ಅಂದು ಮೋದಿ ವಿಶ್ವದ ಬಾಸ್, ಇಂದು ರಾಕ್‌ಸ್ಟಾರ್: ಭಾರತವನ್ನು ಕೊಂಡಾಡಿದ ಆಸ್ಟೇಲಿಯಾ ಸ್ಪೀಕರ್
ನಮ್ಮ ಪ್ರಧಾನಿ ಕೂಡ ಭಾರತಕ್ಕೆ ಭೇಟಿ ನೀಡಿದ್ದಾರೆ. ಆದರೆ ಮೋದಿ ಅವರು ಆಸ್ಟೇಲಿಯಾಕ್ಕೆ ಭೇಟಿ ನೀಡಿದಾಗ ಸಿಕ್ಕ ಸ್ವಾಗತ ನನ್ನ ಜೀವಮಾನದಲ್ಲಿ ನೋಡಿಲ್ಲ ಎಂದು ಆಸ್ಟೇಲಿಯಾದ ಸ್ಪೀಕರ್ ಮಿಲ್ಟನ್ ಡಿಕ್ ಹೇಳಿದರು.
ವಿಶ್ವದ ರಾಜಕೀಯ ವ್ಯವಸ್ಥೆಯಲ್ಲಿ ಭಾರತದ ಬೆಳವಣಿಗೆಯನ್ನು ಆಸ್ಟೇಲಿಯಾದ ಸ್ಪೀಕರ್ ಮಿಲ್ಟನ್ ಡಿಕ್ (Milton Dick) ಹಾಡಿ ಹೋಗಲಿದ್ದಾರೆ. ಜಿ20ಯಲ್ಲಿ ಇತರ ರಾಷ್ಟ್ರಗಳ ಜತೆಗೆ ಭಾರತ ನಡೆದುಕೊಂಡ ರೀತಿ, ವಿಶ್ವ ವ್ಯವಹಾರಗಳಲ್ಲಿ ಭಾರತ ನಿಜವಾದ ನಾಯಕ ಎಂದು ಹೇಳಿದ್ದಾರೆ. ವಿಶ್ವ ಆರ್ಥಿಕತೆಗೆ ಬಂದಾಗ ಭಾರತ ನಿಜವಾದ ನಾಯಕ, ಆಸ್ಟೇಲಿಯಾದಲ್ಲಿ ನಡೆಯಲಿರುವ ಜಿ-20 ಅಧ್ಯಕ್ಷರುಗಳ ಶೃಂಗಸಭೆಗೆ ಎದುರು ನೋಡುತ್ತಿದೆ. ಈ ಸಂದರ್ಭದಲ್ಲಿ ಭಾರತ ಮತ್ತು ಪ್ರಧಾನಿ ಮೋದಿ ಬಗ್ಗೆಯು ಮಾತನಾಡಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಜಗತ್ತಿನಲ್ಲಿ ಒಂದು ಜನಪ್ರಿಯತೆ ಇದೆ. ಪ್ರಧಾನಿ ಮೋದಿ ಅವರು ಆಸ್ಟೇಲಿಯಾಕ್ಕೆ ಬಂದಾಗೆಲ್ಲ ನಮ್ಮ ಪ್ರಧಾನಿ ಆಂಟನಿ ಅಲ್ಬನೀಸ್ ಅವರು ಅದ್ಧೂರಿಯಾಗಿ ಸ್ವಾಗತಿಸುತ್ತಿದ್ದರು.
ನಮ್ಮ ಪ್ರಧಾನಿ ಕೂಡ ಭಾರತಕ್ಕೆ ಭೇಟಿ ನೀಡಿದ್ದಾರೆ. ಆದರೆ ಮೋದಿ ಅವರು ಆಸ್ಟೇಲಿಯಾಕ್ಕೆ ಭೇಟಿ ನೀಡಿದಾಗ ಸಿಕ್ಕ ಸ್ವಾಗತ ನನ್ನ ಜೀವಮಾನದಲ್ಲಿ ನೋಡಿಲ್ಲ ಎಂದು ಹೇಳಿದ್ದಾರೆ. ಮೋದಿ ಅವರಿಗೆ ಆಸ್ಟೇಲಿಯಾ ನೀಡಿದ ಆತಿಥ್ಯ ಮಾತ್ರ ಅದ್ಭುತವಾಗಿತ್ತು. ಪ್ರಧಾನಿ ಮೋದಿ ಅವರು ರಾಕ್‌ಸ್ಟಾರ್ ಎಂದು ಹೇಳಿದ್ದಾರೆ.
ಇನ್ನು ಆಸ್ಟೇಲಿಯಾಕ್ಕೆ ಹೋದರೆ ಭಾರತೀಯ ಪರಂಪರೆಯ 1 ಮಿಲಿಯನ್ ಜನರು ಇದ್ದರೆ. ಇದು ನಮ್ಮ ದೇಶವನ್ನು ಬಲಪಡಿಸುವುದು ಮಾತ್ರವಲ್ಲದೆ. ಭಾರತ ಮತ್ತು ನಮ್ಮ ಸಂಪರ್ಕ, ಸ್ನೇಹ, ಎಲ್ಲವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಪ್ರಧಾನಿ ಮೋದಿ ಅವರು ಅಂತರಾಷ್ಟ್ರೀಯ ಸಂಬಂಧಗಳನ್ನು ಉತ್ತಮವಾಗಿ ಬೆಳೆಸಿಕೊಳ್ಳುತ್ತಿದ್ದಾರೆ. ಅವರು ಎಲ್ಲ ಸ್ನೇಹವನ್ನು ಗೌರವಿಸುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಶ್ವದ ನಾಯಕರಿಗೆ ಪ್ರಧಾನಿ ಮೋದಿ ನೀಡಿದ ಉಡುಗೊರೆಯಲ್ಲೂ ಅಡಗಿದೆ ಭಾರತದ ಕಲೆ, ಸಂಸ್ಕೃತಿ
ಸಂದರ್ಶನ ಒಂದರಲ್ಲಿ ಮಾತನಾಡಿದ ಸ್ಪೀಕರ್ ಮಿಲ್ಟನ್ ಡಿಕ್ ಭಾರತಕ್ಕೆ ನಾನು ಅನೇಕ ಬಾರಿ ಭೇಟಿ ನೀಡಿದ್ದೇನೆ. ಭಾರತದ ಆರ್ಥಿಕತೆ ಮುಂದೆ ಹೋಗುತ್ತಿದೆ. ಜತೆಗೆ ನಾನು ಭಾರತಕ್ಕೆ ಭೇಟಿ ನೀಡಿದಾಗ ಅಲ್ಲಿನ ಸಂಪ್ರಾದಾಯಗಳು ಹಾಗೂ ಮೌಲ್ಯಗಳ ಎಲ್ಲವೂ ನನ್ನ ಮೇಲೆ ದೊಡ್ಡ ಪರಿಣಾಮವನ್ನು ಉಂಟು ಮಾಡಿದೆ. ಇನ್ನು ಪ್ರಧಾನಿ ಮೋದಿ ಅವರನ್ನು ಮಿಲ್ಟನ್ ಡಿಕ್ ರಾಕ್‌ಸ್ಟಾರ್ ಬ್ರೂಸ್ ಸ್ಪ್ರಿಂಗ್‌ಸ್ಟೀನ್ ಅವರಿಗೆ ಹೋಲಿಸಿದ್ದಾರೆ. ಮೋದಿ ಜಗತ್ತಿನ ಬಾಸ್ ಎಂಬ ಪ್ರಶಂಸೆಯನ್ನು ಕೂಡ ಪಡೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ಅವರು ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಆಸ್ಟೇಲಿಯಾ ಮತ್ತು ಭಾರತದ ನಡುವಿನ ಸಂಬಂಧವ ಗಟ್ಟಿಯಾಗುತ್ತಿದೆ. ಇದರ ಜತೆಗೆ ಉಭಯ ರಾಷ್ಟ್ರಗಳ ನಡುವಿನ ಒಪ್ಪಂದಗಳು ಕೂಡ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:44 pm, Thu, 12 October 23