ಸೋಫಿಯಾ, ಮಾ.18: ಅಪಹರಣಕ್ಕೊಳಗಾದ ಬಲ್ಗೇರಿಯನ್ ಹಡಗು ಮತ್ತು ಅದರಲ್ಲಿದ್ದ ನಾಗಕರಿಕರ ಸಹಿತ ಸಿಬ್ಬಂದಿಯನ್ನು ಭಾರತೀಯ ನೌಕಾಪಡೆ ರಕ್ಷಣೆ ಮಾಡಿದೆ. ಈ ಬಗ್ಗೆ ಬಲ್ಗೇರಿಯ (Bulgaria) ದೇಶದ ಅಧ್ಯಕ್ಷ ರುಮೆನ್ ರಾದೇವ್ (Rumen Radev) ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಬಲ್ಗೇರಿಯದ ಅಧ್ಯಕ್ಷ ರುಮೆನ್ ರಾದೇವ್, 7 ಬಲ್ಗೇರಿಯನ್ ನಾಗರಿಕರು ಸೇರಿದಂತೆ ಅಪಹರಣಕ್ಕೊಳಗಾದ ಬಲ್ಗೇರಿಯನ್ ಹಡಗು “ರುಯೆನ್” ಮತ್ತು ಅದರ ಸಿಬ್ಬಂದಿಯನ್ನು ರಕ್ಷಿಸಿದ ಭಾರತದ ನೌಕಾಪಡೆಯ ಕೆಚ್ಚೆದೆಯ ಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಪ್ರಾಮಾಣಿಕ ಕೃತಜ್ಞತೆಗಳು ಎಂದು ಬರೆದುಕೊಂಡಿದ್ದಾರೆ.
My sincere gratitude to PM @narendramodi for the brave action of 🇮🇳Navy rescuing the hijacked Bulgarian ship “Ruen” and its crew, including 7 Bulgarian citizens.
— President.bg (@PresidentOfBg) March 18, 2024
ಭಾರತೀಯ ನೌಕಾಪಡೆಯು ಸತತ 40-ಗಂಟೆಗಳ ಕಾಲ ಕಾರ್ಯಾಚರಣೆಯಲ್ಲಿ ಹಡಗು ರುಯೆನ್ ಅನ್ನು ರಕ್ಷಿಸುವ ಮೂಲಕ ವಾಣಿಜ್ಯ ಹಡಗುಗಳನ್ನು ಹೈಜಾಕ್ ಮಾಡುವ ಸೊಮಾಲಿ ಕಡಲ್ಗಳ್ಳರ ಯೋಜನೆಗಳನ್ನು ವಿಫಲಗೊಳಿಸಿತು. ಐಎನ್ಎಸ್ ಕೊಲ್ಕತ್ತ, ಕಳೆದ 40 ಗಂಟೆಗಳಲ್ಲಿ, ಸಂಘಟಿತ ಕ್ರಮಗಳ ಮೂಲಕ ಯಶಸ್ವಿಯಾಗಿ ಎಲ್ಲಾ 17 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಭಾರತೀಯ ನೌಕಾಪಡೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಬಲ್ಗೇರಿಯನ್ ಒಡೆತನದ ಆದರೆ ಮಾಲ್ಟೀಸ್-ಧ್ವಜದ ಬೃಹತ್ ಸರಕು ಹಡಗನ್ನು ಡಿಸೆಂಬರ್‌ನಲ್ಲಿ ಸೊಮಾಲಿ ಕಡಲ್ಗಳ್ಳರು ಅಪಹರಿಸಲಾಗಿತ್ತು. ನಂತರ, ರುಯೆನ್ ಸೋಮಾಲಿಯಾದ ಐಲ್ ಕರಾವಳಿಯಲ್ಲಿ ಇರಿಸಲಾಗಿತ್ತು.
ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ