ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ಆರೋಪಿಯಾಗಿರುವ ಮೆಹುಲ್ ಚೋಕ್ಸಿ ಡೊಮಿನಿಕಾ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದು, ನಾನು ಡೊಮಿನಿಕಾದಿಂದ ಎಲ್ಲಿಯೂ ತಪ್ಪಿಸಿಕೊಂಡು ಹೋಗುವುದಿಲ್ಲ. ನಾನು ಕಾನೂನನ್ನು ಸರಿಯಾಗಿ ಪರಿಪಾಲನೆ ಮಾಡುವ ನಾಗರಿಕ ಎಂದು ಹೇಳಿದ್ದಾರೆ. ಹಾಗೇ, ತಮಗೆ ಆಂಟಿಗುವಾಕ್ಕೆ ಹೋಗಲು ಅನುಮತಿ ನೀಡಬೇಕು ಎಂದು ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ಉಲ್ಲೇಖಿಸಿದ್ದಾರೆ. ಮೆಹುಲ್ ಚೋಕ್ಸಿ ಓರ್ವ ವಜ್ರದ ವ್ಯಾಪಾರಿ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಬಳಿಕ ಭಾರತದಿಂದ ಬಂದು ಆಂಟಿಗುವಾದಲ್ಲೇ ವಾಸವಾಗಿದ್ದರು. ಇಲ್ಲಿನ ಪೌರತ್ವವನ್ನೂ ಪಡೆದಿದ್ದರು. ಆದರೆ ಕೆಲವೇ ದಿನಗಳ ಹಿಂದೆ ಡೊಮಿನಿಕಾವನ್ನು ಪ್ರವೇಶಿಸಿ, ಅಲ್ಲಿ ಅರೆಸ್ಟ್ ಆಗಿದ್ದರು. ಡೊಮಿನಿಕಾವನ್ನು ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂದು ಇಲ್ಲಿನ ಆಡಳಿತ ಹೇಳುತ್ತಿದೆ. ಆದರೆ ಮೆಹುಲ್ ಚೋಕ್ಸಿ, ತಾನು ಅಕ್ರಮವಾಗಿ ಪ್ರವೇಶಿಸಿದ್ದಲ್ಲ, ನನ್ನನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ಕೋರ್ಟ್ಗೆ ಹೇಳಿದ್ದಾರೆ. ಇದೊಂದು ಹನಿಟ್ರ್ಯಾಪ್ ಎಂದು ಚೋಕ್ಸಿ ಪರ ವಕೀಲರು ಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಡೊಮಿನಿಕಾ ಮ್ಯಾಜಿಸ್ಟ್ರೇಟ್ ಕೋರ್ಟ್ ಚೋಕ್ಸಿಯವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಬೆನ್ನಲ್ಲೇ ಪ್ರಕರಣ ಅಲ್ಲಿನ ಹೈಕೋರ್ಟ್ ಮೆಟ್ಟಿಲೇರಿದೆ. ಹೈಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ ಚೋಕ್ಸಿ, ತಮಗೆ ಆಂಟಿಗುವಾಕ್ಕೆ ಹೋಗಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ. ಪಿಎನ್ಬಿ ಹಗರಣದ ಬಗ್ಗೆ ನನ್ನನ್ನು ವಿಚಾರಣೆ ಮಾಡಲು ಭಾರತದ ತನಿಖಾ ದಳಗಳನ್ನು ಇಲ್ಲಿಗೇ ಆಹ್ವಾನಿಸಿದ್ದೇನೆ ಎಂದೂ ಹೇಳಿಕೊಂಡಿದ್ದರು.
2018ರವರೆಗೂ ಭಾರತದಲ್ಲಿ ತನಿಖಾದಳಗಳು ನನ್ನ ವಿರುದ್ಧ ಪ್ರಕರಣ ದಾಖಲಿಸಲಿಲ್ಲ. 2018ರಲ್ಲಿ ನಾನು ವೈದ್ಯಕೀಯ ಚಿಕಿತ್ಸೆಗಾಗಿ ಭಾರತದಿಂದ ಅಮೆರಿಕಕ್ಕೆ ಹೋದೆ ಎಂದು ಅಫಿಡವಿಟ್ನಲ್ಲಿ ಹೇಳಿಕೊಂಡಿದ್ದಾರೆ. 2018ರ ಮೇ ತಿಂಗಳಲ್ಲಿ ಚೋಕ್ಸಿ ಯುಎಸ್ನಿಂದ ಆಂಟಿಗುವಾಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಇಷ್ಟೆಲ್ಲ ಆದ ಬಳಿಕವಷ್ಟೇ ಸಿಬಿಐ ಮೆಹುಲ್ ಚೋಕ್ಸಿ ವಿರುದ್ಧ ಕೇಸ್ ದಾಖಲಿಸಿದ್ದು. ಅದಾದ ಬಳಿಕ 2019ರಲ್ಲಿ ಚೋಕ್ಸಿ ಬಾಂಬೆ ಹೈಕೋರ್ಟ್ಗೆ ಕೂಡ ಅಫಿಡವಿಟ್ ಸಲ್ಲಿಸಿದ್ದರು. ಈಗ ಡೊಮಿನಿಕಾ ಹೈಕೋರ್ಟ್ಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿರುವ ಅಂಶಗಳೇ ಅದರಲ್ಲೂ ಇವೆ.
ಇದನ್ನೂ ಓದಿ: ಯಶ್ ಕೋಟ್ಯಂತರ ರೂಪಾಯಿ ಹಂಚಿದ ಬೆನ್ನಲ್ಲೇ ರಾಧಿಕಾ ಪಂಡಿತ್ ಕಡೆಯಿಂದ ಬಂತು ಭರವಸೆಯ ಮಾತು
I am Law abiding citizen told by Fugitive tycoon Mehul Choksi to Dominica High court