Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒತ್ತಡದ ಕೆಲಸ ಬಿಟ್ಟು ಈಗ ಫುಲ್​ ಟೈಂ ಡಾಟರ್, ಹೆತ್ತವರಿಂದಲೇ ತಿಂಗಳಿಗೆ 47 ಸಾವಿರ ರೂ. ವೇತನ ಪಡೆಯುವ ಮಹಿಳೆ

ಪ್ರತಿಷ್ಠಿತ ಸುದ್ದಿ ಸಂಸ್ಥೆಯಲ್ಲಿ ಕಳೆದ 15 ವರ್ಷಗಳಿಂದ ಕೆಲಸ, ಬೆಳಗ್ಗೆ ಎದ್ದಾಗಿನಿಂದ ಸಂಜೆ ಮಲಗುವವರೆಗೂ ಎಷ್ಟೊತ್ತಿಗೋ ಊಟ, ಎಷ್ಟೊತ್ತಿಗೋ ತಿಂಡಿ, ಕುಟುಂಬದವರ ಮುಖ ನೋಡುವುದೂ ಅಪರೂಪ, ಸ್ನೇಹಿತರಿಲ್ಲ, ಬಂಧುಗಳ ಪರಿಚಯವನ್ನು ಮಾಡಿಕೊಳ್ಳಲು ಸಮಯವಿರದಂತಹ ಪರಿಸ್ಥಿತಿ.

ಒತ್ತಡದ ಕೆಲಸ ಬಿಟ್ಟು ಈಗ ಫುಲ್​ ಟೈಂ ಡಾಟರ್, ಹೆತ್ತವರಿಂದಲೇ ತಿಂಗಳಿಗೆ 47 ಸಾವಿರ ರೂ. ವೇತನ ಪಡೆಯುವ ಮಹಿಳೆ
ಪೋಷಕರುImage Credit source: NDTV
Follow us
ನಯನಾ ರಾಜೀವ್
|

Updated on: May 29, 2023 | 8:17 AM

ಪ್ರತಿಷ್ಠಿತ ಸುದ್ದಿ ಸಂಸ್ಥೆಯಲ್ಲಿ ಕಳೆದ 15 ವರ್ಷಗಳಿಂದ ಕೆಲಸ, ಬೆಳಗ್ಗೆ ಎದ್ದಾಗಿನಿಂದ ಸಂಜೆ ಮಲಗುವವರೆಗೂ ಎಷ್ಟೊತ್ತಿಗೋ ಊಟ, ಎಷ್ಟೊತ್ತಿಗೋ ತಿಂಡಿ, ಕುಟುಂಬದವರ ಮುಖ ನೋಡುವುದೂ ಅಪರೂಪ, ಸ್ನೇಹಿತರಿಲ್ಲ, ಬಂಧುಗಳ ಪರಿಚಯವನ್ನು ಮಾಡಿಕೊಳ್ಳಲು ಸಮಯವಿರದಂತಹ ಪರಿಸ್ಥಿತಿ. ಜತೆಗೆ ಕಚೇರಿಯಲ್ಲಿ ವಿಪರೀತ ಕೆಲಸ ಈ ಕೆಲಸ ಸಾಕಪ್ಪಾ ಸಾಕು ಎನ್ನುವಷ್ಟು ಬೇಸರ. ಹೀಗಿರುವಾಗ ಚೀನಾದ ಮಹಿಳೆಗೆ ಆಕೆಯ ಪೋಷಕರೇ ಒಂದು ಆಫರ್ ನೀಡುತ್ತಾರೆ.

ಕೆಲಸವನ್ನು ಬಿಟ್ಟು ನಮ್ಮ ಜತೆ ಬಂದುಬಿಡು, ನಿನಗೆ ತಿಂಗಳಿಗೆ 570 ಡಾಲರ್ ಅಂದರೆ ಸುಮಾರು 47 ಸಾವಿರ ರೂ. ವೇತನ ನೀಡುವುದಾಗಿ ಆಫರ್ ಕೊಟ್ಟೇಬಿಟ್ಟರು. ನೋಡು ನಮ್ಮನ್ನು ನೋಡಿಕೊಂಡು, ನಮ್ಮ ಜತೆ ಆರಾಮಾಗಿ ಇರ್ತೀಯಾ ಅತ್ವಾ ಇದೇ ತಲೆನೋವಿನ ಕೆಲಸವನ್ನು ಮುಂದುವರೆಸುತ್ತೀರಾ ಎಂದು.

ಆಕೆ ಒಪ್ಪೇ ಬಿಟ್ಟಳು ಲಕ್ಷಾಂತರ ರೂ. ಸಂಬಳ ಬರುವ ಕೆಲಸವನ್ನು ಬಿಟ್ಟು ಫುಲ್​ ಟೈಂ ಡಾಲರ್​ ಆಗಿಯೇ ಬಿಟ್ಟಳು. ಪೋಷಕರ ನಿವೃತ್ತದ ಪಿಂಚಣಿ 10 ಸಾವಿರ ಯುವಾನ್​ಗಿಂತಲೂ ಹೆಚ್ಚು, ಅದರಲ್ಲಿ 4 ಸಾವಿರ ಯುವಾನ್​ ಅನ್ನು ಮಗಳಿಗೆ ಕೊಡುವುದಾಗಿ ಹೇಳಿದ್ದಾರೆ.

ಅವರ ದಿನಚರಿ ಏನು ಗೊತ್ತಾ? ಬೆಳಗ್ಗೆ 1 ಗಂಟೆ ಪೋಷಕರೊಂದಿಗೆ ನೃತ್ಯ ಮಾಡುವುದು, ಬಳಿಕ ದಿನಸಿ ಶಾಪಿಂಗ್​ಗೆ ತೆರಳುವುದು, ತಂದೆಯೊಂದಿಗೆ ರುಚಿ ರುಚಿಯಾದ ಅಡುಗೆ ಮಾಡುವುದು, ತಿಂಗಳ ಕೊನೆಯಲ್ಲಿ ಎಲ್ಲಿಗಾದರೂ ಪ್ರವಾಸಕ್ಕೆ ಹೋಗುವುದು ಇಷ್ಟೇ ಆಕೆಯ ಕೆಲಸ.

ಒಂದೊಮ್ಮೆ ನಿನಗೆ ಸೂಕ್ತವಾದ ಉದ್ಯೋಗ ಸಿಕ್ಕರೆ ಹೋಗು, ಅಥವಾ ಕೆಲಸ ಮಾಡುವ ಮನಸ್ಥಿತಿ ಇಲ್ಲದಿದ್ದರೆ ಇಲ್ಲಿಯೇ ನಮ್ಮೊಂದಿಗೆ ಇದ್ದುಬಿಡು ಎನ್ನುತ್ತಾರೆ ಪೋಷಕರು. ಎಷ್ಟು ಮಂದಿಗೆ ಈ ರೀತಿ ತಮ್ಮ ಪೋಷಕರೊಂದಿಗೆ ಕಳೆಯಲು ಸಮಯ ಸಿಗುತ್ತೆ ಹೇಳಿ,  ಕೆಲವರು ಇದು ಪೋಷಕರ ಅವಲಂಬನೆಯನ್ನು ಶಾಶ್ವತಗೊಳಿಸುತ್ತದೆ ಎಂದಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
ಇಂಜಿನಿಯರಿಂಗ್​​ಗೆ ಯಾವ ಕಾಲೇಜು, ಯಾವ ಕೋರ್ಸ್ ಬೆಸ್ಟ್?
ಇಂಜಿನಿಯರಿಂಗ್​​ಗೆ ಯಾವ ಕಾಲೇಜು, ಯಾವ ಕೋರ್ಸ್ ಬೆಸ್ಟ್?
ಮಾಜಿ ಪ್ರಧಾನಿಯ ಮಗನಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡ್ತೀನಾ? ಕುಮಾರಸ್ವಾಮಿ
ಮಾಜಿ ಪ್ರಧಾನಿಯ ಮಗನಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡ್ತೀನಾ? ಕುಮಾರಸ್ವಾಮಿ
ಪಂದ್ಯವಾಡು ಫೈನ್ ಕಟ್ಟು: ಬ್ಯಾಕ್ ಟು ಬ್ಯಾಕ್ ದಂಡ ಕಟ್ಟಿದ ದಿಗ್ವೇಶ್ ರಾಠಿ
ಪಂದ್ಯವಾಡು ಫೈನ್ ಕಟ್ಟು: ಬ್ಯಾಕ್ ಟು ಬ್ಯಾಕ್ ದಂಡ ಕಟ್ಟಿದ ದಿಗ್ವೇಶ್ ರಾಠಿ