ಅಫ್ಘಾನಿಸ್ತಾನದಲ್ಲಿರುವ ಭಾರತೀಯರಿಗೆ ಕೂಡಲೇ ಭಾರತಕ್ಕೆ ವಾಪಸ್​ ಹೋಗುವಂತೆ ಸೂಚನೆ; ವಿಶೇಷ ವಿಮಾನ ವ್ಯವಸ್ಥೆ

| Updated By: Lakshmi Hegde

Updated on: Aug 10, 2021 | 6:55 PM

ಈಗಾಗಲೇ ಅಪ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಕಚೇರಿ, ಜೂ.29 ಮತ್ತು ಜು.24ರಂದು ಎರಡು ಭದ್ರತಾ ಸಲಹೆ ನೀಡಿದೆ. ಅವರೆಡೂ ಮಾನ್ಯವಾಗಿರುತ್ತವೆ ಎಂದು ಈಗ ಹೊರಡಿಸಿರುವ ಮೂರನೇ ಸೆಕ್ಯೂರಿಟಿ ಅಡ್ವೈಸರಿಯಲ್ಲಿ ಉಲ್ಲೇಖಿಸಿದೆ.

ಅಫ್ಘಾನಿಸ್ತಾನದಲ್ಲಿರುವ ಭಾರತೀಯರಿಗೆ ಕೂಡಲೇ ಭಾರತಕ್ಕೆ ವಾಪಸ್​ ಹೋಗುವಂತೆ ಸೂಚನೆ; ವಿಶೇಷ ವಿಮಾನ ವ್ಯವಸ್ಥೆ
ಸಾಂಕೇತಿಕ ಚಿತ್ರ
Follow us on

ದೆಹಲಿ: ಅಪ್ಘಾನಿಸ್ತಾನ ಅಪಾಯದಲ್ಲಿದೆಯಾ? ಇತ್ತೀಚೆಗೆ ಅಲ್ಲಿ ನಡೆಯುತ್ತಿರುವ ಗುಂಡು, ಬಾಂಬ್​ ದಾಳಿಗಳು, ಹತ್ಯೆಗಳನ್ನು ನೋಡಿದರೆ ಇದೇ ಭಾವನೆ ಬರುತ್ತದೆ. ಈಗ ಅಪ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಭದ್ರತಾ ಸಲಹೆ (Security advisoryಯೊಂದನ್ನು ನೀಡಿದೆ. ಅಫ್ಘಾನಿಸ್ತಾನ (Afghanistan)ದಲ್ಲಿ ಉದ್ಯೋಗ ಮಾಡುತ್ತಿರುವ ಭಾರತೀಯರು ಆದಷ್ಟು ಶೀಘ್ರವೇ ಭಾರತಕ್ಕೆ ವಾಪಸ್ ತೆರಳುವಂತೆ ಹೇಳಿದೆ. ಭಾರತದ ಕಂಪನಿಗಳಿಗೆ ಈ ಭದ್ರತಾ ಅಡ್ವೈಸರಿಯನ್ನು ಕಳಿಸಿದ್ದು, ಅಫ್ಘಾನಿಸ್ತಾನದಲ್ಲಿ ಕೆಲಸ ಮಾಡುತ್ತಿರುವ ನಿಮ್ಮ ಕಂಪನಿಗಳ ಉದ್ಯೋಗಿಗಳನ್ನು ವಾಪಸ್ ಕರೆಸಿಕೊಳ್ಳಲು ಕೂಡಲೇ ವ್ಯವಸ್ಥೆ ಮಾಡಿ ಎಂದು ತಿಳಿಸಿದೆ.

ಈಗಾಗಲೇ ಅಪ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಕಚೇರಿ, ಜೂ.29 ಮತ್ತು ಜು.24ರಂದು ಎರಡು ಭದ್ರತಾ ಸಲಹೆ ನೀಡಿದೆ. ಅವರೆಡೂ ಮಾನ್ಯವಾಗಿರುತ್ತವೆ ಎಂದು ಈಗ ಹೊರಡಿಸಿರುವ ಮೂರನೇ ಸೆಕ್ಯೂರಿಟಿ ಅಡ್ವೈಸರಿಯಲ್ಲಿ ಉಲ್ಲೇಖಿಸಿದೆ. ಆದಷ್ಟು ಬೇಗ ಭಾರತೀಯರು ತಮ್ಮ ದೇಶ ಸೇರಿಕೊಳ್ಳಬೇಕು ಎಂದಿದೆ. ಅಫ್ಘಾನಿಸ್ತಾನದಲ್ಲಿ ಹಿಂಸಾಚಾರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಅನೇಕ ಪ್ರಾಂತ್ಯಗಳು, ನಗರಗಳಿಂದ ವಿಮಾನ ಸೇವೆ ಸ್ಥಗಿತಗೊಳಿಸಲಾಗುತ್ತಿದೆ. ಯಾವುದೇ ಕಾರಣಕ್ಕೆ ಅಪ್ಘಾನಿಸ್ತಾನಕ್ಕೆ ಬಂದಿರುವ ಭಾರತೀಯರು ವಾಪಸ್​ ಹೊರಟುಬಿಡಿ ಎಂದು ಹೇಳಿದೆ.

ಹಾಗೇ, ಇಂದು ಮುಂಜಾನೆ ಮಜರ್​ ಇ ಶರೀಫ್​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಜನರಲ್ ಕೂಡ ಇದನ್ನೇ ಮನವಿ ಮಾಡಿದ್ದರು. ಭಾರತಕ್ಕೆ ತೆರಳಲು ವಿಶೇಷ ವಿಮಾನ ವ್ಯವಸ್ಥೆ ಮಾಡಲಾಗಿದ್ದು, ಆದಷ್ಟು ಶೀಘ್ರವೇ ಹೊರಟು ಬಿಡಿ ಎಂದಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಹೋರಾಟಗಾರರ ಚಟುವಟಿಕೆ ಮಿತಿಮೀರುತ್ತಿದೆ. ಹೀಗಾಗಿ ಭಾರತೀಯ ಪ್ರಜೆಗಳು ವಿಶೇಷ ವಿಮಾನದಲ್ಲಿ ಭಾರತಕ್ಕೆ ತೆರಳಲೇಬೇಕು ಎಂದು ಧೂತಾವಾಸ ಕಚೇರಿ ತಿಳಿಸಿದೆ.

ಇದನ್ನೂ ಓದಿ: ಬಿಹಾರ ಚುನಾವಣೆಯಲ್ಲಿ ಅಪರಾಧ ಹಿನ್ನೆಲೆಯ ಮಾಹಿತಿ ಪ್ರಕಟಿಸದ 8 ರಾಜಕೀಯ ಪಕ್ಷಗಳಿಗೆ ದಂಡ ವಿಧಿಸಿದ ಸುಪ್ರೀಂಕೋರ್ಟ್​

Published On - 6:54 pm, Tue, 10 August 21