
ಟೆಹ್ರಾನ್, ಮಾರ್ಚ್ 12: ಇರಾಕ್ನ ಖೋರ್ ಅಲ್ ಜುಬೈರ್ ಬಂದರಿನ ಬಳಿ ಇರಾನ್ನ ಹಡಗು ಅಮೆರಿಕದ ಒಡೆತನದ ಕಚ್ಚಾ ತೈಲ ಟ್ಯಾಂಕರ್ (Oil Tanker) ಸಫೀಯಾ ವಿಷ್ಣುವನ್ನು (Safesea Vishnu) ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇದರ ಜೊತೆಗೆ ಮಾಲ್ಡೀವ್ಸ್ನ ಇನ್ನೊಂದು ಟ್ಯಾಂಕರ್ ಮೇಲೂ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಭಾರತೀಯ ಪ್ರಜೆ ಪ್ರಾಣ ಕಳೆದುಕೊಂಡಿದ್ದಾರೆ. ಈ ಮೂಲಕ ಗಲ್ಫ್ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧ ಮತ್ತೋರ್ವ ಭಾರತೀಯನನ್ನು ಬಲಿ ತೆಗೆದುಕೊಂಡಿದೆ. ಈ ದಾಳಿಯಲ್ಲಿ ಒಬ್ಬ ಭಾರತೀಯ ಪ್ರಜೆ ಪ್ರಾಣ ಕಳೆದುಕೊಂಡಿದ್ದು, ಹಡಗಿನಲ್ಲಿದ್ದ ಉಳಿದ 27 ಸಿಬ್ಬಂದಿಯನ್ನು ರಕ್ಷಿಸಿ ಬಸ್ರಾಗೆ ಸ್ಥಳಾಂತರಿಸಲಾಗಿದೆ.
ಜಾಗತಿಕ ಕಡಲ ಕಾರ್ಯಪಡೆಯ ಶೇ. 15ಕ್ಕಿಂತ ಹೆಚ್ಚು ಜನರು ಭಾರತೀಯರು ಇರುವುದರಿಂದ, ಮುಂದಿನ ಯಾವುದೇ ದಾಳಿಯಲ್ಲಿ ಇನ್ನಷ್ಟು ಭಾರತೀಯ ಪ್ರಜೆಗಳು ಅಪಾಯಗಳಿವೆ ಎಂದು ಮೂಲಗಳು ಎಚ್ಚರಿಸಿವೆ.
ಇದನ್ನೂ ಓದಿ: ಬೇರೆಡೆಗೆ ಹೋಗುತ್ತಿದ್ದ ರಷ್ಯನ್ ತೈಲ ಟ್ಯಾಂಕರ್ಗಳು ಭಾರತದ ಕಡೆಗೆ; ಆಪತ್ಕಾಲದಲ್ಲಿ ಭಾರತಕ್ಕೆ ದಕ್ಕಿದ ನೆರವು
ಮೂಲಗಳ ಪ್ರಕಾರ, ಸಫೆಸಿಯಾ ವಿಷ್ಣು 2007ರಲ್ಲಿ ನಿರ್ಮಿಸಲಾದ ಕಚ್ಚಾ ತೈಲ ಟ್ಯಾಂಕರ್ ಆಗಿದೆ. ಈ ಹಡಗು 228.6 ಮೀಟರ್ ಉದ್ದ, 32.57 ಮೀಟರ್ ಅಗಲವಿದ್ದು, ಮಾರ್ಷಲ್ ದ್ವೀಪಗಳ ಧ್ವಜದ ಅಡಿಯಲ್ಲಿ ಸಾಗುತ್ತದೆ. ಇದು 42,010 ಒಟ್ಟು ಟನ್ ಮತ್ತು 73,976 ಡೆಡ್ವೈಟ್ ಟನ್ ಹೊಂದಿದೆ.
ಮಾರ್ಚ್ 1 ಮತ್ತು 2ರಂದು ಇರಾನಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳು ಒಮನ್ ಕರಾವಳಿಯಲ್ಲಿ MV MKD ವ್ಯೋಮ್ ಮತ್ತು MV ಸ್ಕೈಲೈಟ್ ಎಂಬ ವ್ಯಾಪಾರಿ ಹಡಗುಗಳನ್ನು ಗುರಿಯಾಗಿಸಿಕೊಂಡಿದ್ದವು. ಈ ದಾಳಿಗಳಲ್ಲಿ ಮೂವರು ಭಾರತೀಯರು ಸಾವನ್ನಪ್ಪಿದ್ದರು. ಈ ದಾಳಿಯಲ್ಲಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು, ಒಬ್ಬ ವ್ಯಕ್ತಿಯ ಸ್ಥಿತಿ ಇನ್ನೂ ಗಂಭೀರವಾಗಿದೆ.
ಇದನ್ನೂ ಓದಿ: ದಾಳಿ ನಡೆಸಲು ಇನ್ನೇನೂ ಉಳಿದಿಲ್ಲ; ಇರಾನ್ ಮೇಲಿನ ಯುದ್ಧ ಬೇಗ ಕೊನೆಯಾಗಲಿದೆ ಎಂದ ಟ್ರಂಪ್
ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ ಮತ್ತು ಕುವೈತ್ ಸೇರಿದಂತೆ ಗಲ್ಫ್ ದೇಶಗಳಲ್ಲಿ ಸುಮಾರು 9ರಿಂದ 10 ಮಿಲಿಯನ್ ಭಾರತೀಯರು ವಾಸಿಸುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ. ಇರಾನ್ ಯುಎಸ್ ನೆಲೆಗಳು ಮತ್ತು ತೈಲ ಸೌಲಭ್ಯಗಳನ್ನು ಹೊಂದಿರುವ ಗಲ್ಫ್ ಸಹಕಾರ ಮಂಡಳಿಯ ರಾಜ್ಯಗಳನ್ನು ಗುರಿಯಾಗಿಸಿಕೊಂಡು 1,000ಕ್ಕೂ ಹೆಚ್ಚು ಡ್ರೋನ್ಗಳು ಮತ್ತು ಕ್ಷಿಪಣಿಗಳನ್ನು ಹಾರಿಸಿರುವುದರಿಂದ ಅಲ್ಲಿನ ಭಾರತೀಯ ಸಮುದಾಯವು ಹೆಚ್ಚಿನ ಅಪಾಯವನ್ನು ಎದುರಿಸುತ್ತಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:40 am, Thu, 12 March 26