ಸಿಡ್ನಿಯಲ್ಲಿರುವ ಹ್ಯಾರಿಸ್ ಪಾರ್ಕ್​​ಗೆ ಮರು ನಾಮಕರಣ; ‘ಲಿಟಲ್ ಇಂಡಿಯಾ’ ಗೇಟ್‌ವೇಗೆ ಮೋದಿ ಶಂಕುಸ್ಥಾಪನೆ

|

Updated on: May 23, 2023 | 5:53 PM

ಕ್ಯುಡೋಸ್ ಬ್ಯಾಂಕ್ ಅರೆನಾದಲ್ಲಿ ನಡೆದ ಸಮುದಾಯ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದ ಆಸ್ಟ್ರೇಲಿಯಾದ ಪ್ರಧಾನಿ ಅಲ್ಬನೀಸ್ ಅವರು ಹ್ಯಾರಿಸ್ ಪಾರ್ಕ್ ಅನ್ನು 'ಲಿಟಲ್ ಇಂಡಿಯಾ' ಎಂದು ಮರುನಾಮಕರಣ ಮಾಡುವುದಾಗಿ ಘೋಷಣೆ ಮಾಡಿದರು.

ಸಿಡ್ನಿಯಲ್ಲಿರುವ ಹ್ಯಾರಿಸ್ ಪಾರ್ಕ್​​ಗೆ ಮರು ನಾಮಕರಣ; ಲಿಟಲ್ ಇಂಡಿಯಾ ಗೇಟ್‌ವೇಗೆ ಮೋದಿ ಶಂಕುಸ್ಥಾಪನೆ
ಆಸ್ಟ್ರೇಲಿಯಾ ಪ್ರಧಾನಿ ಜತೆ ಮೋದಿ
Follow us on

ಸಿಡ್ನಿ: ಹ್ಯಾರಿಸ್ ಪಾರ್ಕ್‌ನಲ್ಲಿ (Harris Park) ಉಭಯ ರಾಷ್ಟ್ರಗಳ ಸ್ನೇಹದ ಸಂಕೇತವಾಗಿ ಮತ್ತು ವಲಸೆಗಾರರ ಅಪಾರ ಕೊಡುಗೆಯನ್ನು ಗುರುತಿಸಲು ನಿರ್ಮಿಸಲಿರುವ ‘ಲಿಟಲ್ ಇಂಡಿಯಾ’ (Little India) ಗೇಟ್‌ವೇಗೆ ಪ್ರಧಾನಿ ನರೇಂದ್ರ ಮೋದಿ (Narendra Modi)ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಜಂಟಿಯಾಗಿ ಮಂಗಳವಾರ ಶಂಕುಸ್ಥಾಪನೆ ಮಾಡಿದರು. ಹ್ಯಾರಿಸ್ ಪಾರ್ಕ್ ಪಶ್ಚಿಮ ಸಿಡ್ನಿಯ ಕೇಂದ್ರವಾಗಿದ್ದು, ಭಾರತೀಯ ಸಮುದಾಯವು ದೀಪಾವಳಿ ಮತ್ತು ಆಸ್ಟ್ರೇಲಿಯಾ ದಿನದಂತಹ ಹಬ್ಬಗಳು ಮತ್ತು ಕಾರ್ಯಕ್ರಮಗಳನ್ನು ಆಚರಿಸುತ್ತದೆ. ಭಾರತ ಮತ್ತು ಆಸ್ಟ್ರೇಲಿಯಾದ ನಡುವಿನ ಸೇತುವೆಯಾಗಿ ಅನಿವಾಸಿ ಭಾರತೀಯರ ಪಾತ್ರವನ್ನು ಗುರುತಿಸುವುದು. ದೊಡ್ಡ ಭಾರತೀಯ ಸಮುದಾಯವು ವಾಸಿಸುವ ಸಿಡ್ನಿಯ ಹ್ಯಾರಿಸ್ ಪಾರ್ಕ್, ಪರಮಟ್ಟಾದಲ್ಲಿ ನಿರ್ಮಿಸಲಿರುವ ‘ಲಿಟಲ್ ಇಂಡಿಯಾ’ ಗೇಟ್‌ವೇಯ ಶಂಕುಸ್ಥಾಪನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಜತೆ ಎಂದು ವಿದೇಶಾಂಗ ಸಚಿವಾಲಯ ಟ್ವೀಟ್ ಮಾಡಿದೆ.

ಗೇಟ್‌ವೇ ಭಾರತ-ಆಸ್ಟ್ರೇಲಿಯಾ ಸ್ನೇಹದ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ, ಅದಕ್ಕೆ ಅನಿವಾಸಿ ಭಾರತೀಯರ ಅಪಾರ ಕೊಡುಗೆ ಇದೆ  ಎಂದು ಟ್ವೀಟ್ ನಲ್ಲಿ ಹೇಳಿದೆ.

ಹ್ಯಾರಿಸ್ ಪಾರ್ಕ್ ಅಭಿವೃದ್ಧಿ ಹೊಂದುತ್ತಿರುವ, ಕ್ರಿಯಾತ್ಮಕ, ಬಹುಸಾಂಸ್ಕೃತಿಕ ಕೇಂದ್ರವಾಗಿದ್ದು, ಸಂಸ್ಕೃತಿಗಳ ಮಿಶ್ರಣ ಮತ್ತು ದೊಡ್ಡ ಭಾರತೀಯ ಜನಸಂಖ್ಯೆಗೆ ಹೆಸರುವಾಸಿಯಾಗಿದೆ ಎಂದು ಪರಮಟ್ಟಾ ನಗರವು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

‘ಲಿಟಲ್ ಇಂಡಿಯಾ’ ಎಂದು ಕರೆಯಲ್ಪಡುವ ಹ್ಯಾರಿಸ್ ಪಾರ್ಕ್‌ನಲ್ಲಿರುವ ವಿಗ್ರಾಮ್, ಮರಿಯನ್ ಮತ್ತು ಸ್ಟೇಷನ್ ಸ್ಟ್ರೀಟ್‌ಗಳು 20 ಕ್ಕೂ ಹೆಚ್ಚು ತಿನಿಸುಗಳಿಗೆ ನೆಲೆಯಾಗಿದೆ, ವರ್ಣರಂಜಿತ ಸೀರೆಗಳು, ಹೊಳೆಯುವ ಬಳೆಗಳು ಮತ್ತು ಭಾರತೀಯ ಮಸಾಲೆಗಳನ್ನು ಮಾರಾಟ ಮಾಡುವ ವಿವಿಧ ಅಂಗಡಿಗಳು ನಿಮಗೆ ಇಲ್ಲಿದ್ದು, ಇವು ನಿಮ್ಮನ್ನು ಮುಂಬೈಗೆ ಕರೆತಂದಂತಿರುತ್ತವೆ ಎಂದು ಅದು ಹೇಳಿದೆ.


ಕ್ಯುಡೋಸ್ ಬ್ಯಾಂಕ್ ಅರೆನಾದಲ್ಲಿ ನಡೆದ ಸಮುದಾಯ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದ ಆಸ್ಟ್ರೇಲಿಯಾದ ಪ್ರಧಾನಿ ಅಲ್ಬನೀಸ್ ಅವರು ಹ್ಯಾರಿಸ್ ಪಾರ್ಕ್ ಅನ್ನು ‘ಲಿಟಲ್ ಇಂಡಿಯಾ’ ಎಂದು ಮರುನಾಮಕರಣ ಮಾಡುವುದಾಗಿ ಘೋಷಣೆ ಮಾಡಿದರು.

ಅಹಮದಾಬಾದ್‌ನಲ್ಲಿ ಭಾರತದ ನೆಲದಲ್ಲಿ ಪ್ರಧಾನ ಮಂತ್ರಿ ಅಲ್ಬನೀಸ್ ಅವರನ್ನು ಸ್ವಾಗತಿಸಲು ನನಗೆ ಅವಕಾಶ ಸಿಕ್ಕಿತು. ಇಂದು ಅವರು ಇಲ್ಲಿ ‘ಲಿಟಲ್ ಇಂಡಿಯಾ’ ಅಡಿಪಾಯವನ್ನು ಅನಾವರಣಗೊಳಿಸುವಲ್ಲಿ ನನ್ನ ಜತೆ ಇದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: PM Modi in Australia: ಸಿಡ್ನಿ ಆಕಾಶದಲ್ಲಿ ವೆಲ್ಕಮ್ ಮೋದಿ ಎಂದು ಬರೆದ ಆಸ್ಟ್ರೇಲಿಯಾ ವಿಮಾನ; ವೈಮಾನಿಕ ಪ್ರದರ್ಶನದಿಂದ ಮೋದಿಗೆ ಗೌರವ!

ಹ್ಯಾರಿಸ್ ಪಾರ್ಕ್, ಪರಮಟ್ಟಾ ಪಕ್ಕದಲ್ಲಿರುವ ಒಂದು ಸಣ್ಣ ಉಪನಗರಾಗಿದ್ದು ಲೆಬನಾನ್, ಇಟಲಿ, ಗ್ರೀಸ್ ಮತ್ತು ಚೀನಾದಿಂದ ವಲಸೆ ಬಂದವರಿಗೆ ನೆಲೆಯಾಗಿದೆ. ಕಳೆದ 10 ರಿಂದ 15 ವರ್ಷಗಳಲ್ಲಿ ಇದು ಭಾರತೀಯ ವಲಸಿಗರ ಭೇಟಿಯ ತಾಣವಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. 2021 ರ ಜನಗಣತಿಯು 5,043 ಹ್ಯಾರಿಸ್ ಪಾರ್ಕ್ ನಿವಾಸಿಗಳಲ್ಲಿ 45 ಪ್ರತಿಶತದಷ್ಟು ಜನರು ಭಾರತೀಯ ಮೂಲಗಳನ್ನು ಹೊಂದಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:51 pm, Tue, 23 May 23