Shocking News: ಯುವತಿ ಆರ್ಡರ್ ಮಾಡಿದ ಬರ್ಗರ್​ನಲ್ಲಿ ಸಿಕ್ತು ಮನುಷ್ಯನ ಬೆರಳು; ಬೆಚ್ಚಿಬೀಳಿಸಿದ ಘಟನೆಯ ತನಿಖೆ ಶುರು

Viral News: ಮಹಿಳೆ ಆರ್ಡರ್​ ಮಾಡಿ ತರಿಸಿಕೊಂಡ ಬರ್ಗರ್​ನಲ್ಲಿ ಮನುಷ್ಯನ ಬೆರಳು ಪತ್ತೆಯಾಗಿದೆ. ಈ ಕುರಿತಂತೆ ತನಿಖೆ ಶುರುವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ಫೋಟೋವನ್ನು ಹಂಚಿಕೊಂಡಿದ್ದಾರೆ.

Shocking News: ಯುವತಿ ಆರ್ಡರ್ ಮಾಡಿದ ಬರ್ಗರ್​ನಲ್ಲಿ ಸಿಕ್ತು ಮನುಷ್ಯನ ಬೆರಳು; ಬೆಚ್ಚಿಬೀಳಿಸಿದ ಘಟನೆಯ ತನಿಖೆ ಶುರು
ಸಾಂದರ್ಭಿಕ ಚಿತ್ರ
Edited By:

Updated on: Sep 17, 2021 | 1:36 PM

ಬೊಲಿವಿಯಾದಲ್ಲಿ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು ರೆಸ್ಟೋರೆಂಟ್​ನಿಂದ ಆರ್ಡರ್​ ಮಾಡಿ ತರಿಸಿಕೊಂಡ ಬರ್ಗರ್​ನಲ್ಲಿ ಮನುಷ್ಯನ ಬೆರಳು ಪತ್ತೆಯಾಗಿದೆ. ಆ ಚಿತ್ರಗಳನ್ನು ಸೆರೆ ಹಿಡಿದ ಮಹಿಳೆ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾಳೆ. ಜತೆಗೆ ಗ್ರಾಹಕರ ಸಂರಕ್ಷಣೆ ಸಚಿವಾಲಯದ ಉಪ ಸಚಿವರು ಪ್ರತಿಕ್ರಿಯಿಸುವಂತೆ ಒತ್ತಾಯಿಸಿದ್ದಾಳೆ.

ಗ್ರಾಹಕರ ಸಂರಕ್ಷಣೆ ಸಚಿವಾಲಯದ ಉಪ ಸಚಿವ ಜಾರ್ಜ್ ಸಿಲ್ವಾ ಪ್ರಕಟಣೆಯಲ್ಲಿ ಹೇಳಿಕೆ ನೀಡಿ, ಕೆಲಸದಲ್ಲಿ ವ್ಯಕ್ತಿ ಅಚಾನಕ್ಆಗಿ ಯಂತ್ರದಿಂದ ಬೆರಳನ್ನು ಕತ್ತರಿಸಿಕೊಂಡಿದ್ದಾನೆ. ಈ ವಿಷಯ ಇದೀಗ ತಿಳಿದು ಬಂದಿದೆ ಎಂದು ಉತ್ತರಿಸಿದ್ದಾರೆ.

ಕಳೆದ ಶುಕ್ರವಾರ ಕೆಲಸಗಾರ ಬೆರಳನ್ನು ಕತ್ತರಿಸಿಕೊಂಡಿದ್ದಾನೆ. ಆತನ ಎರಡು ಬೆರಳು ತುಂಡಾಗಿವೆ. ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಪ್ರಕಾರ, ಮಾಂಸವನ್ನು ರುಬ್ಬುವ ಯಂತ್ರವನ್ನು ನಿರ್ವಹಿಸುತ್ತಿದ್ದ ಕೆಲಸಗಾರ ತನ್ನ ಎರಡು ಬೆರಳುಗಳನ್ನು ಕಳೆದುಕೊಂಡಿದ್ದಾನೆ. ಕೆಲಸಗಾರನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆತ ಇನ್ನೂ ಗುಣಮುಖನಾಗಿಲ್ಲ ಎಂಬುದು ತಿಳಿದು ಬಂದಿದೆ.

ಮಾಂಸ ರುಬ್ಬುವ ಕಾರ್ಖಾನೆ ಸುಮಾರು 20 ರೆಸ್ಟೋರೆಂಟ್​ಗಳಿಗೆ ಬರ್ಗರ್​ಅನ್ನು ಪೂರೈಸುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ. ದುರಾದೃಷ್ಟವಶಾತ್ ಮನುಷ್ಯನ ಬೆರಳು ಮಹಿಳೆ ಆರ್ಡರ್ ಮಾಡಿದ ಬರ್ಗರ್​ನಲ್ಲಿ ಸಿಕ್ಕಿದೆ. ಈ ಕುರಿತಂತೆ ತನಿಖೆ ನಡೆಯುತ್ತಿದೆ. ಈ ಕೃತ್ಯದ ಹಿಂದಿರುವ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಾರ್ಜ್ ಸಿಲ್ವಾ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:

Shocking News: ಪೊಲೀಸರಂತೆ ಬಸ್ ನಿಲ್ಲಿಸಿ 1.2 ಕೋಟಿ ರೂ. ಕದ್ದೊಯ್ದ ಕಳ್ಳರು; ಸಿನಿಮಾ ಸ್ಟೈಲ್​ನಲ್ಲಿ ದರೋಡೆ!

Shocking News: ವಿಷದ ಇಂಜೆಕ್ಷನ್ ಚುಚ್ಚಿ 300 ನಾಯಿಗಳ ಕೊಲೆ; ಶವಗಳನ್ನು ಕೆರೆಗೆ ಸುರಿದ ಪಾಪಿಗಳು

(Human finger found in burger investigation on)

TV9 Web

TV9 Kannada

Read More
Loading...
Unable to load recommendations.
Follow Us