AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಳತಿ ಅಲೆಕ್ಸಿಸ್ ವಿಲ್ಕಿನ್ಸ್ ಜತೆ ನಿಶ್ಚಿತಾರ್ಥ ಮಾಡಿಕೊಂಡ ಎಫ್​ಬಿಐ ನಿರ್ದೇಶಕ ಕಾಶ್ ಪಟೇಲ್

ಅಮೆರಿಕದ ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಗಾಯಕಿ, ರಾಜಕೀಯ ವ್ಯಾಖ್ಯಾನಕಾರ್ತಿ ಅಲೆಕ್ಸಿಸ್ ವಿಲ್ಕಿನ್ಸ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಭಾರತೀಯ ಮೂಲದ ಕಾಶ್ ಪಟೇಲ್ ಎಫ್‌ಬಿಐನ ಅತ್ಯುನ್ನತ ಹುದ್ದೆ ಅಲಂಕರಿಸಿದ ಮೊದಲ ವ್ಯಕ್ತಿ. ಅಲೆಕ್ಸಿಸ್ ಸಂಗೀತ ಮತ್ತು ರಾಜಕೀಯ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದಾರೆ. ಇವರ ನಿಶ್ಚಿತಾರ್ಥದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಈ ಹೊಸ ಜೋಡಿ ಇದೀಗ ಎಲ್ಲರ ಗಮನ ಸೆಳೆದಿದೆ. ಇವರಿಬ್ಬರ ಸಂಬಂಧದ ವರದಿಗಳು ಮೊದಲು 2023 ರಲ್ಲಿ ಪ್ರಕಟವಾಗಿದ್ದವು.

ಗೆಳತಿ ಅಲೆಕ್ಸಿಸ್ ವಿಲ್ಕಿನ್ಸ್ ಜತೆ ನಿಶ್ಚಿತಾರ್ಥ ಮಾಡಿಕೊಂಡ ಎಫ್​ಬಿಐ ನಿರ್ದೇಶಕ ಕಾಶ್ ಪಟೇಲ್
ಕಾಶ್ ಪಟೇಲ್Image Credit source: Kash Patel x account
ನಯನಾ ರಾಜೀವ್
|

Updated on: Oct 05, 2026 | 12:13 PM

Share

ನ್ಯೂಯಾರ್ಕ್, ಅಕ್ಟೋಬರ್ 05: ಅಮೆರಿಕದ ಎಫ್​ಬಿಐ ನಿರ್ದೇಶಕ ಕಾಶ್ ಪಟೇಲ್ ಗಾಯಕಿ ಹಾಗೂ ರಾಜಕೀಯ ವ್ಯಾಖ್ಯಾನಕಾರ್ತಿ ಅಲೆಕ್ಸಿಸ್ ವಿಲ್ಕಿನ್ಸ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 27 ವರ್ಷದ ಅಲೆಕ್ಸಿಸ್ ಅವರು 46 ವರ್ಷದ ಕಾಶ್ ಪಟೇಲ್ ಜೊತೆಗಿನ ಕಪ್ಪು-ಬಿಳುಪು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ನಿಶ್ಚಿತಾರ್ಥದ ಉಂಗುರವನ್ನು ತೋರಿಸಿದ್ದಾರೆ. “Went and got the law involved” ಎಂದು ಅವರು ಪೋಸ್ಟ್‌ಗೆ ತಮಾಷೆಯಾಗಿ ಶೀರ್ಷಿಕೆ ನೀಡಿದ್ದಾರೆ. ಪಟೇಲ್ ಕೂಡ ಈ ಪೋಸ್ಟ್ ಅನ್ನು ಮರುಹಂಚಿಕೊಂಡಿದ್ದಾರೆ.

ಎಫ್‌ಬಿಐ ಇತಿಹಾಸದಲ್ಲೇ ಅತ್ಯುನ್ನತ ನಿರ್ದೇಶಕ ಹುದ್ದೆಯನ್ನು ಅಲಂಕರಿಸಿದ ಭಾರತೀಯ ಮೂಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದರು. ಇವರ ಪೋಷಕರು ಮೂಲತಃ ಗುಜರಾತ್‌ನವರಾಗಿದ್ದು, ನಂತರ ಅಮೆರಿಕಕ್ಕೆ ವಲಸೆ ಹೋಗಿದ್ದರು. ಅವರು ಭಗವದ್ಗೀತೆಯ ಮೇಲೆ ಕೈಯಿಟ್ಟು ಎಫ್‌ಬಿಐ ನಿರ್ದೇಶಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ವೃತ್ತಿಯಿಂದ ವಕೀಲರಾಗಿರುವ ಕಾಶ್ ಪಟೇಲ್ , ಈ ಹಿಂದೆ ಅಮೆರಿಕದ ರಕ್ಷಣಾ ಇಲಾಖೆಯ ಮುಖ್ಯಸ್ಥರ ಸಿಬ್ಬಂದಿ ಮುಖ್ಯಸ್ಥರಾಗಿ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಅಲೆಕ್ಸಿಸ್ ವಿಲ್ಕಿನ್ಸ್ ಯಾರು?

ಅಲೆಕ್ಸಿಸ್ ವಿಲ್ಕಿನ್ಸ್ ಅಮೆರಿಕದ ಗಾಯಕಿ ಮತ್ತು ರಾಜಕೀಯ ವ್ಯಾಖ್ಯಾನಕಾರ್ತಿ. ಅವರು 2023ರಲ್ಲಿ ತಮ್ಮ ಮೊದಲ ಸಂಗೀತ ಆಲ್ಬಂ ಬಿಡುಗಡೆ ಮಾಡಿದ್ದರು. ಸಂಪ್ರದಾಯವಾದಿ ಸಂಘಟನೆಗಳು ಮತ್ತು ರಾಜಕೀಯ ಕಾರ್ಯಕ್ರಮಗಳಲ್ಲೂ ಅವರು ಕಾಣಿಸಿಕೊಂಡಿದ್ದಾರೆ.ಅಲೆಕ್ಸಿಸ್ ಮತ್ತು ಕಾಶ್ ಪಟೇಲ್ 2022ರಲ್ಲಿ ನ್ಯಾಶ್‌ವಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು ಎಂದು ವರದಿಯಾಗಿದೆ. 2023ರಿಂದ ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು. 2025ರಲ್ಲಿ ಪಟೇಲ್ ಎಫ್​ಬಿಐ ನಿರ್ದೇಶಕರಾಗಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮದಲ್ಲೂ ಅಲೆಕ್ಸಿಸ್ ಭಾಗವಹಿಸಿದ್ದರು.

ಮತ್ತಷ್ಟು ಓದಿ: ಶ್ವೇತಭವನದಲ್ಲಿ ಟೆಕ್ ದಿಗ್ಗಜರ ಸಭೆ: ಸುಂದರ್ ಪಿಚೈ ಅವರನ್ನು ಮಾನ್​ಸ್ಟರ್ ಎಂದು ಕರೆದ ಡೊನಾಲ್ಡ್ ಟ್ರಂಪ್

ರಾಜಕೀಯ ಕಾರ್ಯಕ್ರಮಗಳಲ್ಲೂ ಅಲೆಕ್ಸಿಸ್ ಸಕ್ರಿಯ

ಅಲೆಕ್ಸಿಸ್ ಸಂಗೀತ ಕ್ಷೇತ್ರದ ಜೊತೆಗೆ ರಾಜಕೀಯ ಮತ್ತು ಸಾಮಾಜಿಕ ವಿಚಾರಗಳಲ್ಲೂ ಸಕ್ರಿಯರಾಗಿದ್ದಾರೆ. ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೆಲವು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಇತ್ತೀಚೆಗೆ ‘Great American State Fair’ ಕಾರ್ಯಕ್ರಮದಲ್ಲೂ ಅವರು ಪ್ರದರ್ಶನ ನೀಡಿದ್ದರು.

ಪೋಸ್ಟ್

ಎಫ್​ಬಿಐ ನಿರ್ದೇಶಕರಾಗಿ ಕಾಶ್ ಪಟೇಲ್ ಅವರ ವೈಯಕ್ತಿಕ ಮತ್ತು ಅಧಿಕೃತ ಪ್ರಯಾಣಗಳ ಕುರಿತು ಈ ಹಿಂದೆ ಪ್ರಶ್ನೆಗಳು ಎದ್ದಿದ್ದವು. ವಿಶೇಷವಾಗಿ ಸರ್ಕಾರಿ ವಿಮಾನ ಬಳಕೆಯ ಬಗ್ಗೆ ಟೀಕೆಗಳು ಕೇಳಿಬಂದಿದ್ದವು. ಒಂದು ಸಂದರ್ಭದಲ್ಲಿ ಪೆನ್ಸಿಲ್ವೇನಿಯಾದ ಸ್ಟೇಟ್ ಕಾಲೇಜಿಗೆ ವಿಮಾನದಲ್ಲಿ ತೆರಳಿದ್ದಾಗ, ಅಲ್ಲಿ ಅಲೆಕ್ಸಿಸ್ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಹಾಡಿದ್ದರು ಎಂದು ವರದಿಯಾಗಿದೆ. ಈ ವಿಷಯವೂ ಸಾರ್ವಜನಿಕ ಚರ್ಚೆಗೆ ಕಾರಣವಾಗಿತ್ತು.ಇದೀಗ ನಿಶ್ಚಿತಾರ್ಥದ ಘೋಷಣೆಯೊಂದಿಗೆ ಕಾಶ್ ಪಟೇಲ್ ಮತ್ತು ಅಲೆಕ್ಸಿಸ್ ವಿಲ್ಕಿನ್ಸ್ ಜೋಡಿ ಮತ್ತೊಮ್ಮೆ ಸುದ್ದಿಯಲ್ಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
10 ಕೆಜಿ ತೂಕದ ಪೇಟ, ಮೋಸಂಬಿ ಹಾರ: ಅರಮನೆಗೆ ಅಭಿಮನ್ಯು ಗ್ರ್ಯಾಂಡ್​​ ಎಂಟ್ರಿ
10 ಕೆಜಿ ತೂಕದ ಪೇಟ, ಮೋಸಂಬಿ ಹಾರ: ಅರಮನೆಗೆ ಅಭಿಮನ್ಯು ಗ್ರ್ಯಾಂಡ್​​ ಎಂಟ್ರಿ
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ರಿಟ್ ಅರ್ಜಿ, ಸುಪ್ರೀಂನಲ್ಲಿ ವಿಚಾರಣೆ
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ರಿಟ್ ಅರ್ಜಿ, ಸುಪ್ರೀಂನಲ್ಲಿ ವಿಚಾರಣೆ
ಶಂಕರ್ ನಾಗ್ ಮಗಳು ಚಿತ್ರರಂಗಕ್ಕೇಕೆ ಬಂದಿಲ್ಲ? ಉತ್ತರಿಸಿದ ಅನಂತ್ ನಾಗ್
ಶಂಕರ್ ನಾಗ್ ಮಗಳು ಚಿತ್ರರಂಗಕ್ಕೇಕೆ ಬಂದಿಲ್ಲ? ಉತ್ತರಿಸಿದ ಅನಂತ್ ನಾಗ್
ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದ ರೇಣುಕಾಚಾರ್ಯ
ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದ ರೇಣುಕಾಚಾರ್ಯ
ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಆರೋಪ: ಏಳು ಜನರ ವಿರುದ್ಧ FIR
ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಆರೋಪ: ಏಳು ಜನರ ವಿರುದ್ಧ FIR
ಪೈಪ್‌ಲೈನ್ ಒಡೆದು ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ಪೈಪ್‌ಲೈನ್ ಒಡೆದು ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ಇಂದು ಈ ರಾಶಿಯವರು ಬೇಜವಾಬ್ದಾರಿತನದಿಂದ ದೂರವಿರಿ
ಇಂದು ಈ ರಾಶಿಯವರು ಬೇಜವಾಬ್ದಾರಿತನದಿಂದ ದೂರವಿರಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ