Modi and James Marape: ಪ್ರಧಾನಿ ಮೋದಿ ಕಾಲು ಮುಟ್ಟಿ ನಮಸ್ಕರಿಸಿದ ಪಪುವಾ ನ್ಯೂ ಗಿನಿಯಾ ಪ್ರಧಾನಿ ಜೇಮ್ಸ್ ಮರಾಪೆ

|

Updated on: May 21, 2023 | 8:34 PM

ಪಪುವಾ ನ್ಯೂ ಗಿನಿಯಾ ದೇಶದ ಪೋರ್ಟ್ ಮೊರೆಸ್ಬಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಅಲ್ಲಿನ ಪ್ರಧಾನಿ ಜೇಮ್ಸ್ ಮರಾಪೆ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಅಚ್ಚರಿ ಎಂಬಂತೆ, ಜೇಮ್ಸ್ ಮರಾಪೆ ಅವರು ಪ್ರಧಾನಿ ಮೋದಿಯವರ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು.

ಜಪಾನ್‌ನ ಹಿರೋಷಿಮಾದಲ್ಲಿ ನಡೆದ ಗ್ರೂಪ್ ಆಫ್ ಸೆವೆನ್ (ಜಿ7) ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೂರು ರಾಷ್ಟ್ರಗಳ ಪ್ರವಾಸದ ಭಾಗವಾಗಿ ಪಪುವಾ ನ್ಯೂ ಗಿನಿಯಾಗೆ (Papua New Guinea) ಭೇಟಿ ನೀಡಿದ್ದಾರೆ. ಪೋರ್ಟ್ ಮೊರೆಸ್ಬಿಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಪಪುವಾ ನ್ಯೂಗಿನಿಯಾ ಪ್ರಧಾನಿ ಜೇಮ್ಸ್ ಮರಾಪೆ (James Marape) ಅವರು ಆತ್ಮೀಯವಾಗಿ ಸ್ವಾಗತಿಸಿದರು. ಅಚ್ಚರಿ ಎಂಬಂತೆ, ಜೇಮ್ಸ್ ಮರಾಪೆ ಅವರು ಪ್ರಧಾನಿ ಮೋದಿಯವರ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು.

ಜೇಮ್ಸ್ ಮರಾಪೆ ಅವರು ಕಾಲಿಗೆ ಬೀಳುತ್ತಿದ್ದಂತೆ ತಡೆದ ಮೋದಿ ಈ ರೀತಿ ಮಾಡಬೇಡಿ ಎಂದು ಸೂಚಿಸಿದರಾದರೂ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ. ಬಳಿಕ ಪ್ರಧಾನಿ ಮೋದಿ ಅವರು ಮರಾಪೆ ಅವರ ಬೆನ್ನು ತಟ್ಟಿದರಲ್ಲದೆ ಪರಸ್ಪರ ನಗುತ್ತಾ ಮಾತನಾಡಿಕೊಂಡು ಸ್ನೇಹಪರ ಅಪ್ಪುಗೆ ಮಾಡಿಕೊಂಡರು. ನಂತರ ಮರಪೆ ಅವರು ಮೋದಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಪರಿಚಯಿಸಿದರು.

ಪಪುವಾ ನ್ಯೂ ಗಿನಿಯಾದಲ್ಲಿ ನೀಡಿದ ಆತ್ಮೀಯ ಸ್ವಾಗತದ ಬಗ್ಗೆ ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, “ಪಪುವಾ ನ್ಯೂ ಗಿನಿಯಾ ತಲುಪಿತ್ತೇನೆ. ವಿಮಾನ ನಿಲ್ದಾಣಕ್ಕೆ ಬಂದು ನನ್ನನ್ನು ಸ್ವಾಗತಿಸಿದ್ದಕ್ಕಾಗಿ ನಾನು ಪ್ರಧಾನಿ ಜೇಮ್ಸ್ ಮರಪೆ ಅವರಿಗೆ ಕೃತಜ್ಞನಾಗಿದ್ದೇನೆ. ಇದು ಬಹಳ ವಿಶೇಷ ಗೆಶ್ಚರ್ ಆಗಿದೆ, ನಾನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ನನ್ನ ಭೇಟಿಯ ಸಮಯದಲ್ಲಿ ಈ ಮಹಾನ್ ರಾಷ್ಟ್ರದೊಂದಿಗೆ ಭಾರತದ ಸಂಬಂಧವನ್ನು ಹೆಚ್ಚಿಸಲು ನಾನು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Quad Statement: ಚೀನಾಗೆ ಪರೋಕ್ಷವಾಗಿ ಕುಟುಕಿದ ಕ್ವಾಡ್ ಗುಂಪು; ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ರಿಷಿ ಭೇಟಿ

ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಪಪುವಾ ನ್ಯೂ ಗಿನಿಯಾಗೆ ಭೇಟಿ ನೀಡಿದ್ದಾರೆ. ಜಪಾನ್‌ ದೇಶದ ಭೇಟಿಯ ನಂತರ, ಮೂರು ರಾಷ್ಟ್ರಗಳ ಪ್ರವಾಸದ ಭಾಗವಾಗಿ ಪ್ರಧಾನಿ ಮೋದಿ ಪಪುವಾ ನ್ಯೂ ಗಿನಿಯಾಗೆ ಆಗಮಿಸಿದರು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಪಪುವಾ ನ್ಯೂ ಗಿನಿಯಾದಲ್ಲಿರುವ ಭಾರತೀಯ ವಲಸಿಗರೂ ಪ್ರಧಾನಿ ಮೋದಿಯವರಿಗೆ ಆತ್ಮೀಯ ಸ್ವಾಗತ ನೀಡಿದರು. ಇದೇ ವೇಳೆ ಪ್ರಧಾನಿ ಜೊತೆ ಸೆಲ್ಫಿ ತೆಗೆದುಕೊಂಡರು.

ಪಪುವಾ ನ್ಯೂ ಗಿನಿಯಾದಲ್ಲಿ, ಪ್ರಧಾನಿ ಮೋದಿ ಅವರು ಸೋಮವಾರ ಜೇಮ್ಸ್ ಮರಾಪೆ ಅವರೊಂದಿಗೆ ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರ ವೇದಿಕೆಯ (ಎಫ್‌ಪಿಐಸಿ) ಮೂರನೇ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. “ಈ ಮಹತ್ವದ ಶೃಂಗಸಭೆಗೆ (ಎಫ್‌ಐಪಿಐಸಿ) ಆಹ್ವಾನಿಸಿದ್ದಕ್ಕಾಗಿ ನಾನು 14 ಪೆಸಿಫಿಕ್ ದ್ವೀಪ ರಾಷ್ಟ್ರಗಳಿಗೆ (ಪಿಐಸಿ) ಕೃತಜ್ಞನಾಗಿದ್ದೇನೆ” ಎಂದು ಮೋದಿ ಈ ಹಿಂದೆ ಹೇಳಿದ್ದರು.

ಆದಾಗ್ಯೂ, ಸೂರ್ಯಾಸ್ತದ ನಂತರ ಬರುವ ವಿಶ್ವದ ಯಾವುದೇ ನಾಯಕರಿಗೆ ಪಪುವಾ ನ್ಯೂ ಗಿನಿಯಾ ಸಾಮಾನ್ಯವಾಗಿ ಸ್ವಾಗತವನ್ನು ನೀಡುವುದಿಲ್ಲ. ಆದರೆ, ಪ್ರಧಾನಿ ಮೋದಿಗೆ ವಿಶೇಷ ವಿನಾಯಿತಿ ನೀಡಲಾಗಿದೆ ಎಂದು ಅಧಿಕೃತವಾಗಿ ಆದೇಶದಲ್ಲಿ ತಿಳಿಸಲಾಗಿದೆ. ಪ್ರಧಾನಿ ಮೋದಿ ಅವರಿಗೆ ಪೂರ್ಣ ಔಪಚಾರಿಕ ಸ್ವಾಗತ ನೀಡಲಿದ್ದಾರೆ ಎಂದು ತಿಳಿಸಿದೆ.

ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ