ಹಾಳಾದ  ರಸ್ತೆಗಳಿರುವುದು ಬರೀ ಭಾರತದಲ್ಲಷ್ಟೇ ಅಲ್ಲ..; ವಿಶ್ವದ ವಿವಿಧ ರಾಷ್ಟ್ರಗಳ ಈ ಗುಂಡಿಬಿದ್ದ ರಸ್ತೆಗಳನ್ನು ನೋಡಿದ್ರೆ ಅಯ್ಯೋ ಅನ್ನಿಸದೆ ಇರದು..

| Updated By: Lakshmi Hegde

Updated on: Jul 18, 2021 | 6:24 PM

ಅನೇಕ ರಾಷ್ಟ್ರಗಳ ಸೋಷಿಯಲ್​ ಮೀಡಿಯಾ ಬಳಕೆದಾರರು ತಮ್ಮ ದೇಶದ ಗುಂಡಿಬಿದ್ದ, ಹಾಳಾದ ರಸ್ತೆಗಳ ಫೋಟೋವನ್ನು ಕಾಮೆಂಟ್​ ರೂಪದಲ್ಲಿ ಪೋಸ್ಟ್ ಮಾಡಿದ್ದಾರೆ. ಒಂದಕ್ಕಿಂತ ಒಂದು ಜಾಸ್ತಿ ಹಾಳಾದ ರಸ್ತೆಗಳ ಫೋಟೋವನ್ನು ನೀವೇ ನೋಡಿ..

ಹಾಳಾದ  ರಸ್ತೆಗಳಿರುವುದು ಬರೀ ಭಾರತದಲ್ಲಷ್ಟೇ ಅಲ್ಲ..; ವಿಶ್ವದ ವಿವಿಧ ರಾಷ್ಟ್ರಗಳ ಈ ಗುಂಡಿಬಿದ್ದ ರಸ್ತೆಗಳನ್ನು ನೋಡಿದ್ರೆ ಅಯ್ಯೋ ಅನ್ನಿಸದೆ ಇರದು..
ಬ್ರಿಟನ್​ನ ಹಾಳಾದ ರಸ್ತೆ
Follow us on

ಸಾಮಾನ್ಯವಾಗಿ ನಾವು ಭಾರತೀಯರು ನಮ್ಮ ದೇಶದ ರಸ್ತೆಗಳ ಬಗ್ಗೆ ತುಂಬ ಅವಹೇಳನ ಮಾಡುತ್ತಿರುತ್ತೇವೆ. ಗುಂಡಿ ಬಿದ್ದ ಟಾರ್​ ರಸ್ತೆಗಳು, ಕಳಪೆ ಸಿಮೆಂಟ್​ ರಸ್ತೆಗಳು, ಕೆಸರು ಗದ್ದೆಯಂತಾದ ಮಣ್ಣಿನ ರಸ್ತೆಗಳ ಫೋಟೋವನ್ನು ಹಾಕಿ, ಜನಪ್ರತಿನಿಧಿಗಳಿಗೆ ಬೈಯುವುದು ಸಾಮಾನ್ಯ. ಆದರೆ ಇದು ಬರೀ ನಮ್ಮ ದೇಶದ ಕತೆಯಲ್ಲ. ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿರುವ ಈ ಟ್ವಿಟರ್​ ಪೋಸ್ಟ್​​ಗಳನ್ನು ನೋಡಿದರೆ, ನಮ್ಮ ದೇಶವೇ ಉತ್ತಮ ಅನ್ನಿಸದಿದ್ದರೆ ಕೇಳಿ. ಅಷ್ಟಕ್ಕೂ ಏಕಾಏಕಿ ವಿವಿಧ ದೇಶಗಳ ಹಾಳುಬಿದ್ದ ರಸ್ತೆಗಳ ಫೋಟೋ ವೈರಲ್​ ಆಗಿದ್ದು ಹೇಗೆ? ಇಲ್ಲಿದೆ ನೋಡಿ ಮಾಹಿತಿ..

ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಬ್ರಿಟನ್​​ನ ಟಾರ್ ರಸ್ತೆಯ ಫೋಟೋವೊಂದನ್ನು ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದರು. ಆ ಟಾರ್​ ರೋಡ್​ ತುಂಬ ಗುಂಡಿಗಳಿಂದ ಕೂಡಿತ್ತು. No Context Brits ಎಂಬ ಟ್ವಿಟರ್​ ಬಳಕೆದಾರರು ಶೇರ್ ಮಾಡಿಕೊಂಡಿದ್ದ ಗುಂಡಿಗಳುಳ್ಳ ರಸ್ತೆಯ ಫೋಟೋಕ್ಕೆ, ಬ್ರಿಟನ್​ನಲ್ಲಿ ಮಾತ್ರ ಇಂಥ ರಸ್ತೆಗಳು ಇರಲು ಸಾಧ್ಯ ಎಂದು ಕ್ಯಾಪ್ಷನ್​ ಬರೆದಿದ್ದರು. ಆದರೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಪಂಚ ದರ್ಶನ ಮಾಡಿಸಿಬಿಟ್ಟಿದೆ. ಅನೇಕ ರಾಷ್ಟ್ರಗಳ ಸೋಷಿಯಲ್​ ಮೀಡಿಯಾ ಬಳಕೆದಾರರು ತಮ್ಮ ದೇಶದ ಗುಂಡಿಬಿದ್ದ, ಹಾಳಾದ ರಸ್ತೆಗಳ ಫೋಟೋವನ್ನು ಕಾಮೆಂಟ್​ ರೂಪದಲ್ಲಿ ಪೋಸ್ಟ್ ಮಾಡಿದ್ದಾರೆ. ಒಂದಕ್ಕಿಂತ ಒಂದು ಜಾಸ್ತಿ ಹಾಳಾದ ರಸ್ತೆಗಳ ಫೋಟೋವನ್ನು ನೀವೇ ನೋಡಿ..