Arizona News: ಬೆಂಕಿಗೆ ಸಿಲುಕಿದ ಕುಟುಂಬವನ್ನು ಕಾಪಾಡಿದ ನಿರಾಶ್ರಿತ; ಧೈರ್ಯ ಮತ್ತು ನಿಸ್ವಾರ್ಥತೆಯ ಪ್ರತಿರೂಪ!

ಜೋ ಹೋಲಿನ್ಸ್ ಎಂಬ ನಿರಾಶ್ರಿತ ವ್ಯಕ್ತಿ ಅಪಾರ್ಟ್ಮೆಂಟ್ ಬೆಂಕಿಯಿಂದ ಕುಟುಂಬ ಮತ್ತು ಅವರ ಎರಡು ನಾಯಿಗಳನ್ನು ರಕ್ಷಿಸಿದ್ದಾರೆ. ನಾವು ಇವರಿಗೆ ಸದ್ದಾ ಚಿರಋಣಿ ಎಂದು ಹೇಳಿದರು.

Arizona News: ಬೆಂಕಿಗೆ ಸಿಲುಕಿದ ಕುಟುಂಬವನ್ನು ಕಾಪಾಡಿದ ನಿರಾಶ್ರಿತ; ಧೈರ್ಯ ಮತ್ತು ನಿಸ್ವಾರ್ಥತೆಯ ಪ್ರತಿರೂಪ!
ಜೋ ಹೋಲಿನ್ಸ್, ಕುಟುಂಬ Image Credit source: India Times
Follow us
ನಯನಾ ಎಸ್​ಪಿ
|

Updated on: May 28, 2023 | 4:29 PM

ಫೀನಿಕ್ಸ್: ಶೌರ್ಯ ಮತ್ತು ನಿಸ್ವಾರ್ಥತೆಯನ್ನು ಪ್ರತಿನಿಧಿಸುವ ಸ್ಪೂರ್ತಿದಾಯಕ ಘಟನೆಯೊಂದರಲ್ಲಿ (Inspirational Story), ಜೋ ಹೋಲಿನ್ಸ್ (Joe Hollins) ಎಂಬ ನಿರಾಶ್ರಿತ ವ್ಯಕ್ತಿ ಅಪಾರ್ಟ್ಮೆಂಟ್ ಬೆಂಕಿಯಿಂದ ಕುಟುಂಬ ಮತ್ತು ಅವರ ಎರಡು ನಾಯಿಗಳನ್ನು ರಕ್ಷಿಸಿದ್ದಾರೆ. ನಾವು ಇವರಿಗೆ ಸದ್ದಾ ಚಿರಋಣಿ ಎಂದು ಹೇಳಿದರು. ಹೋಲಿನ್ಸ್, ಕುಟುಂಬದ ಇಬ್ಬರು ಚಿಕ್ಕ ಹೆಣ್ಣುಮಕ್ಕಳು ಮತ್ತು ಅವರ ಸಾಕುಪ್ರಾಣಿಗಳನ್ನು ಎರಡನೇ ಅಂತಸ್ತಿನ ಕಿಟಕಿಯಿಂದ ಹೊರ ಹಾಕಿದಾಗ ಅವರನ್ನು ಹಿಡಿಯಲು ತನ್ನ ಸ್ವಂತ ಸುರಕ್ಷತೆಯನ್ನು ಪಣಕ್ಕಿಟ್ಟರು. ಅವರ ವಿನಮ್ರ ಸ್ವಭಾವದ ಹೊರತಾಗಿಯೂ, ಹಾಲಿನ್ಸ್ ಅವರ ವೀರೋಚಿತ ಕ್ರಮಗಳು ಕುಟುಂಬ ಮತ್ತು ಸಮುದಾಯದಿಂದ ವ್ಯಾಪಕವಾದ ಮನ್ನಣೆ ಮತ್ತು ಕೃತಜ್ಞತೆಯನ್ನು ಗಳಿಸಿವೆ.

ಜೋ ಹೋಲಿನ್ಸ್, ಫೀನಿಕ್ಸ್‌ನಲ್ಲಿ ಮನೆಯಿಲ್ಲದ ವ್ಯಕ್ತಿ, ಮೂರು ಜನರ ಕುಟುಂಬ ಮತ್ತು ಅವರ ಎರಡು ನಾಯಿಗಳನ್ನು ಅಪಾರ್ಟ್‌ಮೆಂಟ್ ಬೆಂಕಿಯಿಂದ ರಕ್ಷಿಸಿದ ನಂತರ ಅಲ್ಲಿನ ಸಮಾಜದವರು ಇವರನ್ನು ಕೊಂಡಾಡಿದ್ದಾರೆ. ಅಪಾರ್ಟ್ಮೆಂಟ್​ ಬೆಂಕಿಗೆ ಸಿಲುಕಿದ ಕುಟುಂಬವೊಂದು ಸಹಾಯಕ್ಕಾಗಿ ಕರೆಯುತ್ತಿರುವಾಗ, ಹೋಲಿನ್ಸ್ ಘಟನಾ ಸ್ಥಳಕ್ಕೆ ಧಾವಿಸಿದರು ಮತ್ತು ಎರಡನೇ ಅಂತಸ್ತಿನ ಕಿಟಕಿಯ ಕೆಳಗೆ ನಿಂತು ಕುಟುಂಬವನ್ನು ರಕ್ಷಿಸಿದರು. ಗಮನಾರ್ಹವಾದ ಶೌರ್ಯದಿಂದ, ಅವರು ಕುಟುಂಬದ ಇಬ್ಬರು ಚಿಕ್ಕ ಹೆಣ್ಣುಮಕ್ಕಳನ್ನು ಮತ್ತು ಅವರ ಸಾಕುಪ್ರಾಣಿಗಳನ್ನು ಹಿಡಿದರು, ಇದರ ನಡುವೆ ತನ್ನ ಸುರಲಶತೆಯನ್ನು ಖಚಿತಪಡಿಸಿಕೊಂಡರು.

ತಮ್ಮ ಅಪಾರ್ಟ್‌ಮೆಂಟ್ ಮತ್ತು ಆಸ್ತಿಯನ್ನು ಕಳೆದುಕೊಂಡರೂ, ಕೃತಜ್ಞರಾಗಿರುವ ಕುಟುಂಬವು ಹಾಲಿನ್ಸ್‌ನ ನಿಸ್ವಾರ್ಥ ಕಾರ್ಯಕ್ಕೆ ಅಪಾರ ಕೃತಜ್ಞತೆಯನ್ನು ವ್ಯಕ್ತಪಡಿಸಿತು, “ನಮ್ಮ ಪಾಲಿನ ದೇವರು ಅವರು” ಎಂದು ಕುಟುಂಬದವರು ಹಾಲಿನ್ಸ್ ಅವರನ್ನು ಬಣ್ಣಿಸಿದ್ದಾರೆ. ಈ ಕುರಿತು ಮಾತನಾಡಿದ ಹಾಲಿನ್ಸ್ ಅಗತ್ಯವಿರುವ ಸಂದರ್ಭದಲ್ಲಿ ಯಾರೇ ಆದರೂ ಇದೆ ರೀತಿ ಮಾಡುತ್ತಿದ್ದರು ಎಂದು ತಮ್ಮ ನಿಸ್ವಾರ್ತ ಸೇವೆಯನ್ನು ಸಮರ್ಥಿಸಿಕೊಂಡರು ಹೇಳಿದರು.

ಇದನ್ನೂ ಓದಿ: ಬೆಳಗಾದರೆ ಮದುವೆ ಎನ್ನುವ ಖುಷಿಯಲ್ಲಿ ಮಲಗಿದ್ದ ಮದುಮಗಳು ಮತ್ತೆ ಏಳಲೇ ಇಲ್ಲ

ಈ ಹೃದಯಸ್ಪರ್ಶಿ ಕಥೆಯು ನಿಜವಾದ ವೀರತ್ವವು ಯಾವುದೇ ಗಡಿಗಳನ್ನು ತಿಳಿದಿಲ್ಲ ಮತ್ತು ಅತ್ಯಂತ ಅನಿರೀಕ್ಷಿತ ಸ್ಥಳಗಳಲ್ಲಿ ಕಂಡುಬರುತ್ತದೆ ಎಂಬುದನ್ನು ನೆನಪಿಸುತ್ತದೆ. ಹೊಲ್ಲಿನ್ಸ್ ಅವರ ಧೈರ್ಯದ ಹೆಜ್ಜೆ ಜೀವಗಳನ್ನು ಉಳಿಸಿದವು ಮಾತ್ರವಲ್ಲದೆ ಸಹಾನುಭೂತಿ ಮತ್ತು ಮಾನವೀಯತೆಯ ಶಕ್ತಿಯಲ್ಲಿ ನಂಬಿಕೆಯನ್ನು ಪುನಃಸ್ಥಾಪಿಸಿತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ