
ಸುದ್ದಿ ಕಾರ್ಯಕ್ರಮವೊಂದರಲ್ಲಿ ಇಮ್ರಾನ್ ಖಾನ್ ಆಪ್ತೆ, ಪಿಟಿಐ ಪಕ್ಷದ ಮಹಿಳಾ ನಾಯಕಿ ಫಿರ್ದೋಸ್ ಅವರು ಪಿಪಿಪಿ ಪಕ್ಷದ ಸಂಸದ ಖಾದಿರ್ ಖಾನ್ ಮಂಡೋಖೇಲ್ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಟಿವಿ ಕಾರ್ಯಕ್ರಮದಲ್ಲಿ ಫಿರ್ದೋಸ್ ತುಂಬಾ ಕೋಪಗೊಂಡು ಸಂಸದರ ಕಾಲರ್ ಹಿಡಿದು ಕಪಾಳಮೋಕ್ಷ ಮಾಡಿದ್ದಾರೆ. ಸುದ್ದಿ ವಾಹಿನಿಯ ಆ್ಯಂಕರ್ ಮುಂದೆಯೇ ನಡೆದಿರುವ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ.
ಜಾವೇದ್ ಚೌಧರಿ ಆಯೋಜಿಸಿದ್ದ ಎಕ್ಸ್ಪ್ರೆಸ್ ನ್ಯೂಸ್ ಟಾಕ್ ಶೋ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿ ಕಾಣಿಸುವಂತೆ ಇಮ್ರಾನ್ ಖಾನ್ ಆಪ್ತೆ ಫಿರ್ದೋಸ್ ಮತ್ತು ಪಿಪಿಪಿ ಪಕ್ಷದ ಸಂಸದ ಮಂಡೋಖೆಲ್ ಪರಸ್ಪರ ಕಿತ್ತಾಡಿಕೊಂಡ ದೃಶ್ಯ ವೈರಲ್ ಆಗಿದೆ.
ಘಟನೆ ವೈರಲ್ ಆದ ಬಳಿಕ ಫಿರ್ದೋಸ್ ಖಾನ್ ಪ್ರತಿಕ್ರಿಯೆ ನೀಡಿದ್ದು, ಘಟನೆಯ ಒಂದು ಭಾಗ ಮಾತ್ರ ಬಿಡುಗಡೆಯಾಗಿದೆ. ಸಂಪೂರ್ಣ ವಿಡಿಯೋವನ್ನೂ ಬಿಡುಗಡೆ ಮಾಡಿ ಎಂದು ಕೇಳಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ನಾವಿಬ್ಬರೂ ಕುಳಿತಿದ್ದೆವು. ಪಿಪಿಪಿಯ ಖಾದಿರ್ ಮಂಡೋಖೇಲ್ ನನಗೆ ಬೆದರಿಕೆ ಹಾಕಿದರು. ನನ್ನ ತೀರಿಹೋದ ತಂದೆ ಮತ್ತು ನನ್ನ ಬಗ್ಗೆ ಕೆಟ್ಟ ಭಾಷೆಗ ಬಳಸಿ ಅವಮಾನಿಸಿದರು. ನನ್ನ ರಕ್ಷಣೆಗಾಗಿ ನಾನು ಮುಂದಿನ ಹೆಜ್ಜೆ ಇಡಲೇಬೇಕಾಯಿತು ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:
Throwback! ಪಾಕಿಸ್ತಾನದ ವಿರುದ್ಧ ವೀರೂ ದಾದಾ ಎರಡೇ ಎರಡು ಬಾಲ್ನಲ್ಲಿ 21 ರನ್ ಚಚ್ಚಿದ್ದು ಹೇಗೆ ಅಂತೀರಾ…?
ಕರಾಚಿಯಲ್ಲೇ ಇದ್ದಾನೆ ದಾವೂದ್ ಇಬ್ರಾಹಿಂ, ವಿಶ್ವಸಂಸ್ಥೆಗೆ 88 ಉಗ್ರರ ಅಡ್ರಸ್ ಕೊಟ್ಟು ಪಾಕಿಸ್ತಾನ್ ನಾಟಕ
Published On - 1:42 pm, Thu, 10 June 21