AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವುಹಾನ್ ಲ್ಯಾಬ್​ಗೆ ಅಮೆರಿಕದ ಹಣ, ಕೊರೊನಾ ಸೃಷ್ಟಿಸಿದ ಚೀನಾ ಪ್ರಯೋಗಾಲಯಕ್ಕೆ ಫೌಸಿ ನೆರವು, ತುಳಸಿ ಗಬ್ಬಾರ್ಡ್ ಆರೋಪ

ತುಳಸಿ ಗಬ್ಬಾರ್ಡ್ ಡಾ. ಆಂಥೋನಿ ಫೌಸಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ವುಹಾನ್ ಲ್ಯಾಬ್‌ನಲ್ಲಿ ಅಪಾಯಕಾರಿ 'ಗೇನ್ ಆಫ್ ಫಂಕ್ಷನ್' ಸಂಶೋಧನೆಗೆ ಅಮೆರಿಕದ ತೆರಿಗೆದಾರರ ಹಣವನ್ನು ಒದಗಿಸಿರುವುದಾಗಿ ತಿಳಿಸಿದ್ದಾರೆ. ಇದು ಕೋವಿಡ್-19 ಸಾಂಕ್ರಾಮಿಕಕ್ಕೆ ಕಾರಣವಾಯಿತು ಎಂದು ಗಬ್ಬಾರ್ಡ್ ರಹಸ್ಯ ದಾಖಲೆ ಸಮೇತ ಬಹಿರಂಗಪಡಿಸಿದ್ದಾರೆ. ಫೌಸಿ ಸುಳ್ಳು ಹೇಳಿ, ಮಾಹಿತಿ ಸೋರಿಕೆದಾರರನ್ನು ವಜಾಗೊಳಿಸಿದ್ದಾರೆಂಬುದು ಆರೋಪ.

ವುಹಾನ್ ಲ್ಯಾಬ್​ಗೆ ಅಮೆರಿಕದ ಹಣ, ಕೊರೊನಾ ಸೃಷ್ಟಿಸಿದ ಚೀನಾ ಪ್ರಯೋಗಾಲಯಕ್ಕೆ ಫೌಸಿ ನೆರವು, ತುಳಸಿ ಗಬ್ಬಾರ್ಡ್ ಆರೋಪ
ತುಳಸಿ ಗಬ್ಬಾರ್ಡ್​ Image Credit source: X Account-Tulsi Gabbard
ನಯನಾ ರಾಜೀವ್
|

Updated on: Jun 19, 2026 | 1:01 PM

Share

ವಾಷಿಂಗ್ಟನ್, ಜೂನ್ 19: ಕೊರೊನಾ ವೈರಸ್ ಉಗಮದ ಕುರಿತು ಅಮೆರಿಕದ ರಾಜಕೀಯ ವಲಯದಲ್ಲಿ ಭಾರಿ ಬಾಂಬ್ ಸಿಡಿದಿದೆ. ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿಯಾಗಿದ್ದ ತುಳಸಿ ಗಬ್ಬಾರ್ಡ್(Tulsi Gabbard)​ ರಾಜೀನಾಮೆ ನೀಡಿ ಹೊರ ಹೋಗುವ ಮುನ್ನ ಅಮೆರಿಕದ ಮಾಜಿ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆಂಥೋನಿ ಫೌಸಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಜಾಗತಿಕ ಸಾಂಕ್ರಾಮಿಕಕ್ಕೆ ಕಾರಣವಾದ ಚೀನಾದ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ನಡೆದ ಅಪಾಯಕಾರಿ ಸಂಶೋಧನೆಗೆ ಫೌಸಿ ಅವರು ಅಮೆರಿಕದ ತೆರಿಗೆದಾರರ ಹಣವನ್ನು ಒದಗಿಸಿದ್ದರು ಎಂದು ಗಬ್ಬಾರ್ಡ್ ಬಹಿರಂಗಪಡಿಸಿದ್ದಾರೆ.

ಗುಪ್ತಚರ ನಿರ್ದೇಶಕಿಯಾಗಿ ತಮ್ಮ ಕೊನೆಯ ಕೆಲಸದ ದಿನದಂದು ಗಬ್ಬಾರ್ಡ್ ಅವರು ಅಧಿಕೃತ ಇಲಾಖಾ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿರುವ ರಹಸ್ಯ ದಾಖಲೆಗಳು ಮತ್ತು ಪತ್ರವ್ಯವಹಾರಗಳ ಆಧಾರದ ಮೇಲೆ ಈ ಮಾಹಿತಿ ನೀಡಿದ್ದಾರೆ.

ಡಾ. ಫೌಸಿ ಮುಖ್ಯಸ್ಥರಾಗಿದ್ದ ಅಮೆರಿಕದ ‘ರಾಷ್ಟ್ರೀಯ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗಗಳ ಸಂಸ್ಥೆ’ (NIAID) ಮೂಲಕ ಚೀನಾದ ವುಹಾನ್ ಲ್ಯಾಬ್‌ನಲ್ಲಿ ಬಾವಲಿ ಹಾಗೂ ಕೊರೊನಾ ವೈರಸ್‌ಗಳ ಕುರಿತು ನಡೆಸಲಾಗುತ್ತಿದ್ದ ಅಪಾಯಕಾರಿ ‘ಗೇನ್ ಆಫ್ ಫಂಕ್ಷನ್’ಸಂಶೋಧನೆಗೆ ಲಕ್ಷಾಂತರ ಅಮೆರಿಕನ್ ಡಾಲರ್ ಹಣವನ್ನು ನೀಡಲಾಗಿತ್ತು.

ತಾವು ಮಾಡಿದ ತಪ್ಪನ್ನು ಮುಚ್ಚಿಡಲು ಫೌಸಿ ಅವರು ಗುಪ್ತಚರ ಇಲಾಖೆಯೊಳಗಿನ ಕೆಲವು ರಾಜಕೀಯ ಪ್ರಭಾವಿ ಅಧಿಕಾರಿಗಳೊಂದಿಗೆ ಕೈಜೋಡಿಸಿದ್ದರು ಮತ್ತು ಅಮೆರಿಕದ ಸಂಸತ್ತಿಗೆ ಪ್ರಮಾಣವಚನ ಸ್ವೀಕರಿಸಿ ಸುಳ್ಳು ಹೇಳಿದ್ದರು ಎಂದು ಗಬ್ಬಾರ್ಡ್ ಆರೋಪಿಸಿದ್ದಾರೆ.

ಮತ್ತಷ್ಟು ಓದಿ: Tulsi Gabbard Resigns: ಟ್ರಂಪ್ ಸರ್ಕಾರದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ ರಾಜೀನಾಮೆ

ಮಾಹಿತಿ ಸೋರಿಕೆ ಮಾಡಿದವರ ವಜಾ: ಇಲಾಖೆಯ ಪತ್ರಿಕಾ ಪ್ರಕಟಣೆಯ ಪ್ರಕಾರ, ವುಹಾನ್ ಲ್ಯಾಬ್ ಸೋರಿಕೆಯ ಸತ್ಯವನ್ನು ಗುಪ್ತಚರ ಇಲಾಖೆಗೆ ತಿಳಿಸಲು ಮುಂದೆ ಬಂದ ಮಾಹಿತಿ ದಾರರನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಲಾಗಿತ್ತು.

‘ಗೇನ್ ಆಫ್ ಫಂಕ್ಷನ್’ ಸಂಶೋಧನೆ ಎಂದರೇನು? ವೈರಸ್ ಶಕ್ತಿ ಹೆಚ್ಚಿಸುವ ಪ್ರಯೋಗ: ಇದು ವಿಜ್ಞಾನಿಗಳು ಒಂದು ಜೀವಿಯ ಅಥವಾ ವೈರಸ್‌ನ ಜೈವಿಕ ಕಾರ್ಯಗಳನ್ನು, ಅದರ ರೋಗ ಹರಡುವ ಸಾಮರ್ಥ್ಯವನ್ನು ಕೃತಕವಾಗಿ ಹೆಚ್ಚಿಸಲು ತಳೀಯವಾಗಿ (Genetically) ಮಾರ್ಪಡಿಸುವ ಸಂಶೋಧನೆಯಾಗಿದೆ. ವುಹಾನ್ ಪ್ರಯೋಗಾಲಯದಲ್ಲಿ ನಡೆದ ಇಂತಹದೇ ಅಪಾಯಕಾರಿ ಪ್ರಯೋಗದ ಅಚಾತುರ್ಯದ ಸೋರಿಕೆಯಿಂದಲೇ ಕೋವಿಡ್ ಜಗತ್ತನ್ನು ಆವರಿಸಿತು ಎಂದು ನಂಬಲಾಗಿದೆ.

ವಿಡಿಯೋ

ಕೋವಿಡ್ ವೈರಸ್ ಚೀನಾದ ವೆಟ್ ಮಾರುಕಟ್ಟೆಯಿಂದ ಹರಡಿದೆ ಎಂದು ಈ ಮುಂಚೆ ವಿಜ್ಞಾನಿಗಳು ಬಿಂಬಿಸಿದ್ದರು. ಆದರೆ ಈಗ ಸತ್ಯ ಹೊರಬರುವ ಸಮಯ ಬಂದಿದೆ ಎಂದು ಟ್ವೀಟ್ ಮಾಡಿರುವ ತುಳಸಿ ಗಬ್ಬಾರ್ಡ್, ಇದೊಂದು ಉದ್ದೇಶಪೂರ್ವಕ ಸಂಚು ಎಂದು ಬಿಂಬಿಸುವ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಬೆಳವಣಿಗೆಯು ಅಮೆರಿಕ ಹಾಗೂ ಚೀನಾ ನಡುವಿನ ರಾಜತಾಂತ್ರಿಕ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ‌ ಕ್ಷಣ ಮಾತ್ರದಲ್ಲಿ ಸಾವು!
ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ‌ ಕ್ಷಣ ಮಾತ್ರದಲ್ಲಿ ಸಾವು!
ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ
ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ
ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ
ಈ ರಾಶಿಯವರಿಗೆ ಮಧ್ಯಾಹ್ನ 12:20 ರಿಂದ ಶುಭ ಕಾಲ ಆರಂಭ
ಈ ರಾಶಿಯವರಿಗೆ ಮಧ್ಯಾಹ್ನ 12:20 ರಿಂದ ಶುಭ ಕಾಲ ಆರಂಭ
ಪ್ರಿಯ ಮಿತ್ರ ನರೇಂದ್ರ; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಮ್ಯಾಕ್ರನ್
ಪ್ರಿಯ ಮಿತ್ರ ನರೇಂದ್ರ; ಹಿಂದಿಯಲ್ಲೇ ಮೋದಿಗೆ ವಿದಾಯ ಹೇಳಿದ ಮ್ಯಾಕ್ರನ್
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ
ಬಿಜೆಪಿ ಶಾಸಕರೇ ಅವರ ವಿರುದ್ಧ ಇದ್ದಾರೆ ಎಂದ ಸುರ್ಜೇವಾಲಾ