ಮೋದಿ ಕೊಟ್ಟ ಸವಲತ್ತು ಅನುಭವಿಸಿ ಚುನಾವಣೆಯಲ್ಲಿ ಬಿಜೆಪಿಗೆ ಮೋಸ: ಸಂಸದ ಎಸ್ ಮುನಿಸ್ವಾಮಿ
ಕೋಲಾರದಲ್ಲಿ ಪರಾಜಿತ ಬಿಜೆಪಿ ಅಭ್ಯರ್ಥಿ ವರ್ತೂರ್ ಪ್ರಕಾಶ್ ವತಿಯಿಂದ ಆತ್ಮಾವಲಕೋನ ಸಭೆ ನಡೆಯಿತು. ಈ ವೇಳೆ ಸಂಸದ ಎಸ್ ಮುನಿಸ್ವಾಮಿ ಅವರು ಹೆಸರು ಹೇಳದೆ ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೋಲಾರ: ನರೇಂದ್ರ ಮೋದಿ (Narendra Modi) ಅವರು ಕೊಟ್ಟಿರುವ ಸಲತ್ತುಗಳನ್ನ ಅನುಭವಿಸಿ ಚುನಾಚಣೆಯಲ್ಲಿ ಬಿಜೆಪಿಗೆ ಮೋಸ ಮಾಡಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ (S Muniswamy) ವಾಗ್ದಾಳಿ ನಡೆಸಿದರು. ಪರಾಜಿತ ಬಿಜೆಪಿ ಅಭ್ಯರ್ಥಿ ವರ್ತೂರ್ ಪ್ರಕಾಶ್ (Varthur Prakash) ವತಿಯಿಂದ ಆಯೋಜಿಸಲಾದ ಆತ್ಮಾವಲೋಕನಾ ಸಭೆಯಲ್ಲಿ ಸಮುದಾಯದ ಹೆಸರು ಹೇಳದೆ ವಾಗ್ದಾಳಿ ನಡೆಸಿದ ಅವರು, ಈ ಚುನಾವಣೆಯಲ್ಲಿ ಬಿಜೆಪಿ ವಿರುದ್ದವಾಗಿ ಕೆಲಸ ಮಾಡಿರುವುದು ಒಂದು ಸಮುದಾಯ. ನಾವು ಇನ್ಮುಂದೆ ನಿಮ್ಮ ವಿರುದ್ದವಾಗಿ ಮಾಡುತ್ತೇವೆ ಎಂದು ಗುಡುಗಿದ್ದಾರೆ.
ನರೇಂದ್ರ ಮೋದಿ ಅವರು ಕೊಟ್ಟಿರುವ ಸೌಲತ್ತುಗಳನ್ನ ಅನುಭವಿಸಿದ ಸಮಯದಾಯದವರು ಮೋಸ ಮಾಡಿದ್ದಾರೆ. ಚುನಾವಣೆಯಲ್ಲಿ ನೀವು ನಮ್ಮ ವಿರುದ್ಧವಾಗಿ ಮಾಡಿದ್ದೀರ, ನಾವು ಇನ್ನು ಮುಂದೆ ನಿಮ್ಮ ವಿರುದ್ಧವಾಗಿ ಮಾಡುತ್ತೇವೆ. ಇದರಲ್ಲಿ ಎರಡು ಮಾತಿಲ್ಲ. ಅದೇನು ಮಾಡುತ್ತೀರ ನನ್ನ, ಕೇಸ್ ಹಾಕ್ತಿರಾ? ಹಾಕೊಳ್ಳಿ ನೋ ಪ್ರಾಬ್ಲಂ, ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ ಅಂತ ಖಾರವಾಗಿಯೇ ಆಗಿ ಹೇಳಿದ್ದಾರೆ. ಇಂದಲ್ಲ ನಾಳೆ ನಿಮಗೆ ಸತ್ಯದ ಅರಿವು ಆಗುತ್ತದೆ. ಇವತ್ತಲ್ಲ ನಾಳೆ ಕಾಂಗ್ರೇಸ್ ಪಕ್ಷಕ್ಕೆ ವೋಟ್ ಹಾಕಿದ ನೀವು ಅನುಭವಿಸುತ್ತೀರಿ ಎಂದು ಸಂಸದ ಮುನಿಸ್ವಾಮಿ ಹರಿಹಾಯ್ದರು.
ಇದನ್ನೂ ಓದಿ: G7 Summit: ನೀವು ತುಂಬಾ ಜನಪ್ರಿಯ ವ್ಯಕ್ತಿ; ಪ್ರಧಾನಿ ಮೋದಿರನ್ನು ಹೊಗಳಿದ ಅಮೆರಿಕ ಅಧ್ಯಕ್ಷ ಬೈಡನ್
ವರ್ತೂರ್ ಪ್ರಕಾಶ್ ಅವರಿಂದ ಕಾರ್ಯಕರ್ತರಿಗೆ ಚಿಕನ್ ಬಿರಿಯಾನಿ ಊಟ
ಚುನಾವಣೆಯಲ್ಲಿ ಸೋತರೂ ಬಿಜೆಪಿ ಅಭ್ಯರ್ಥಿ ವರ್ತೂರ್ ಪ್ರಕಾಶ್ ಅವರು ಪಕ್ಷದ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ್ ಹಾಕಿಸಿದ್ದಾರೆ. ಆತ್ಮಾವಲೋಕನಾ ಸಭೆಗೆ ಆಗಮಿಸಿದ ಎಲ್ಲಾ ಕಾರ್ಯಕರ್ತರಿಗೆ ಚಿಕನ್ ಬಿರಿಯಾನಿ ಊಟದ ವ್ಯವಸ್ಥೆ ಮಾಡಿದ್ದಾರೆ. ಈ ಸಭೆಯಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ