ಪ್ರಧಾನಿ ಇಮ್ರಾನ್ ಖಾನ್ ಡ್ರಗ್ಸ್​ ತಗೋತಿದ್ದರು: ಪಾಕ್ ಮಾಜಿ ವೇಗಿ ಸರ್ಫ್ರಾಜ್ ನವಾಜ್

|

Updated on: Nov 04, 2020 | 1:27 PM

ಪಾಕಿಸ್ತಾನದ ಮಾಜಿ ವೇಗಿ ಸರ್ಫ್ರಾಜ್ ನವಾಜ್ ಅವರು ಪಾಕಿಸ್ತಾನದ ಹಾಲಿ ಪ್ರಧಾನಿ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಬಗ್ಗೆ ಅಚ್ಚರಿಯ ಆದ್ರೆ ಆತಂಕಕಾರಿ ಮಾಹಿತಿಯೊಂದನ್ನು ಬಹಿರಂಗ ಪಡಿಸಿದ್ದಾರೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕ್ರಿಕೆಟ್ ಆಡುತ್ತಿದ್ದ ದಿನಗಳಲ್ಲಿ ತಮ್ಮ ಮನೆಯಲ್ಲಿ ಚರಾಸ್ ಹಾಗೂ ಕೊಕೇನ್ ಸೇವಿಸುತ್ತಿದ್ದರು ಎಂದು ಹೇಳಿದ್ದಾರೆ. ಅಲ್ಲದೆ ಅವರು ಕೊಕೇನ್ ಅನ್ನು ಕರೆನ್ಸಿ ನೋಟುಗಳೊಳಗೆ ಹಾಕಿ ಎಳೆದು ಕೊಳ್ಳುವುದನ್ನು ಲಂಡನ್‌ನಲ್ಲಿ ನಾನು ಕಣ್ಣಾರೆ ಕಂಡಿದ್ದೇನೆ ಎಂದಿದ್ದಾರೆ. ಅಲ್ಲದೆ ನಾನು ಸುಳ್ಳು ಹೇಳುತ್ತೇನೆ ಎಂದು […]

ಪ್ರಧಾನಿ ಇಮ್ರಾನ್ ಖಾನ್ ಡ್ರಗ್ಸ್​ ತಗೋತಿದ್ದರು: ಪಾಕ್ ಮಾಜಿ ವೇಗಿ ಸರ್ಫ್ರಾಜ್ ನವಾಜ್
Follow us on

ಪಾಕಿಸ್ತಾನದ ಮಾಜಿ ವೇಗಿ ಸರ್ಫ್ರಾಜ್ ನವಾಜ್ ಅವರು ಪಾಕಿಸ್ತಾನದ ಹಾಲಿ ಪ್ರಧಾನಿ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಬಗ್ಗೆ ಅಚ್ಚರಿಯ ಆದ್ರೆ ಆತಂಕಕಾರಿ ಮಾಹಿತಿಯೊಂದನ್ನು ಬಹಿರಂಗ ಪಡಿಸಿದ್ದಾರೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕ್ರಿಕೆಟ್ ಆಡುತ್ತಿದ್ದ ದಿನಗಳಲ್ಲಿ ತಮ್ಮ ಮನೆಯಲ್ಲಿ ಚರಾಸ್ ಹಾಗೂ ಕೊಕೇನ್ ಸೇವಿಸುತ್ತಿದ್ದರು ಎಂದು ಹೇಳಿದ್ದಾರೆ. ಅಲ್ಲದೆ ಅವರು ಕೊಕೇನ್ ಅನ್ನು ಕರೆನ್ಸಿ ನೋಟುಗಳೊಳಗೆ ಹಾಕಿ ಎಳೆದು ಕೊಳ್ಳುವುದನ್ನು ಲಂಡನ್‌ನಲ್ಲಿ ನಾನು ಕಣ್ಣಾರೆ ಕಂಡಿದ್ದೇನೆ ಎಂದಿದ್ದಾರೆ.

ಅಲ್ಲದೆ ನಾನು ಸುಳ್ಳು ಹೇಳುತ್ತೇನೆ ಎಂದು ಅವರು ಭಾವಿಸಿದರೆ, ಅವರು ನನ್ನ ವಿರುದ್ಧ ಪ್ರಕರಣ ದಾಖಲಿಸಬಹುದು ಎಂದೂ ಖ್ಯಾತ ಮಾಜಿ ವೇಗಿ ಸರ್ಫ್ರಾಜ್ ನವಾಜ್ ಹೇಳಿದ್ದಾರೆ.

Published On - 1:20 pm, Wed, 4 November 20