ಫ್ಲೋರಿಡಾ: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇನ್ನೂರು ದಿನಗಳ ವಾಸ್ತವ್ಯದ ನಂತರ, ನಾಲ್ಕು ಗಗನಯಾತ್ರಿಗಳು (astronauts )ಬಂದಿಳಿದರು. ಈ ಪ್ರಯಾಣವು ಸ್ಪೇಸ್‌ಎಕ್ಸ್‌ನ (SpaceX )ಕ್ರೂ ಡ್ರ್ಯಾಗನ್(Crew Dragon)ನಲ್ಲಿತ್ತು. ಮಂಗಳವಾರ ಮುಂಜಾನೆ ಬಾಹ್ಯಾಕಾಶ ನೌಕೆಯು ಫ್ಲೋರಿಡಾದ (Florida) ಕರಾವಳಿಯಲ್ಲಿ ಸುರಕ್ಷಿತವಾಗಿ ಇಳಿಯಿತು. ಭೂಮಿಗೆ ಪ್ರಯಾಣ ಎಂಟು ಗಂಟೆಗಳಿಗಿಂತ ಹೆಚ್ಚು ದೀರ್ಘವಾಗಿತ್ತು. ಏತನ್ಮಧ್ಯೆ, ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸುಲ್‌ನಲ್ಲಿನ ಶೌಚಾಲಯದಲ್ಲಿ ಸೋರಿಕೆಯು ಪ್ರಯಾಣಿಕರಿಗೆ ದೊಡ್ಡ ಸವಾಲಾಗಿತ್ತು. ನಾಸಾದ ಮ್ಯಾಕ್‌ಆರ್ಥರ್, ಶೇನ್ ಕಿಂಬ್ರೊ, ಜಪಾನ್‌ನ ಅಕಿಹಿಕೊ ಹೊಶೈಡ್ ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಥಾಮಸ್ ಪೆಸ್ಕ್ವೆಟ್ ಐಎಸ್‌ಎಸ್‌ನಿಂದ ಭೂಮಿಗೆ ಮರಳಿದ್ದಾರೆ. ಗಲ್ಫ್ ಆಫ್ ಮೆಕ್ಸಿಕೋದಲ್ಲಿ ಬಂದಿಳಿದ ಬಾಹ್ಯಾಕಾಶ ನೌಕೆಯ ಒಳಗಿನಿಂದ (ರೆಸ್ಕ್ಯೂ ಶಿಪ್ ರಕ್ಷಣಾ ನೌಕೆ) ಪ್ರಯಾಣಿಕರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದವು. ಬಳಿಕ ನೌಕೆಯನ್ನು ದಡಕ್ಕೆ ತರಲಾಯಿತು. ಇಬ್ಬರು ರಷ್ಯನ್ ಮತ್ತು ಒಬ್ಬ ಅಮೆರಿಕನ್ ಈಗ ಬಾಹ್ಯಾಕಾಶ ನಿಲ್ದಾಣದಲ್ಲಿದ್ದಾರೆ. ಇವರು ಕಳೆದ ಏಪ್ರಿಲ್‌ನಲ್ಲಿ ಬಾಹ್ಯಾಕಾಶಕ್ಕೆ ಹೋಗಿದ್ದರು.
The @SpaceX Crew Dragon spacecraft is seen as it returns from space off the cost of Florida with #Crew2 astronauts @astro_kimbrough, @Astro_Megan, @Thom_astro, & @Aki_Hoshide after spending over six months aboard @Space_Station! More? https://t.co/274TuZrwkS pic.twitter.com/yg61yGCuHy
— NASA HQ PHOTO (@nasahqphoto) November 9, 2021
ಈ ಪ್ರಯಾಣದಲ್ಲಿ ಗಗನಯಾತ್ರಿಗಳು ಎದುರಿಸುತ್ತಿರುವ ಸವಾಲು ಶೌಚಾಲಯಗಳಷ್ಟೇ ಆಗಿರಲಿಲ್ಲ. ಗುಂಪಿನಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಹವಾಮಾನ ವೈಪರೀತ್ಯ ಹಾಗೂ ಆರೋಗ್ಯ ಹದಗೆಟ್ಟಿರುವುದು ತಲೆನೋವಾಗಿತ್ತು. ಈ ಬಗ್ಗೆ ನಾಸಾ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ ಗಗನಯಾತ್ರಿಗಳ ವಾಪಸಾತಿಯನ್ನು ನಾಸಾ ಎಂದಿನಂತೆ ನೇರ ಪ್ರಸಾರ ಮಾಡಿದೆ.
ನಾಲ್ಕು ಗಗನಯಾತ್ರಿಗಳು ಸೋಮವಾರ ಬೆಳಿಗ್ಗೆ ಹಿಂತಿರುಗಬೇಕಿತ್ತು, ಆದರೆ ಹೆಚ್ಚಿನ ಗಾಳಿಯು ಅವರ ಮರಳುವಿಕೆಯನ್ನು ವಿಳಂಬಗೊಳಿಸಿತು.
ಬಾಹ್ಯಾಕಾಶ ನಿಲ್ದಾಣದ ಸುತ್ತಲೂ ಒಂದು ಸುತ್ತು
ಹೊರಡುವ ಮೊದಲು ಕ್ರೂ ಡ್ರ್ಯಾಗನ್ ನಿಲ್ದಾಣದ ಹೊರಭಾಗವನ್ನು ಸೆರೆಹಿಡಿಯಲು ಐಎಸ್ಎಸ್ (International Space Station) ಸುತ್ತಲೂ ಹಾರಾಟ ನಡೆಸಿತು, ಇದು SpaceX ವಾಹನಗಳಿಗೆ ಮೊದಲನೆಯದು. ಅಂತಹ ಹಾರಾಟವನ್ನು ಈ ಹಿಂದೆ ಸ್ಪೇಸ್ ಶಟಲ್ ಮಿಷನ್ ನಡೆಸಿತು. ರಷ್ಯಾದ ಕೊನೆಯ ಕ್ಯಾಪ್ಸುಲ್ ಫ್ಲೈ-ರೌಂಡ್ ಮೂರು ವರ್ಷಗಳ ಹಿಂದೆ ಆಗಿತ್ತು.
“ಕ್ರೂ-2 ಕಮಾಂಡರ್ ಶೇನ್ ಕಿಂಬ್ರೋ ಮತ್ತು ಪೈಲಟ್ ಮೇಗನ್ ಮ್ಯಾಕ್‌ಆರ್ಥರ್ ಮಿಷನ್ ಸ್ಪೆಷಲಿಸ್ಟ್ ಥಾಮಸ್ ಪೆಸ್ಕ್ವೆಟ್ ಅವರು ವಾಣಿಜ್ಯ ಕ್ರ್ಯೂ ಡ್ರ್ಯಾಗನ್‌ನ ಒಳಗಿನಿಂದ ಸಂಕೀರ್ಣದ ಮೊಟ್ಟಮೊದಲ ‘ಫ್ಲೈ ಅರೌಂಡ್’ ಸಮಯದಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಫೋಟೋಗಳನ್ನು ಸೆರೆಹಿಡಿದಿದ್ದಾರೆ” ಎಂ%E