ಅಧಿಕಾರಕ್ಕೆ ಬಂದು 27 ದಿನಕ್ಕೆ ರಾಜೀನಾಮೆ ನೀಡಿದ ಫ್ರೆಂಚ್ ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನು

ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಫ್ರೆಂಚ್ ಪ್ರಧಾನಿಯನ್ನಾಗಿ ಸೆಬಾಸ್ಟಿಯನ್ ಲೆಕೋರ್ನು ಅವರನ್ನು ನೇಮಕ ಮಾಡಿ ಕೇವಲ 27 ದಿನಗಳಾಗಿವೆ. ಒಂದು ತಿಂಗಳೂ ಅಧಿಕಾರ ನಡೆಸದ ಅವರು ಇಂದು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮ್ಯಾಕ್ರನ್‌ ಜೊತೆ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ 39 ವರ್ಷದ ಲೆಕೋರ್ನು ಇಂದು ಬೆಳಿಗ್ಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಇದರಿಂದ ಫ್ರಾನ್ಸ್​ನಲ್ಲಿ ಮತ್ತೊಮ್ಮೆ ರಾಜಕೀಯ ಬಿಕ್ಕಟ್ಟು ಶುರುವಾಗಿದೆ.

ಅಧಿಕಾರಕ್ಕೆ ಬಂದು 27 ದಿನಕ್ಕೆ ರಾಜೀನಾಮೆ ನೀಡಿದ ಫ್ರೆಂಚ್ ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನು
French Pm

Updated on: Oct 06, 2025 | 4:13 PM

ನವದೆಹಲಿ, ಅಕ್ಟೋಬರ್ 6: ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (Macron) ಅವರು 27 ದಿನಗಳ ಹಿಂದೆ ಪ್ರಧಾನಿಯಾಗಿ ನೇಮಿಸಿದ ಫ್ರೆಂಚ್ ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನು (Sebastien Lecornu) ಇಂದು ರಾಜೀನಾಮೆ ನೀಡಿದ್ದಾರೆ. ಅವರ ಹೊಸ ಸಂಪುಟ ವಿವಾದಕ್ಕೆ ಕಾರಣವಾದ ಒಂದು ದಿನದ ನಂತರ ಸೆಬಾಸ್ಟಿಯನ್ ರಾಜೀನಾಮೆ ನೀಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಇದು ಯುರೋಪಿಯನ್ ಒಕ್ಕೂಟವನ್ನು ಮತ್ತಷ್ಟು ರಾಜಕೀಯ ಬಿಕ್ಕಟ್ಟಿಗೆ ಸಿಲುಕಿಸಿದೆ. ಸೆಬಾಸ್ಟಿಯನ್ ಅವರು ಕಳೆದ 2 ವರ್ಷಗಳಲ್ಲಿ ತಮ್ಮ ಹುದ್ದೆಯನ್ನು ತ್ಯಜಿಸಿದ ಐದನೇ ಫ್ರೆಂಚ್ ಪ್ರಧಾನಿಯಾಗಿದ್ದಾರೆ.

ಮ್ಯಾಕ್ರನ್‌ ಜೊತೆ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ 39 ವರ್ಷದ ಲೆಕೋರ್ನು ಇಂದು ಬೆಳಿಗ್ಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಲೆಕೋರ್ನು ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಬೇರೂ ಸೇರಿದಂತೆ ಹಲವು ಪ್ರಭಾವಿ ರಾಜಕಾರಣಿಗಳನ್ನು ತಮ್ಮ ಸಂಪುಟದಲ್ಲಿ ಸೇರಿಸಿಕೊಂಡಿದ್ದರು. ಇದಾದ ನಂತರ ಬಲಪಂಥೀಯ ಮಿತ್ರಪಕ್ಷಗಳು ತಮ್ಮ ಸರ್ಕಾರದಿಂದ ಹಿಂದೆ ಸರಿಯುವುದಾಗಿ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಂಪುಟ ರಚನೆಯ ಬಿಕ್ಕಟ್ಟೇ ಈ ರಾಜೀನಾಮೆಗೆ ಕಾರಣ ಎನ್ನಲಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್​ ಫೋನ್; ಉಕ್ರೇನ್ ಸಂಘರ್ಷ ಕೊನೆಗೊಳಿಸುವ ಬಗ್ಗೆ ಚರ್ಚೆ

ತನ್ನ ರಾಜೀನಾಮೆಯ ನಂತರ ಲೆಕೋರ್ನು ಮೂರು ದಾಖಲೆಗಳನ್ನು ನಿರ್ಮಿಸಿದ್ದಾರೆ! ಕೇವಲ 27 ದಿನಗಳ ಅತಿ ಕಡಿಮೆ ಅವಧಿಗೆ ಪ್ರಧಾನಿಯಾಗಿದ್ದವರು, ಸರ್ಕಾರ ಅಥವಾ ಸಂಪುಟವಿಲ್ಲದೆ ಹೆಚ್ಚು ಸಮಯ ಅಧಿಕಾರ ನಡೆಸಿದವರು ಮತ್ತು ಸಾಮಾನ್ಯ ನೀತಿ ಹೇಳಿಕೆ ನೀಡದ ಏಕೈಕ ಪ್ರಧಾನಿಯೆಂಬ ದಾಖಲೆಯನ್ನು ಅವರು ನಿರ್ಮಿಸಿದ್ದಾರೆ. ಕಳೆದ 26 ದಿನಗಳಿಂದ ಅವರು ಸಂಪುಟ ರಚನೆ ಮಾಡಿರಲಿಲ್ಲ. ಇಡೀ ಸರ್ಕಾರದಲ್ಲಿ ಪ್ರಧಾನಿಯಾದ ಅವರು ಮಾತ್ರ ಇದ್ದರು.

ಲೆಕಾರ್ನು ಅವರ ರಾಜೀನಾಮೆ ಫ್ರಾನ್ಸ್‌ನ ರಾಜಕೀಯ ವ್ಯವಸ್ಥೆಯಲ್ಲಿ ಬೆಳೆಯುತ್ತಿರುವ ಉದ್ವಿಗ್ನತೆಯನ್ನು ಒತ್ತಿಹೇಳುತ್ತದೆ. ಅದರಲ್ಲೂ ವಿಶೇಷವಾಗಿ ಅಲ್ಲಿನ ಸರ್ಕಾರವು ತನ್ನ ಬಜೆಟ್ ಕೊರತೆಯನ್ನು ನಿಭಾಯಿಸುವ ಮತ್ತು ಅದರ ಒತ್ತಡಕ್ಕೊಳಗಾದ ಸಾರ್ವಜನಿಕ ಹಣಕಾಸುಗಳನ್ನು ನಿರ್ವಹಿಸುವ ಸಾಮರ್ಥ್ಯದ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಮ್ಯಾಕ್ರನ್‌ರ ಹಿಂದಿನ ಪ್ರಧಾನ ಮಂತ್ರಿಗಳಾದ ಬೇರೂ ಮತ್ತು ಬಾರ್ನಿಯರ್ ಅವರನ್ನು ಬಜೆಟ್ ಕೊರತೆಯನ್ನು ನಿರ್ವಹಿಸದಿದ್ದಕ್ಕಾಗಿ ಪದಚ್ಯುತಗೊಳಿಸಲಾಗಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:03 pm, Mon, 6 October 25