‘ಏನೇನೂ ಇಲ್ಲ..ಎಲ್ಲ ಸರ್ವನಾಶವಾಯ್ತು..’-ಉಕ್ಕುಕ್ಕಿ ಬಂದು ಎಲ್ಲವನ್ನೂ ನಾಶ ಮಾಡುತ್ತಿರುವ ಪ್ರವಾಹಕ್ಕೆ ಬೆಚ್ಚಿದ ಯುರೋಪ್​, 170 ಮಂದಿ ಸಾವು

Europe Floods: ಪಶ್ಚಿಮ ಯುರೋಪ್​ ರಾಷ್ಟ್ರಗಳ ಪೈಕಿ ಅತ್ಯಂತ ಹೆಚ್ಚಾಗಿ ವಿನಾಶಕ್ಕೀಡಾಗಿದ್ದು, ಜರ್ಮನಿ. ಇಲ್ಲಿ ಕಳೆದ 60 ವರ್ಷಗಳಲ್ಲಿ ಇಷ್ಟು ದೊಡ್ಡ ಮಟ್ಟದ ಪ್ರಾಕೃತಿಕ ವಿಕೋಪ ಉಂಟಾಗಿರಲಿಲ್ಲ. ಈಗಿನ ಪ್ರವಾಹ ಪರಿಸ್ಥಿತಿ ಅದೆಷ್ಟು ಕರಾಳವಾಗಿದೆಯೆಂದರೆ ರಕ್ಷಣಾ ಕಾರ್ಯಾಚರಣೆಯನ್ನೂ ಸರಿಯಾಗಿ ನಡೆಸಲು ಸಾಧ್ಯವಾಗುತ್ತಿಲ್ಲ.

‘ಏನೇನೂ ಇಲ್ಲ..ಎಲ್ಲ ಸರ್ವನಾಶವಾಯ್ತು..'-ಉಕ್ಕುಕ್ಕಿ ಬಂದು ಎಲ್ಲವನ್ನೂ ನಾಶ ಮಾಡುತ್ತಿರುವ ಪ್ರವಾಹಕ್ಕೆ ಬೆಚ್ಚಿದ ಯುರೋಪ್​, 170 ಮಂದಿ ಸಾವು
ಪ್ರವಾಹದಿಂದ ಉಂಟಾದ ಪರಿಸ್ಥಿತಿ
Follow us
TV9 Web
| Updated By: Lakshmi Hegde

Updated on: Jul 18, 2021 | 12:27 PM

ಜರ್ಮನ್​, ಬೆಲ್ಜಿಯಂಗಳಲ್ಲಿ ಪ್ರವಾಹದ ಭೀಕರ ಪರಿಸ್ಥಿತಿ ಮುಂದುವರಿದಿದೆ. ಸಾವಿನ ಸಂಖ್ಯೆ ಈಗ 170ಕ್ಕೆ ಏರಿಕೆಯಾಗಿದೆ. ವಿಪರೀತ ಮಳೆ, ಉಕ್ಕಿ ಹರಿಯುವ ನೀರಿನಿಂದಾಗಿ ಅದೆಷ್ಟೋ ಮನೆಗಳು ಮುಳುಗಿ ಹೋಗಿವೆ..ರಸ್ತೆಗಳೆಲ್ಲ ಜಲಾವೃತ್ತಗೊಂಡಿವೆ. ವಿದ್ಯುತ್​ ಲೈನ್​​ಗಳೆಲ್ಲ ತುಂಡಾಗಿ ಕರೆಂಟ್​ ಇಲ್ಲದ ಪರಿಸ್ಥಿತಿ ಉಂಟಾಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿವೆ.

ಪಶ್ಚಿಮ ಯುರೋಪ್​ ರಾಷ್ಟ್ರಗಳ ಪೈಕಿ ಅತ್ಯಂತ ಹೆಚ್ಚಾಗಿ ವಿನಾಶಕ್ಕೀಡಾಗಿದ್ದು, ಜರ್ಮನಿ. ಇಲ್ಲಿ ಕಳೆದ 60 ವರ್ಷಗಳಲ್ಲಿ ಇಷ್ಟು ದೊಡ್ಡ ಮಟ್ಟದ ಪ್ರಾಕೃತಿಕ ವಿಕೋಪ ಉಂಟಾಗಿರಲಿಲ್ಲ. ಈಗಿನ ಪ್ರವಾಹ ಪರಿಸ್ಥಿತಿ ಅದೆಷ್ಟು ಕರಾಳವಾಗಿದೆಯೆಂದರೆ ರಕ್ಷಣಾ ಕಾರ್ಯಾಚರಣೆಯನ್ನೂ ಸರಿಯಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. 100ಕ್ಕೂ ಹೆಚ್ಚು ಜನರು ಈಗಲೂ ಕಾಣೆಯಾಗಿದ್ದಾರೆ. ಒಂದಷ್ಟು ಜಿಲ್ಲೆಗಳನ್ನು ಸಂಪರ್ಕಿಸಲು ಹರಸಾಹಸ ಪಡುವಂತಾಗಿದೆ. ಏನೇನೂ ಉಳಿದಿಲ್ಲ..ಎಲ್ಲವೂ ಸರ್ವನಾಶ ಆಗಿಹೋಯ್ತು..ಈ ದೃಶ್ಯವನ್ನು ನೀವೆಲ್ಲ ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ಜರ್ಮನಿಯ ಅಹರ್​ವೇಲರ್​​ನಲ್ಲಿನ ವೈನ್​ ಶಾಪ್​ ಮಾಲೀಕರೊಬ್ಬರು ಕಣ್ಣೀರಿಟ್ಟಿದ್ದಾರೆ.

ಪ್ರವಾಹದಿಂದ ತೀವ್ರ ದುರಂತಕ್ಕೀಡಾದ ಉತ್ತರ ರೈನ್​-ವೆಸ್ಟ್ರಾಲಿಯಾ ರಾಜ್ಯದ ಎರ್ಫ್ಟ್‌ಸ್ಟಾಡ್‌ಗೆ ಭೇಟಿ ನೀಡಿ, ಪರಿಸ್ಥಿತಿ ಪರಿಶೀಲಿಸಿದ್ದಾರೆ. ಇದೊಂದೇ ಪ್ರದೇಶದಲ್ಲಿ ಸುಮಾರು 45 ಮಂದಿ ಸಾವನ್ನಪ್ಪಿದ್ದಾರೆ. ಹವಾಮಾನ ಬದಲಾವಣೆಯಿಂದ ಹೀಗೆ ವಿಪರೀತ ಮಳೆಯಾಗುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇನ್ನುಳಿದಂತೆ ಪ್ರವಾಹ ಪೀಡಿತ ಪ್ರದೇಶಗಳಿಂದ ನಾಗರಿಕರನ್ನು ಸುರಕ್ಷಿತವಾಗಿ ಬೇರೆಡೆಗೆ ಸಾಗಿಸುವ ಕಾರ್ಯ ಭರದಿಂದ ಸಾಗುತ್ತಿದೆ. ನೆದರ್​ಲ್ಯಾಂಡ್​​ನಲ್ಲೂ ಹೈ ಅಲರ್ಟ್​ ಘೋಷಣೆ ಮಾಡಲಾಗಿದ್ದು, ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: Corona Third Wave: ಜಾಗತಿಕ ಮಟ್ಟದಲ್ಲಿ ಶೇ.16ರಷ್ಟು ಏರಿಕೆ ಕಂಡ ಕೊರೊನಾ ಪ್ರಕರಣಗಳ ಸಂಖ್ಯೆ; ಭಾರತಕ್ಕೆ ನಾಲ್ಕನೇ ಸ್ಥಾನ

Floods in western Europe Death toll rise to 170 everything is destroyed