Nirav Modi ನೀರವ್ ಮೋದಿ ಮೇಲ್ಮನವಿ ತಿರಸ್ಕರಿಸಿದ ಕೋರ್ಟ್; ಭಾರತಕ್ಕೆ ಹಸ್ತಾಂತರಿಸಲು ಆದೇಶ

ಆಗ್ನೇಯ ಲಂಡನ್‌ನ ವಾಂಡ್ಸ್‌ವರ್ತ್ ಜೈಲಿನಲ್ಲಿರುವ 51 ವರ್ಷದ ಉದ್ಯಮಿ ಮೋದಿಗೆ ಕಳೆದ ಫೆಬ್ರವರಿಯಲ್ಲಿ ಹಸ್ತಾಂತರದ ಪರವಾಗಿ ಜಿಲ್ಲಾ ನ್ಯಾಯಾಧೀಶ ಸ್ಯಾಮ್ ಗೂಜೀ ಅವರ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅನುಮತಿ ನೀಡಿದ್ದರು

Nirav Modi ನೀರವ್ ಮೋದಿ ಮೇಲ್ಮನವಿ ತಿರಸ್ಕರಿಸಿದ ಕೋರ್ಟ್; ಭಾರತಕ್ಕೆ ಹಸ್ತಾಂತರಿಸಲು ಆದೇಶ
ನೀರವ್ ಮೋದಿ
Edited By: ರಶ್ಮಿ ಕಲ್ಲಕಟ್ಟ

Updated on: Nov 09, 2022 | 5:27 PM

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಸಾಲ ಹಗರಣ ಪ್ರಕರಣದಲ್ಲಿ ವಂಚನೆ ಮತ್ತು ಅಕ್ರಮ ಹಣ ವ್ಯವಹಾರ ಆರೋಪಗಳನ್ನು ಎದುರಿಸಲು ವಜ್ರದ ವ್ಯಾಪಾರಿ ನೀರವ್ ಮೋದಿಯನ್ನು(Nirav Modi) ಭಾರತಕ್ಕೆ ಹಸ್ತಾಂತರಿಸುವಂತೆ ಲಂಡನ್‌ನ ಹೈಕೋರ್ಟ್ ಬುಧವಾರ ಆದೇಶಿಸಿದೆ. ಈ ವರ್ಷದ ಆರಂಭದಲ್ಲಿ ಮೇಲ್ಮನವಿ ವಿಚಾರಣೆಯ ನೇತೃತ್ವ ವಹಿಸಿದ್ದ ಲಾರ್ಡ್ ಜಸ್ಟೀಸ್ ಜೆರೆಮಿ ಸ್ಟುವರ್ಟ್-ಸ್ಮಿತ್ ಮತ್ತು ನ್ಯಾಯಮೂರ್ತಿ ರಾಬರ್ಟ್ ಜೇ ಅವರು ಈ ತೀರ್ಪು ನೀಡಿದ್ದಾರೆ. ಆಗ್ನೇಯ ಲಂಡನ್‌ನ ವಾಂಡ್ಸ್‌ವರ್ತ್ ಜೈಲಿನಲ್ಲಿರುವ 51 ವರ್ಷದ ಉದ್ಯಮಿ ಮೋದಿಗೆ ಕಳೆದ ಫೆಬ್ರವರಿಯಲ್ಲಿ ಹಸ್ತಾಂತರದ ಪರವಾಗಿ ಜಿಲ್ಲಾ ನ್ಯಾಯಾಧೀಶ ಸ್ಯಾಮ್ ಗೂಜೀ ಅವರ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅನುಮತಿ ನೀಡಿದ್ದರು.

ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಎರಡು ಆಧಾರದ ಮೇಲೆ ಅನುಮತಿ ನೀಡಲಾಗಿದೆ. ಮಾನವ ಹಕ್ಕುಗಳ ಯುರೋಪಿಯನ್ ಕನ್ವೆನ್ಷನ್ (ECHR) ನ 3 ನೇ ವಿಧಿಯ ಅಡಿಯಲ್ಲಿ ಮೋದಿಯ ಮಾನಸಿಕ ಸ್ಥಿತಿ ಮತ್ತು ಮಾನಸಿಕ ಅಸ್ವಸ್ಥತೆಗೆ ಸಂಬಂಧಿಸಿದ ಹಸ್ತಾಂತರ ಕಾಯಿದೆ 2003 ರ ಸೆಕ್ಷನ್ 91 ರ ಕಾರಣದಿಂದ ಅವರನ್ನು ಹಸ್ತಾಂತರಿಸುವುದು ಈ ಎರಡು ಕಾರಣಗಳಾಗಿವೆ.

ಮೋದಿ ವಿರುದ್ಧ ಎರಡು ಸೆಟ್ ಕ್ರಿಮಿನಲ್ ಮೊಕದ್ದಮೆಗಳಿವೆ. ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣದಲ್ಲಿ PNB ಮೇಲೆ ದೊಡ್ಡ ಪ್ರಮಾಣದ ವಂಚನೆಗೆ ಸಂಬಂಧಿಸಿದ ಪತ್ರಗಳು (LoUs) ಅಥವಾ ಸಾಲ ಒಪ್ಪಂದಗಳು ಮತ್ತು ಆ ವಂಚನೆಯ ಆದಾಯದ ಅಕ್ರಮ ಹಣ ವ್ಯವಹಾರಕ್ಕೆ ಸಂಬಂಧಿಸಿದ ಜಾರಿ ನಿರ್ದೇಶನಾಲಯ (ED) ಪ್ರಕರಣ.
ಮೋದಿ, ಸಾಕ್ಷ್ಯ ಮರೆ ಮಾಡುವುದು ಮತ್ತು ಸಾಕ್ಷಿಗಳನ್ನು ಬೆದರಿಸುವುದು ಅಥವಾ “ಸಾವಿಗೆ ಕಾರಣವಾಗುವಂತೆ ಕ್ರಿಮಿನಲ್ ಬೆದರಿಕೆ” ಎಂಬ ಎರಡು ಹೆಚ್ಚುವರಿ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇದನ್ನು ಸಿಬಿಐ ಪ್ರಕರಣಕ್ಕೆ ಸೇರಿಸಲಾಗಿದೆ.

Published On - 4:58 pm, Wed, 9 November 22

Web contact

TV9 Kannada

Read More
Follow Us