ಸಾಮಾನ್ಯವಾಗಿ ಹಾವುಗಳು ನಿರ್ಜನ ಪ್ರದೇಶ ಮತ್ತು ಹಿತಕರವಾದ ವಾತಾವರಣವಿರುವ ಸ್ಥಳಗಳಲ್ಲೇ ಅವಿತುಕೊಳ್ಳೋದು. ಕೆಲವೊಮ್ಮೆ ಮಳೆಗಾಲದಲ್ಲಿ ರಕ್ಷಣೆಗಾಗಿ ಉರಗಗಳು ಮನೆಯೊಳಗೆ ಸೇರುವುದನ್ನೂ ಸಹ ನೋಡಿದ್ದೇವೆ.
ಆದ್ರೆ, ನೋಡೋಕೆ ಒಳ್ಳೇ ಬಿಲದ ಹಾಗೇ ಇದೇ ಅಂತಾ ಬಾಯಿಬಿಟ್ಟುಕೊಂಡು ಗೊರಕೆ ಹೊಡಿಯುತ್ತಿದ್ದ ಮಹಿಳೆಯೊಬ್ಬಳ ಹೊಟ್ಟೆಯೊಳಕ್ಕೆ ಬಾಯಿಯ ಮೂಲಕ ಹಾವು ಹೊಕ್ಕಿರುವ ಘಟನೆ ರಷ್ಯಾದ ಡಾಗೇಸ್ತಾನ್ ಪ್ರಾಂತ್ಯದಲ್ಲಿ ಬೆಳಕಿಗೆ ಬಂದಿದೆ. ಹೌದು, ಇದು ನಂಬಲು ಕೊಂಚ ಕಷ್ಟವಾದರೂ ನೀವು ನಂಬಲೇ ಬೇಕಾದ ಸ್ಟೋರಿ.
ಅಂದ ಹಾಗೆ, ಚೆನ್ನಾಗಿ ಗೊರಕೆ ಹೊಡೆದು ಮಾರನೇ ದಿನ ಎದ್ದ ಮಹಿಳೆಗೆ ತೀವ್ರ ಅನಾರೋಗ್ಯ ಉಂಟಾಗಿದೆ. ಕೂಡಲೇ ಆಕೆಯನ್ನ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ತಪಾಸಣೆ ನಡೆಸಿದ ವೇಳೆ ಮಹಿಳೆಯ ದೇಹದಲ್ಲಿ ಹಾವಿರುವುದು ಪತ್ತೆಯಾಗಿದೆ. ಅದು ಬರೋಬ್ಬರಿ 4 ಅಡಿ ಉದ್ದ ಹಾವು.
ಶಾಕ್ ಆದ ವೈದ್ಯರು ಕೂಡಲೇ ಶಸ್ತ್ರಚಿಕಿತ್ಸೆ ನಡೆಸಿ ಮಹಿಳೆಯ ಬಾಯಿಯಿಂದ ಹಾವನ್ನು ಹೊರಗೆಳೆದಿದ್ದಾರೆ. ಕುತೂಹಲದ ಸಂಗತಿಯೆಂದ್ರೆ ಆ ಹಾವು ಮಹಿಳೆಯ ಹೊಟ್ಟೆಯಲ್ಲಿ ಜೀವಂತವಾಗಿತ್ತು! ಹಾವನ್ನು ಮಹಿಳೆಯ ಬಾಯಿಯಿಂದ ಹೊರತೆಗೆಯುತ್ತಿರೊ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೀವೂ ನೋಡಿ..
زحف عبر فمها أثناء نومها.. فيديو مروع للحظة سحب ثعبان من حلق امرأة https://t.co/6iUSk3oU2U#البيان_القارئ_دائما pic.twitter.com/3Q1YiYdV7R
— صحيفة البيان (@AlBayanNews) August 31, 2020
Published On - 4:38 pm, Tue, 1 September 20