Hajj: ಹಜ್ ಯಾತ್ರೆಗೆ ತೆರಳುವ ಮಹಿಳೆಯರಿಗೆ ಇನ್ನು ಪುರುಷರ ರಕ್ಷಣೆ ಬೇಕಾಗಿಲ್ಲ; ಸೌದಿ ಸರ್ಕಾರ ಮಹತ್ವದ ಆದೇಶ

| Updated By: ಸುಷ್ಮಾ ಚಕ್ರೆ

Updated on: Oct 14, 2022 | 8:36 AM

ಹಜ್ ಯಾತ್ರೆಗೆ ತೆರಳುವ ಮಹಿಳೆಯರ ಜೊತೆ ಪುರುಷರು ಇರಲೇಬೇಕಿತ್ತು. ಆದರೆ, ಇದೀಗ ಸೌದಿ ಅರೇಬಿಯಾ ಆ ನಿಯಮದಲ್ಲಿ ಬದಲಾವಣೆಗಳನ್ನು ಮಾಡಿ, ಮಹಿಳೆಯರು ಸ್ವತಂತ್ರರಾಗಿ ಹಜ್ ಯಾತ್ರೆಗೆ ತೆರಳಲು ಅವಕಾಶ ನೀಡಿದೆ.

Hajj: ಹಜ್ ಯಾತ್ರೆಗೆ ತೆರಳುವ ಮಹಿಳೆಯರಿಗೆ ಇನ್ನು ಪುರುಷರ ರಕ್ಷಣೆ ಬೇಕಾಗಿಲ್ಲ; ಸೌದಿ ಸರ್ಕಾರ ಮಹತ್ವದ ಆದೇಶ
ಹಜ್ ಯಾತ್ರೆ
Follow us on

ನವದೆಹಲಿ: ಮುಸ್ಲಿಮರ ಪವಿತ್ರ ಹಜ್ ಯಾತ್ರೆಗೆ (Hajj Yatra) ಇನ್ನುಮುಂದೆ ಮಹಿಳೆಯರು ಪುರುಷರ ಜೊತೆಯಲ್ಲೇ ಹೋಗಬೇಕೆಂಬ ನಿಯಮವಿಲ್ಲ. ಮಹಿಳೆಯರು ಏಕಾಂಗಿಯಾಗಿ ಅಥವಾ ಮಹಿಳೆಯರ ಜೊತೆಯಲ್ಲೇ ಹಜ್ ಯಾತ್ರೆಗೆ ಹೋಗಲು ಅವಕಾಶ ನೀಡಲಾಗಿದೆ. ಸೌದಿ ಅರೇಬಿಯಾದ (Saudi Arabia) ಪ್ರಧಾನಿಯಾಗಿರುವ ಮಹಾರಾಜ ಮೊಹಮ್ಮದ್ ಬಿನ್ ಸಲ್ಮಾನ್ ಈ ನಿಟ್ಟಿನಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದ್ದಾರೆ.

ಹಜ್ ಇಸ್ಲಾಂ ಧರ್ಮದ 5 ಸ್ತಂಭಗಳಲ್ಲಿ ಒಂದಾಗಿದೆ. ಜೀವನದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆಗೆ ತೆರಳಬೇಕೆಂದು ಮುಸ್ಲಿಮರು ಬಯಸುತ್ತಾರೆ. ಇದುವರೆಗೂ ಹಜ್ ಯಾತ್ರೆಗೆ ತೆರಳುವ ಮಹಿಳೆಯರ ಜೊತೆ ಪುರುಷರು ಇರಲೇಬೇಕಿತ್ತು. ಪುರುಷರ ರಕ್ಷಣೆ ಇಲ್ಲದೆ ಮಹಿಳೆಯರು ಹಜ್​ ಯಾತ್ರೆಗೆ ಹೋಗುವಂತಿರಲಿಲ್ಲ. ಆದರೆ, ಇದೀಗ ಸೌದಿ ಅರೇಬಿಯಾ ಆ ನಿಯಮದಲ್ಲಿ ಬದಲಾವಣೆಗಳನ್ನು ಮಾಡಿ, ಮಹಿಳೆಯರು ಸ್ವತಂತ್ರರಾಗಿ ಹಜ್ ಯಾತ್ರೆಗೆ ತೆರಳಲು ಅವಕಾಶ ನೀಡಿದೆ.

ಇದನ್ನೂ ಓದಿ: ಹಜ್ ಯಾತ್ರೆ, ಉಮ್ರಾ ಸೇವೆಗಳ ಮೇಲಿನ ಜಿಎಸ್​​ಟಿಯಿಂದ ವಿನಾಯಿತಿ ಕೋರಿದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ಮೆಕ್ಕಾಗೆ ಮುಸ್ಲಿಂ ಮಹಿಳೆಯರು ಇನ್ನುಮುಂದೆ ಯಾವುದೇ ಪುರುಷರ ರಕ್ಷಣೆ ಇಲ್ಲದೆ ತೆರಳಬಹುದು. ಹಾಗೇ, ಈ ಹಜ್ ಯಾತ್ರೆಗೆ ಬರುವ ಮಹಿಳೆಯರಿಗೆ ಯಾವುದೇ ತೊಂದರೆ ಆಗಬಾರದೆಂದು ಮಹಿಳೆಯರಿಗೆ ಸುರಕ್ಷತೆಯನ್ನೂ ಹೆಚ್ಚಿಸಲಾಗಿದೆ. ಈ ಬಗ್ಗೆ ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವ ತೌಫಿಕ್ ಬಿನ್ ಫೌಜಾನ್ ಅಲ್-ರಬಿಯಾ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ.

ಹಜ್ ಯಾತ್ರೆಗೆ ಗಲ್ಫ್ ರಾಷ್ಟ್ರಕ್ಕೆ ಪ್ರಯಾಣಿಸುವ ಮಹಿಳೆಯರು ಈಗ ಮಹರಮ್ (ಪುರುಷ ರಕ್ಷಕರು) ಇಲ್ಲದೆ ಬರಬಹುದು ಎಂದು ಅರಬ್ ನ್ಯೂಸ್ ವರದಿ ಮಾಡಿದೆ. ಕಳೆದ ವರ್ಷವೂ ಪುರುಷರ ರಕ್ಷಣೆ ಇಲ್ಲದೆ ಮಹಿಳೆಯರಿಗೆ ಹಜ್ ಯಾತ್ರೆಗೆ ಬರಲು ಅನುಮತಿ ನೀಡಲಾಗಿತ್ತು. ನಂತರ ಮಹಿಳೆಯರು ಇನ್ನೊಬ್ಬ ಮಹಿಳೆಯೊಂದಿಗೆ ಬರಬಹುದು ಎಂದು ಸೂಚಿಸಲಾಗಿತ್ತು. ಆದರೆ, ಈ ವರ್ಷದ ಆದೇಶದಲ್ಲಿ ಮಹಿಳೆಯರೂ ಒಂಟಿಯಾಗಿ ಹಜ್ ತೀರ್ಥಯಾತ್ರೆಗೆ ಬರಬಹುದು. ಮಹಿಳೆಯರು ಯಾವುದೇ ರೀತಿಯ ವೀಸಾದೊಂದಿಗೆ ಹಜ್ ಯಾತ್ರೆಗೆ ಸೌದಿ ಅರೇಬಿಯಾಕ್ಕೆ ಬರಬಹುದು ಎಂದು ಹೇಳಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ