Grooming Gang: ಬ್ರಿಟನ್​ನಲ್ಲಿ ಪಾಕಿಸ್ತಾನಿ ಯುವಕರು ಯುವತಿಯರನ್ನು ಹೇಗೆ ಬಲೆಗೆ ಬೀಳಿಸ್ತಾರೆ ಗೊತ್ತಾ?

|

Updated on: Jan 16, 2025 | 10:43 AM

ಬ್ರಿಟನ್​ನಲ್ಲಿ ಪಾಕಿಸ್ತಾನಿ ಯುವಕರು ಅಲ್ಲಿಯ ಹುಡುಗಿಯರನ್ನು ಹೇಗೆ ಬಲೆಗೆ ಬೀಳಿಸಿ ಅವರ ಮೇಲೆ ಅತ್ಯಾಚಾರವೆಸಗುತ್ತಿದ್ದರು ಎಂಬುದರ ಕುರಿತು ಸಂತ್ರಸ್ತೆಯೊಬ್ಬರು ಮಾಹಿತಿ ನೀಡಿದ್ದಾರೆ. ಗ್ರೇಟ್ ಬ್ರಿಟನ್ ನ್ಯೂಸ್ ತನ್ನ ಸಾಕ್ಷ್ಯಚಿತ್ರವೊಂದರಲ್ಲಿ ಹುಡುಗಿಯ ಕತೆಯನ್ನು ಹೇಳಿದೆ. ಅಲ್ಲಿ ಆಕೆಯ ಹೆಸರನ್ನು ಎಮಿಲಿ ಎಂದು ಬದಲಾಯಿಸಲಾಗಿದೆ. ಇದನ್ನು ಒಬ್ಬ ನಟ ನಿರೂಪಿಸಿದ್ದಾರೆ. ಕಾಲೇಜಿನಲ್ಲಿ ಓದುತ್ತಿದ್ದಾಗ ಆಂಡ್ರಿಯಾ ಎಂಬ ಹುಡುಗಿಯ ಜತೆ ಸ್ನೇಹವಾಯಿತು ಎಂದು ಎಮಿಲಿ ಹೇಳುತ್ತಾಳೆ.

Grooming Gang: ಬ್ರಿಟನ್​ನಲ್ಲಿ ಪಾಕಿಸ್ತಾನಿ ಯುವಕರು ಯುವತಿಯರನ್ನು ಹೇಗೆ ಬಲೆಗೆ ಬೀಳಿಸ್ತಾರೆ ಗೊತ್ತಾ?
ಗ್ರೂಮಿಂಗ್ ಗ್ಯಾಂಗ್
Image Credit source: University college London
Follow us on

ಬ್ರಿಟನ್​ನಲ್ಲಿ ಯುವತಿಯರನ್ನು ಬಲೆಗೆ ಬೀಳಿಸಿ ಅತ್ಯಾಚಾರ ಮಾಡಿ ಎಸೆಯುವ ಪಾಕಿಸ್ತಾನಿ ಯುವಕರ ಗ್ಯಾಂಗ್​ ಪ್ರಸ್ತುತ ಚರ್ಚೆಯಲ್ಲಿದೆ. ಅವರು ಹೇಗೆ ಸುಲಭವಾಗಿ ಅಲ್ಲಿನ ಯುವತಿಯರನ್ನು ಹೇಗೆ ಬಲೆಗೆ ಬೀಳಿಸಿಕೊಳ್ಳುತ್ತಿದ್ದರು ಎಂಬುದರ ಬಗ್ಗೆ ಸಂತ್ರಸ್ತೆಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತು ನ್ಯೂಸ್​ಕ್ರ್ಯಾಬ್ ವರದಿ ಮಾಡಿದೆ. ಅದರ ಸಂಕ್ಷಿಪ್ತ ವಿವರ ಇಲ್ಲಿದೆ.
ಪಾಕಿಸ್ತಾನಿ ಮುಸ್ಲಿಮರು ಇತ್ತೀಚಿನ ದಿನಗಳಲ್ಲಿ ಚರ್ಚೆಯ ವಿಷಯವಾಗಿದೆ. ಬ್ರಿಟನ್​ನಲ್ಲಿರುವ ಗ್ರೂಮಿಂಗ್ ಗ್ಯಾಂಗ್ ಕತೆ ಬೆಳಕಿಗೆ ಬಂದ ನಂತರ ಹಲವು ಕರಾಳ ಕೃತ್ಯಗಳು ಕೂಡ ಬೆಳಕಿಗೆ ಬಂದಿವೆ. ಮುಸ್ಲಿಮರಿಂದ 1000 ಬಾರಿ ಅತ್ಯಾಚಾರಕ್ಕೊಳಗಾದ ಯುವತಿ ಹಲವು ಭಯಾನಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾಳೆ.

ಗ್ರೇಟ್ ಬ್ರಿಟನ್ ನ್ಯೂಸ್ ತನ್ನ ಸಾಕ್ಷ್ಯಚಿತ್ರವೊಂದರಲ್ಲಿ ಹುಡುಗಿಯ ಕತೆಯನ್ನು ಹೇಳಿದೆ. ಅಲ್ಲಿ ಆಕೆಯ ಹೆಸರನ್ನು ಎಮಿಲಿ ಎಂದು ಬದಲಾಯಿಸಲಾಗಿದೆ. ಇದನ್ನು ಒಬ್ಬ ನಟ ನಿರೂಪಿಸಿದ್ದಾರೆ. ಕಾಲೇಜಿನಲ್ಲಿ ಓದುತ್ತಿದ್ದಾಗ ಆಂಡ್ರಿಯಾ ಎಂಬ ಹುಡುಗಿಯ ಜತೆ ಸ್ನೇಹವಾಯಿತು ಎಂದು ಎಮಿಲಿ ಹೇಳುತ್ತಾಳೆ. ಆಂಡ್ರಿಯಾ ಎಮಿಲಿಯನ್ನು ಪಾಕಿಸ್ತಾನಿಯೊಬ್ಬರಿಗೆ ಪರಿಚಯಿಸುತ್ತಾಳೆ. ಆ ಹುಡುಗ ಕಬಾಬ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಎಮಿಲಿ ಆ ಅಂಗಡಿಗೆ ನಿಯಮಿತವಾಗಿ ಭೇಟಿ ನೀಡಲಾರಂಭಿಸಿದಳು. ಬಾಲಕ ಈಕೆಗೆ ಉಚಿತವಾಗಿ ಕಬಾಬ್ ಹಾಗೂ ಮದ್ಯವನ್ನು ನೀಡುತ್ತಿದ್ದ, ಇದಾದ ಬಳಿಕ ಆಕೆಗೆ ಉಷಿತವಾಗಿ ಸಿಗರೇಟ್ ಕೂಡ ಕೊಡಲಾರಂಭಿಸಿದ.

ಆಗ ತನಗೆ ವಯಸ್ಸು ಕಡಿಮೆ ಹಾಗಾಗಿ ಫ್ರೀ ಪಾರ್ಟಿಗಳನ್ನು ಇಷ್ಟಪಡಲು ಪ್ರಾರಂಭಿಸಿದ್ದೆ ಎಂದು ಆಕೆ ಹೇಳಿದ್ದಾಳೆ, ಒಂದು ದಿನ ಆಂಡ್ರಿಯಾ ತನ್ನನ್ನು ಅನೇಕ ಪಾಕಿಸ್ತಾನಿಗಳು ಕಬಾಬ್ ತಯಾರಿಸುವ ಸ್ಥಳಕ್ಕೆ ಕರೆದೊಯ್ದಳು. ಅಲ್ಲಿ 5-6 ಮುಸ್ಲಿಮರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದರು. ಆಕೆಯನ್ನು ಬೇರೆ ಬೇರೆ ಊರುಗಳಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ. ಈ ಬಗ್ಗೆ ಬಾಲಕಿಯ ತಾಯಿಗೂ ಸುಳಿವಿರಲಿಲ್ಲ. ಆಕೆಯ ಮೇಲೆ ಅತ್ಯಾಚಾರವೆಸಗುತ್ತಿದ್ದಾಗ ಆ ಹುಡುಗರು ಆಕೆಯನ್ನು ನಿಂದಿಸಿದ್ದರು. ಆಕೆಯನ್ನು ಬೆದರಿಸಿ ಅತ್ಯಾಚಾರವೆಸಗಲಾಗಿತ್ತು. ಸಾವಿರಕ್ಕೂ ಹೆಚ್ಚು ಜನರು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದರು.

ಮತ್ತಷ್ಟು ಓದಿ:
ಏಷ್ಯನ್ ಗ್ರೂಮಿಂಗ್ ಗ್ಯಾಂಗ್ ಹಣೆ ಪಟ್ಟಿ, ಯುಕೆ ಪ್ರಧಾನಿ ವಿರುದ್ಧ ಭಾರತೀಯರ ಆಕ್ರೋಶ

ಗ್ರೂಮಿಂಗ್ ಗ್ಯಾಂಗ್ ಎಂದರೆನು? ಇದು ಸ್ತ್ರೀಯರನ್ನು ಶೋಷಿಸುವಂಥ ಗ್ಯಾಂಗ್‌. ಬ್ರಿಟನ್ನಿನ ಹೆಣ್ಣುಮಕ್ಕಳೇ ಇವರ ಟಾರ್ಗೆಟ್‌. ಇಂಗ್ಲೆಂಡ್​ನಲ್ಲಿ ನೆಲೆ ನಿಂತಿರುವ ಶ್ರೀಮಂತರ ಮಕ್ಕಳೇ ಗ್ರೂಮಿಂಗ್‌ ಗ್ಯಾಂಗ್‌ನ ಖೆಡ್ಡಾಕ್ಕೆ ಬೀಳುತ್ತಿದ್ದಾರೆ. ಈ ಗ್ಯಾಂಗ್‌ನ ಸದಸ್ಯರು ಬ್ರಿಟಿಷ್‌ ಹೆಣ್ಮಕ್ಕಳನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಲೈಂಗಿಕವಾಗಿ ಬಳಸಿಕೊಂಡ ಸಹಸ್ರಾರು ಪ್ರಕರಣಗಳು ದಾಖಲಾಗಿವೆ. ಗ್ರೂಮಿಂಗ್‌ ಗ್ಯಾಂಗ್‌ಗಳ ಬಲೆಗೆ ಸಿಕ್ಕಿಬಿದ್ದವರ ಪೈಕಿ ಅಪ್ರಾಪ್ತರ ಸಂಖ್ಯೆ ಹೆಚ್ಚು.

ಬ್ರಿಟಿಷ್‌ ಹೆಣ್ಣುಮಕ್ಕಳನ್ನು ಬಲೆಗೆ ಬೀಳಿಸಿ ಹಣ ಸುಲಿಗೆ ಮಾಡುವುದೇ ಈ ಗ್ಯಾಂಗ್‌ನ ಮುಖ್ಯ ಗುರಿ. ಇದಕ್ಕಾಗಿ ವಿಡಿಯೊ ಬ್ಲಾಕ್‌ಮೇಲ್‌ ತಂತ್ರವನ್ನು ಇವರು ಅನುಸರಿಸುತ್ತಿದ್ದಾರೆ. ಕೆಲವು ತರುಣಿಯರು ಸಾಮೂಹಿಕ ಅತ್ಯಾಚಾರಕ್ಕೂ ತುತ್ತಾಗಿದ್ದಾರೆ ಎಂದು ಬಿಬಿಸಿ ವರದಿಗಳು ಹೇಳಿವೆ. ಈ ಎಲ್ಲ ಪ್ರಕರಣಗಳಲ್ಲೂ ಬ್ರಿಟಿಷರ ಆಸ್ತಿ, ಸಂಪತ್ತನ್ನು ದೋಚುವುದೇ ಪ್ರಧಾನ ದುರುದ್ದೇಶವಾಗಿರುವುದು ಬೆಳಕಿಗೆ ಬಂದಿದೆ.

ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ, ಸಿಂಗಲ್‌ ಚೈಲ್ಡ್‌ ಆಗಿ ಒಬ್ಬಂಟಿಯಾಗಿರುವ, ಖಿನ್ನತೆಯಂಥ ಮಾನಸಿಕ ಸಮಸ್ಯೆ ಎದುರಿಸುತ್ತಿರುವ ಹೆಣ್ಮಕ್ಕಳಿಗೆ ಬ್ರಿಟಿಷ್‌ ಪಾಕಿಸ್ತಾನಿ ಹುಡುಗರು ನೆರವಾಗುವ ನಾಟಕವಾಡುತ್ತಾರೆ. ಆರಂಭದಲ್ಲಿ ಉಡುಗೊರೆಗಳನ್ನು ನೀಡಿ ರಂಜಿಸುತ್ತಾರೆ. ಕ್ರಮೇಣ ಈ ಸಲುಗೆ ಪ್ರೀತಿಗೆ ತಿರುಗುತ್ತದೆ. ಪಾರ್ಟಿಗಳಿಗೆ ಕರೆದೊಯ್ದು, ಮದ್ಯ ಮತ್ತು ಡ್ರಗ್ಸ್ ವ್ಯಸನಕ್ಕೆ ತಳ್ಳುತ್ತಾರೆ. ಹುಡುಗಿಯರು ಅವರನ್ನು ನಂಬುತ್ತಿದ್ದಂತೆಯೇ ಲೈಂಗಿಕವಾಗಿ ಬಳಸಿಕೊಳ್ಳುತ್ತಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ