ಲಂಡನ್​ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದ್ದ ಖಲಿಸ್ತಾನಿ ಉಗ್ರರಿಗೆ ತಕ್ಕ ಉತ್ತರ ನೀಡಿದ ಭಾರತ

|

Updated on: Mar 20, 2023 | 11:29 AM

ಲಂಡನ್​ನಲ್ಲಿ ಭಾರತದ ರಾಷ್ಟ್ರಧ್ವಜವನ್ನು ಕೆಳಗಿಳಿಸಿದ್ದ ಖಲಿಸ್ತಾನಿ ಉಗ್ರರಿಗೆ ಭಾರತೀಯ ಹೈಕಮಿಷನ್ ತಕ್ಕ ಉತ್ತರ ನೀಡಿದೆ. ಭಾರತೀಯ ಹೈಕಮಿಷನ್ ಮೇಲೆ ಬೃಹತ್ ತ್ರಿವರ್ಣಧ್ವಜ ಹಾರಿಸಲಾಗಿದೆ.

ಲಂಡನ್​ನಲ್ಲಿ ಭಾರತದ  ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದ್ದ ಖಲಿಸ್ತಾನಿ ಉಗ್ರರಿಗೆ ತಕ್ಕ ಉತ್ತರ ನೀಡಿದ ಭಾರತ
ಭಾರತದ ತ್ರಿವರ್ಣಧ್ವಜ
Follow us on

ಲಂಡನ್​ನಲ್ಲಿ ಭಾರತದ ರಾಷ್ಟ್ರಧ್ವಜವನ್ನು ಕೆಳಗಿಳಿಸಿದ್ದ ಖಲಿಸ್ತಾನಿ ಉಗ್ರರಿಗೆ ಭಾರತೀಯ ಹೈಕಮಿಷನ್ ತಕ್ಕ ಉತ್ತರ ನೀಡಿದೆ. ಭಾರತೀಯ ಹೈಕಮಿಷನ್ ಮೇಲೆ ಬೃಹತ್ ತ್ರಿವರ್ಣಧ್ವಜ ಹಾರಿಸಲಾಗಿದೆ. ಭಾರತೀಯ ಹೈಕಮಿಷನ್ ಅಧಿಕಾರಿಯೊಬ್ಬರು ಖಲಿಸ್ತಾನಿ ಧ್ವಜವನ್ನು ಹಾರಿಸಲು ಯತ್ನಿಸುತ್ತಿದ್ದ ಯುವಕರಿಂದ ಧ್ವಜವನ್ನು ಕಿತ್ತುಕೊಂಡು ಅದನ್ನು ಎಸೆಯುವ ಧೈರ್ಯ ತೋರಿದ್ದರು. ಬಳಿಕ ಖಲಿಸ್ತಾನಿ ಉಗ್ರರಿಗೆ ಸರಿಯಾಗಿ ಪಾಠ ಕಲಿಸುವ ಸಲುವಾಗಿ ಹೈಕಮಿಷನ್ ಮೇಲೆ ಬೃಹತ್ ತ್ರಿವರ್ಣಧ್ವಜವನ್ನು ಹಾರಿಸಲಾಗಿದೆ. ಲಂಡನ್​ನಲ್ಲಿ ನಡೆದ ಘಟನೆ ಬಗ್ಗೆ ಬ್ರಿಟಿಷ್ ಹೈಕಮಿಷನ್ ಅವರನ್ನು ಕರೆಸಿ ಅಸಮಾಧಾನ ವ್ಯಕ್ತಪಡಿಸಿದೆ. ಭಾರತೀಯ ಹೈಕಮಿಷನ್ ಆವರಣದಲ್ಲಿ ಘಟನೆ ನಡೆದಾಗ ಭದ್ರತಾ ಸಿಬ್ಬಂದಿ ಅಲ್ಲಿರಲಿಲ್ಲ.

ಈ ಬಗ್ಗೆ ಬ್ರಿಟಿಷ್ ಹೈಕಮಿಷನರ್ ಅವರಿಂದ ವಿವರಣೆ ಕೇಳಲಾಗಿದೆ. ಇದು ವಿಯೆನ್ನಾ ಒಪ್ಪಂದದ ಉಲ್ಲಂಘನೆಯೂ ಆಗಿದೆ ಎಂದು ಸರ್ಕಾರ ಹೇಳಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರ ಬ್ರಿಟಿಷ್ ಹೈಕಮಿಷನರ್ ಅವರನ್ನು ಒತ್ತಾಯಿಸಿದೆ. ಭದ್ರತೆ ಬಗ್ಗೆ ವರದಿ ಕೇಳಲಾಗಿದೆ. ಅಮೃತ್​ ಪಾಲ್​ ಸಿಂಗ್ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಖಲಿಸ್ತಾನಿ ಉಗ್ರರು ಪ್ರತಿಭಟನೆ ನಡೆಸಿದ್ದರು.

ಮತ್ತಷ್ಟು ಓದಿ:ಲಂಡನ್​ನಲ್ಲಿ ಭಾರತದ ತ್ರಿವರ್ಣ ಧ್ವಜಕ್ಕೆ ಅವಮಾನ, ಭಾರತೀಯ ಹೈಕಮಿಷನ್ ಕಚೇರಿಯಲ್ಲಿ ಖಲಿಸ್ತಾನಿ ಉಗ್ರರ ಗದ್ದಲ 

ಲಂಡನ್​ನಲ್ಲಿರುವ ಹೈಕಮಿಷನ್​ನಲ್ಲಿ ಖಲಿಸ್ತಾನ ಪರ ಘೋಷಣೆ ಕೂಗಿದ್ದ ಜನರು ಗುಂಪು ಭಾರತೀಯ ಹೈಕಮಿಷನ್​ನಲ್ಲಿದ್ದ ಭಾರತೀಯ ಧ್ವಜವನ್ನು ಕೆಳಗಿಳಿಸಿತ್ತು. ಭಾರತದಲ್ಲಿನ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರು ಖಲಿಸ್ತಾನ ಪರ ಗುಂಪಿನ ಕ್ರಮವನ್ನು ಖಂಡಿಸಿದ್ದು, ನಾನು ಕೂಡ ಈ ಕೃತ್ಯವನ್ನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

ಲಂಡನ್​ನಲ್ಲಿರುವ ಭಾರತೀಯ ಹೈಕಮಿಷನ್ ವಿರುದ್ಧ ಪ್ರತ್ಯೇಕವಾದಿ ಮತ್ತು ಉಗ್ರ ಹಿನ್ನೆಲೆ ಉಳ್ಳವರು ಹಿಂದಿನ ದಿನ ಕೈಗೊಂಡ ಕ್ರಮಗಳಿಗೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 11:29 am, Mon, 20 March 23