ಆಂಧ್ರಪ್ರದೇಶದ ಮಹಿಳೆಯೊಬ್ಬರು ಮಲೇಷ್ಯಾದ ಕೌಲಾಲಂಪುರದಲ್ಲಿ ಸಿಂಕ್ಹೋಲ್ಗೆ ಬಿದ್ದಿರುವ ಘಟನೆ ನಡೆದಿದೆ. ಕಳೆದ ಐದು ದಿನಗಳಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮಹಿಳಾ ಪ್ರವಾಸಿಗರೊಬ್ಬರು ಆಗಸ್ಟ್ 23ರಂದು ಪಾದಚಾರಿ ಮಾರ್ಗದಲ್ಲಿ ನಡೆಯುತ್ತಿರುವಾಗ ಆಯತಪ್ಪಿ ಸಿಂಕ್‌ಹೋಲ್ ಮೇಲೆ ಕಾಲಿಟ್ಟಿದ್ದು, ತಕ್ಷಣವೇ ಒಳಗೆ ಬಿದ್ದಿದ್ದಾರೆ. ನೀರಿನ ರಭಸ ಹೆಚ್ಚಿದ್ದರಿಂದ ಕೊಚ್ಚಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.
ಎಕ್ಸ್ಪೋಸ್ಟ್ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಭಾರತೀಯ ರಾಯಭಾರ ಕಚೇರಿಯು ಹುಡುಕಾಟ ನಡೆಸುತ್ತಿದೆ. ಹೋಗಿರುವ ಸಂಭಾವ್ಯ ಮಾರ್ಗಗಳ ಕುರಿತು ಅವಲೋಕಿಸುತ್ತಿವೆ. ಪೊಲೀಸ್, ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ, ಇಂದಾ ವಾಟರ್ ಕನ್ಸೋರ್ಟಿಯಂ, ಕೌಲಾಲಂಪುರ್ ಫೆಡರಲ್ ಟೆರಿಟರಿ ಸಂಸ್ಥೆಗಳು ಮತ್ತು ನಾಗರಿಕ ರಕ್ಷಣಾ ಪಡೆಗಳು ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಅದು ಹೇಳಿದೆ. ಮಹಿಳೆಯನ್ನು ವಿಜಯ ಲಕ್ಷ್ಮಿ ಗಾಲಿ ಎಂದು ಗುರುತಿಸಲಾಗಿದೆ.
ಶೋಧ ಕಾರ್ಯಾಚರಣೆ ಐದನೇ ದಿನಕ್ಕೆ ಕಾಲಿಟ್ಟಿದ್ದು ಹುಡುಕಾಟದ ಪ್ರಯತ್ನಗಳಲ್ಲಿ ತೊಡಗಿರುವ ಸಂಬಂಧಿತ ಏಜೆನ್ಸಿಗಳೊಂದಿಗೆ @hcikl ನಿಕಟ ಸಂಪರ್ಕದಲ್ಲಿದೆ. ಡ್ಯಾಂಗ್ ವಾಂಗಿ ಪ್ರದೇಶದಲ್ಲಿ ಮಹಿಳೆ ಬಿದ್ದ ಸಿಂಕ್‌ಹೋಲ್ 8 ಮೀಟರ್ ಆಳವಾಗಿತ್ತು. ಮಹಿಳೆ ಎರಡು ತಿಂಗಳ ಹಿಂದೆ ವಿಹಾರಕ್ಕೆಂದು ತನ್ನ ಪತಿ ಮತ್ತು ಹಲವಾರು ಸ್ನೇಹಿತರೊಂದಿಗೆ ಮಲೇಷ್ಯಾಕ್ಕೆ ಬಂದಿದ್ದಳು ಮತ್ತು ಅವರು ಶನಿವಾರ ಮನೆಗೆ ಮರಳಬೇಕಿತ್ತು.
ಮತ್ತಷ್ಟು ಓದಿ: ಮ್ಯಾನ್ ಹೋಲ್ಗೆ ಬಿದ್ದ ವಿದ್ಯಾರ್ಥಿನಿ, ಅದೃಷ್ಟವಶಾತ್ ಅಪಾಯದಿಂದ ಪಾರು
ಕಳೆದ ವರ್ಷ ಸಿಂಕ್‌ಹೋಲ್ ಕಾಣಿಸಿಕೊಂಡ ಅದೇ ಸ್ಥಳದಲ್ಲಿ ಮಣ್ಣು ಕುಸಿದಿರುವುದು ವರದಿಯಾಗಿದೆ. ಆದರೆ ಅದನ್ನು ಸರಿಪಡಿಸಲಾಗಿದೆ ಎಂದು ಹೇಳಿದರು. ಸುರಕ್ಷತೆಯ ದೃಷ್ಟಿಯಿಂದ ಈ ಪ್ರದೇಶದಲ್ಲಿನ ವ್ಯಾಪಾರಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ