನ ಸಂಘರ್ಷ ಮುಂದುವರಿದಿದೆ. ಅಕ್ಟೋಬರ್ 7 ರಂದು ಹಮಾಸ್ ದಾಳಿಯ ನಂತರ, ಇಸ್ರೇಲಿ ಸೇನೆಯು ನಿರಂತರವಾಗಿ ಗಾಜಾ ಗಡಿಯಲ್ಲಿ ಬಾಂಬ್ ದಾಳಿ ನಡೆಸುತ್ತಿದೆ. ಏತನ್ಮಧ್ಯೆ, ಇಸ್ರೇಲಿ ಸೇನೆಯು ಗಾಜಾ ಗಡಿ ಪ್ರದೇಶಗಳನ್ನು ಹಮಾಸ್‌ನಿಂದ ಹಿಂಪಡೆದಿದೆ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ.

ಮತ್ತಷ್ಟು ಓದಿ: ಹಮಾಸ್​ ಉಗ್ರರ ವಶದಿಂದ ಗಾಜಾ ಗಡಿಯನ್ನು ಹಿಂಪಡೆದ ಇಸ್ರೇಲ್​, ಸಂಘರ್ಷದಲ್ಲಿ ಇಲ್ಲಿಯವರೆಗೆ 3 ಸಾವಿರಕ್ಕೂ ಅಧಿಕ ಮಂದಿ ಸಾವು

ವಾಸ್ತವವಾಗಿ, ಇಸ್ರೇಲ್ ಮೇಲಿನ ದಾಳಿಯ ಸಮಯದಲ್ಲಿ, ಹಮಾಸ್ ಉಗ್ರಗಾಮಿಗಳು ಗಡಿ ಬೇಲಿಯ ಕೆಲವು ಭಾಗಗಳನ್ನು ಕಿತ್ತುಹಾಕಿದ್ದರು. ಆದರೆ, ಇಸ್ರೇಲ್ ರಕ್ಷಣಾ ಪಡೆ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಅವರು ಬೇಲಿಯಿಂದ ದೇಶದೊಳಗೆ ಒಬ್ಬ ಹಮಾಸ್ ಉಗ್ರನೂ ಪ್ರವೇಶಿಸಿಲ್ಲ ಎಂದು ಹೇಳಿದ್ದಾರೆ. ಈ ಯುದ್ಧದಲ್ಲಿ ಎರಡೂ ಕಡೆಯಿಂದ ಸಾಯುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇಲ್ಲಿಯವರೆಗೆ, ಈ ಹೋರಾಟದಲ್ಲಿ 3000 ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಅಕ್ಟೋಬರ್ 10 ರಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹಮಾಸ್​ಗೆ ಎಚ್ಚರಿಕೆ ನೀಡಿದ್ದರು. ಇಸ್ರೇಲ್ ಮೇಲೆ ದಾಳಿ ನಡೆಸುವ ಮೂಲಕ ಹಮಾಸ್ ಉಗ್ರರು ದೊಡ್ಡ ತಪ್ಪು ಮಾಡಿದ್ದಾರೆ. ಹಮಾಸ್ ಹಾಗೂ ಇತರೆ ಇಸ್ರೇಲ್​ನ ಶತ್ರುಗಳು ಜೀವಮಾನಪೂರ್ತಿ ನೆನಪಿಸಿಕೊಳ್ಳುವಂತಹ ಬೆಲೆಯನ್ನು ತೆರಬೇಕಾಗುತ್ತದೆ.

ನಾವು ಯುದ್ಧವನ್ನು ಪ್ರಾರಂಭಿಸಿಲ್ಲ ಆದರೆ ಅಂತ್ಯ ನಮ್ಮ ಕೈಯಿಂದಲೇ ಆಗುತ್ತದೆ ಎಂದು ನೇತನ್ಯಾಹು ಹೇಳಿದ್ದರು. ಹಾಗೆಯೇ ಪ್ರಧಾನಿ ನರೇಂದ್ರ ಮೋದಿಯವರು ನೇತನ್ಯಾಹು ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಇಸ್ರೇಲ್​ನ ಪ್ರಸ್ತುತ ಸ್ಥಿತಿ ಬಗ್ಗೆ ಮಾಹಿತಿ ಪಡೆದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ