ಲಾಹೋರ್: ಪಾಕಿಸ್ತಾನದಲ್ಲಿರುವ ಐತಿಹಾಸಿಕ ಸಿಖ್ ಗುರುದ್ವಾರವನ್ನ ಮಸೀದಿಯನ್ನಾಗಿ ಪರಿವರ್ತಿಸಲು ಮುಂದಾಗಿರುವ ಪಾಕಿಸ್ತಾನದ ಕ್ರಮವನ್ನ ಭಾರತ ಕಟುವಾಗಿ ವಿರೋಧಿಸಿದೆ. ಈ ಸಂಬಂಧ ಪಾಕಿಸ್ತಾನಕ್ಕೆ ತನ್ನ ವಿರೋಧ ಮತ್ತು ಕಳವಳವನ್ನ ತಿಳಿಸಿದೆ.
ಹೌದು ಪಾಕಿಸ್ತಾನದ ಲಾಹೋರ್‌ನಲ್ಲಿರುವ ನೌಲಖ್ ಬಜಾರ್‌ನಲ್ಲಿನ ಶಾಹಿದಿ ಆಸ್ಥಾನ ಭಾಯಿ ತರುಜಿ ಗುರುದ್ವಾರವನ್ನು ಪಾಕಿಸ್ತಾನ ಶಹೀದ್ ಗಂಜ್ ಮಸೀದಿಯನ್ನಾಗಿ ಪರಿವರ್ತಿಸಲು ಮುಂದಾಗಿದೆ. ಇದಕ್ಕೆ ಪಾಕಿಸ್ತಾನದಲ್ಲಿರುವ ಸಿಖ್ ಅಲ್ಪಸಂಖ್ಯಾತರು ತೀವ್ರವಾಗಿ ವಿರೋಧಿಸಿದ್ದಾರೆ. ಈ ಸಂಬಂಧ ಪಾಕಿಸ್ತಾನ ಸರ್ಕಾರಕ್ಕೆ ಗುರುದ್ವಾರವನ್ನ ಮಸೀದಿಯನ್ನಾಗಿ ಪರಿವರ್ತಿಸದಂತೆ ಮನವಿ ಮಾಡಿದ್ದಾರೆ.
1745ರಲ್ಲಿ ಕಟ್ಟಲಾದ ಗುರುದ್ವಾರ
ಈಗ ಲಾಹೋರ್‌ನಲ್ಲಿರುವ ಕೆಲ ಮತೀಯವಾದಿಗಳು ಈ ಗುರುದ್ವಾರವನ್ನು ಮಸೀದಿಯನ್ನಾಗಿ ಪರಿವರ್ತಿಸಲು ಮುಂದಾಗಿದ್ದಾರೆ. ಇದು ವಿಶ್ವಾದ್ಯಂತ ಸಿಖ್ ಧರ್ಮೀಯರಲ್ಲಿ ಆಕ್ರೋಶ ತರಿಸಿದೆ. ಈ ಸಂಬಂಧ ಭಾರತ ಸರ್ಕಾರ ಕೂಡಾ ಕಟುವಾಗಿ ಪಾಕಿಸ್ತಾನ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಗುರುದ್ವಾರನ್ನು ಮಸೀದಿಯನ್ನಾಗಿ ಪರಿವರ್ತಿಸುವ ಯಾವುದೇ ಕ್ರಮವನ್ನು ವಿರೋಧಿಸುವುದಾಗಿ ತಿಳಿಸಿದೆ.
Published On - 6:20 pm, Wed, 29 July 20