ಪ್ರಧಾನಿ ಮೋದಿ ಕಾಣಿಕೆ ನೀಡಿದ್ದ ಬಾಂಗ್ಲಾದ ಜೇಶೋರೇಶ್ವರಿ ಕಾಳಿ ಮಾತೆಯ ಚಿನ್ನದ ಕಿರೀಟ ಕಳ್ಳರಪಾಲು -ವಿಡಿಯೋ ನೋಡಿ

|

Updated on: Oct 11, 2024 | 3:45 PM

goddess Kali Crown stolen in Satkhira temple: ಬಾಂಗ್ಲಾದೇಶದ ಈ ಕಾಳಿ ದೇವಸ್ಥಾನದ ಕಿರೀಟಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರಿಗೂ ವಿಶೇಷ ನಂಟಿದೆ. ಪ್ರಧಾನಿ ಮೋದಿ ಅವರು 2021 ರಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದಾಗ, ಅವರು ಈ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆಗಳನ್ನು ಮಾಡಿದರು. ಆದರೆ, ಈಗ ದುರ್ಗಾ ಪೂಜೆಯ ವಿಶೇಷ ಸಂದರ್ಭದಲ್ಲಿ ಈ ಕಿರೀಟವನ್ನು ಕಳವು ಮಾಡಲಾಗಿದೆ.

ಪ್ರಧಾನಿ ಮೋದಿ ಕಾಣಿಕೆ ನೀಡಿದ್ದ ಬಾಂಗ್ಲಾದ ಜೇಶೋರೇಶ್ವರಿ ಕಾಳಿ ಮಾತೆಯ ಚಿನ್ನದ ಕಿರೀಟ ಕಳ್ಳರಪಾಲು -ವಿಡಿಯೋ ನೋಡಿ
ಬಾಂಗ್ಲಾದ ಜೇಶೋರೇಶ್ವರಿ ಕಾಳಿ ಮಾತೆಯ ಚಿನ್ನದ ಕಿರೀಟ ಕಳ್ಳರಪಾಲು
Follow us on

Crown of goddess Kali stolen from Satkhira temple: ದೇಶಾದ್ಯಂತ ದೇವಿ ನವರಾತ್ರಿ ಸಂಭ್ರಮ ಜೋರಾಗಿದೆ. ದುರ್ಗಾಪೂಜೆ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ದುರ್ಗಾ ಪೂಜೆಯ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿ ಅಲ್ಲಿನ ಸರ್ಕಾರವು 4 ದಿನಗಳ ರಜೆಯನ್ನು ಘೋಷಿಸಿದೆ. ಇಡೀ ದೇಶವೇ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಿದೆ. ಮತ್ತೊಂದೆಡೆ, ಬಾಂಗ್ಲಾದೇಶದ ಸತ್ಖಿರಾ ನಗರದ ಶ್ಯಾಮನಗರದಲ್ಲಿರುವ (Shyamnagar) ಪ್ರಸಿದ್ಧ ಜೇಶೋರೇಶ್ವರಿ ಕಾಳಿ ದೇವಸ್ಥಾನದ ( (jeshoreshwari kali temple) ಚಿನ್ನದ ಕಿರೀಟವನ್ನು ಕಳವು ಮಾಡಲಾಗಿದೆ. ಈ ಕಳ್ಳತನದ ದೃಶ್ಯ ದೇವಸ್ಥಾನದ ಸಿಸಿಟಿವಿಯಲ್ಲಿ ದಾಖಲಾಗಿದೆ. ಅದರಲ್ಲಿ ಯುವಕನೊಬ್ಬ ಚಿನ್ನದ ಕಿರೀಟವನ್ನು ಹೊತ್ತಿರುವ ದೃಶ್ಯಗಳು ಬಹಿರಂಗಗೊಂಡಿವೆ.

ಬಾಂಗ್ಲಾದೇಶದ ಈ ಕಾಳಿ ದೇವಸ್ಥಾನದ ಕಿರೀಟಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರಿಗೂ ವಿಶೇಷ ನಂಟಿದೆ. ಪ್ರಧಾನಿ ಮೋದಿ ಅವರು 2021 ರಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದಾಗ, ಅವರು ಈ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆಗಳನ್ನು ಮಾಡಿದರು. ಇದಲ್ಲದೆ, ದೇಶಕ್ಕೆ ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ನೀಡಲಾಯಿತು. ಆದರೆ, ಈಗ ದುರ್ಗಾ ಪೂಜೆಯ ವಿಶೇಷ ಸಂದರ್ಭದಲ್ಲಿ ಈ ಕಿರೀಟವನ್ನು ಕಳವು ಮಾಡಲಾಗಿದೆ.

ಪ್ರಧಾನಿ ಮೋದಿ ಕಾಣಿಕೆ ನೀಡಿದ್ದ ಬಾಂಗ್ಲಾದ ಜೇಶೋರೇಶ್ವರಿ ಕಾಳಿ ಮಾತೆಯ ಚಿನ್ನದ ಕಿರೀಟ ಕಳ್ಳರಪಾಲು -ವಿಡಿಯೋ ನೋಡಿ

ಗುರುವಾರ (ಅಕ್ಟೋಬರ್ 10) ಮಧ್ಯಾಹ್ನ 2:47 ರಿಂದ 2:50 ರ ನಡುವೆ ದೇವಸ್ಥಾನದಲ್ಲಿ ಕಳ್ಳತನ ಘಟನೆ ನಡೆದಿದೆ. ದೇವಾಲಯದ ಅರ್ಚಕ ದಿಲೀಪ್ ಕುಮಾರ್ ಬ್ಯಾನರ್ಜಿ ದೈನಂದಿನ ಪೂಜೆಯನ್ನು ಪೂರ್ಣಗೊಳಿಸಿದ ನಂತರ, ದೇವಾಲಯದ ಬೀಗಗಳನ್ನು ಅದರ ನಿರ್ವಹಣೆಗಾಗಿ ರೇಖಾ ಸರ್ಕಾರ್‌ಗೆ ಹಸ್ತಾಂತರಿಸಲಾಯಿತು. ಆದರೆ ಬೇರೆ ಕೆಲಸದಲ್ಲಿ ನಿರತರಾಗಿದ್ದ ರೇಖಾ ಸರ್ಕಾರ್ ವಾಪಸ್ ಬಂದು ನೋಡಿದಾಗ ಕಾಳಿ ಮಾತೆಯ ಚಿನ್ನದ ಕಿರೀಟ ಕಾಣೆಯಾಗಿತ್ತು. ಈ ವಿಷಯವನ್ನು ಸಂಬಂಧಪಟ್ಟವರಿಗೆ ತಿಳಿಸಲಾಗಿದೆ ಎಂದು ರೇಖಾ ಸರ್ಕಾರ್ ಹೇಳಿದ್ದಾರೆ.

 

ಕಳ್ಳತನ ನಡೆದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸ್ ಠಾಣಾಧಿಕಾರಿ ಫಕರ್ ತೈಜುರ್ ರೆಹಮಾನ್ ಮಾತನಾಡಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ನೀಡಿದ ಉಡುಗೊರೆಯನ್ನು ಕದ್ದಿದ್ದಾರೆ. ಅದನ್ನು ಕಂಡುಹಿಡಿಯಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ತನಿಖೆ ನಡೆಯುತ್ತಿದೆ. ಆರೋಪಿಯನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಜೇಶೋರೇಶ್ವರಿ ದೇವಾಲಯವು 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ

ಈ ಕಿರೀಟವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ದೇಶದಲ್ಲಿ ದುರ್ಗಾಪೂಜೆಯನ್ನು ಸಕಲ ವಿಜೃಂಭಣೆಯಿಂದ ಆಚರಿಸುತ್ತಿರುವ ಈ ಹೊತ್ತಿನಲ್ಲಿ ಈ ಕಿರೀಟ ಕಳ್ಳತನವಾಗಿರುವುದು ಸಾಮಾನ್ಯ ಸಂಗತಿಯೇನಲ್ಲ. ಜೇಶೋರೇಶ್ವರಿ ದೇವಾಲಯವು 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ. “ಜೇಶೋರೇಶ್ವರಿ” ಎಂಬ ಹೆಸರಿನ ಅರ್ಥ “ಜೇಶೋರ್ ದೇವತೆ”. ಮಾರ್ಚ್ 27, 2021 ರಂದು ಬಾಂಗ್ಲಾದೇಶಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು ಜೆಶೋಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಅದೇ ದಿನ, ಪ್ರಧಾನಿ ಕಾಳಿ ದೇವಸ್ಥಾನದಲ್ಲಿ ದೇವರಿಗೆ ಚಿನ್ನದ ಕಿರೀಟವನ್ನು ತೊಡಿಸಿದರು.

Published On - 11:46 am, Fri, 11 October 24