ಪ್ರತಿಷ್ಠಿತ ಸುದ್ದಿ ಸಂಸ್ಥೆಯಲ್ಲಿ ಕಳೆದ 15 ವರ್ಷಗಳಿಂದ ಕೆಲಸ, ಬೆಳಗ್ಗೆ ಎದ್ದಾಗಿನಿಂದ ಸಂಜೆ ಮಲಗುವವರೆಗೂ ಎಷ್ಟೊತ್ತಿಗೋ ಊಟ, ಎಷ್ಟೊತ್ತಿಗೋ ತಿಂಡಿ, ಕುಟುಂಬದವರ ಮುಖ ನೋಡುವುದೂ ಅಪರೂಪ, ಸ್ನೇಹಿತರಿಲ್ಲ, ಬಂಧುಗಳ ಪರಿಚಯವನ್ನು ಮಾಡಿಕೊಳ್ಳಲು ಸಮಯವಿರದಂತಹ ಪರಿಸ್ಥಿತಿ. ಜತೆಗೆ ಕಚೇರಿಯಲ್ಲಿ ವಿಪರೀತ ಕೆಲಸ ಈ ಕೆಲಸ ಸಾಕಪ್ಪಾ ಸಾಕು ಎನ್ನುವಷ್ಟು ಬೇಸರ. ಹೀಗಿರುವಾಗ ಚೀನಾದ ಮಹಿಳೆಗೆ ಆಕೆಯ ಪೋಷಕರೇ ಒಂದು ಆಫರ್ ನೀಡುತ್ತಾರೆ.
ಕೆಲಸವನ್ನು ಬಿಟ್ಟು ನಮ್ಮ ಜತೆ ಬಂದುಬಿಡು, ನಿನಗೆ ತಿಂಗಳಿಗೆ 570 ಡಾಲರ್ ಅಂದರೆ ಸುಮಾರು 47 ಸಾವಿರ ರೂ. ವೇತನ ನೀಡುವುದಾಗಿ ಆಫರ್ ಕೊಟ್ಟೇಬಿಟ್ಟರು. ನೋಡು ನಮ್ಮನ್ನು ನೋಡಿಕೊಂಡು, ನಮ್ಮ ಜತೆ ಆರಾಮಾಗಿ ಇರ್ತೀಯಾ ಅತ್ವಾ ಇದೇ ತಲೆನೋವಿನ ಕೆಲಸವನ್ನು ಮುಂದುವರೆಸುತ್ತೀರಾ ಎಂದು.
ಆಕೆ ಒಪ್ಪೇ ಬಿಟ್ಟಳು ಲಕ್ಷಾಂತರ ರೂ. ಸಂಬಳ ಬರುವ ಕೆಲಸವನ್ನು ಬಿಟ್ಟು ಫುಲ್ ಟೈಂ ಡಾಲರ್ ಆಗಿಯೇ ಬಿಟ್ಟಳು. ಪೋಷಕರ ನಿವೃತ್ತದ ಪಿಂಚಣಿ 10 ಸಾವಿರ ಯುವಾನ್ಗಿಂತಲೂ ಹೆಚ್ಚು, ಅದರಲ್ಲಿ 4 ಸಾವಿರ ಯುವಾನ್ ಅನ್ನು ಮಗಳಿಗೆ ಕೊಡುವುದಾಗಿ ಹೇಳಿದ್ದಾರೆ.
ಅವರ ದಿನಚರಿ ಏನು ಗೊತ್ತಾ?
ಬೆಳಗ್ಗೆ 1 ಗಂಟೆ ಪೋಷಕರೊಂದಿಗೆ ನೃತ್ಯ ಮಾಡುವುದು, ಬಳಿಕ ದಿನಸಿ ಶಾಪಿಂಗ್ಗೆ ತೆರಳುವುದು, ತಂದೆಯೊಂದಿಗೆ ರುಚಿ ರುಚಿಯಾದ ಅಡುಗೆ ಮಾಡುವುದು, ತಿಂಗಳ ಕೊನೆಯಲ್ಲಿ ಎಲ್ಲಿಗಾದರೂ ಪ್ರವಾಸಕ್ಕೆ ಹೋಗುವುದು ಇಷ್ಟೇ ಆಕೆಯ ಕೆಲಸ.
ಒಂದೊಮ್ಮೆ ನಿನಗೆ ಸೂಕ್ತವಾದ ಉದ್ಯೋಗ ಸಿಕ್ಕರೆ ಹೋಗು, ಅಥವಾ ಕೆಲಸ ಮಾಡುವ ಮನಸ್ಥಿತಿ ಇಲ್ಲದಿದ್ದರೆ ಇಲ್ಲಿಯೇ ನಮ್ಮೊಂದಿಗೆ ಇದ್ದುಬಿಡು ಎನ್ನುತ್ತಾರೆ ಪೋಷಕರು. ಎಷ್ಟು ಮಂದಿಗೆ ಈ ರೀತಿ ತಮ್ಮ ಪೋಷಕರೊಂದಿಗೆ ಕಳೆಯಲು ಸಮಯ ಸಿಗುತ್ತೆ ಹೇಳಿ, ಕೆಲವರು ಇದು ಪೋಷಕರ ಅವಲಂಬನೆಯನ್ನು ಶಾಶ್ವತಗೊಳಿಸುತ್ತದೆ ಎಂದಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ