Zohran Mamdani: ಭಾರತದ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಪುತ್ರ ಜೊಹ್ರಾನ್ ಮಮ್ದಾನಿ ನ್ಯೂಯಾರ್ಕ್​ನ ನೂತನ ಮೇಯರ್

New York Mayor Election: ಭಾರತೀಯ ಮೂಲದ ಡೆಮಾಕ್ರಟಿಕ್ ಅಭ್ಯರ್ಥಿ ಜೋಹ್ರಾನ್ ಮಮ್ದಾನಿ(Zohran Mamdani) ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಅವರು ನ್ಯೂಯಾರ್ಕ್‌ನ ಮೊದಲ ಮುಸ್ಲಿಂ ಮೇಯರ್. ಮಮ್ದಾನಿಯವರ ಗೆಲುವು ಮಮ್ದಾನಿಯನ್ನು ನಿರಂತರವಾಗಿ ವಿರೋಧಿಸುತ್ತಿದ್ದ ಡೊನಾಲ್ಡ್ ಟ್ರಂಪ್‌ಗೆ ದೊಡ್ಡ ಹೊಡೆತವಾಗಿದೆ. ಮಮ್ದಾನಿ ಗೆದ್ದರೆ ನ್ಯೂಯಾರ್ಕ್‌ಗೆ ಹಣಕಾಸು ಒದಗಿಸುವುದನ್ನು ನಿಲ್ಲಿಸುವುದಾಗಿ ಅವರು ಬೆದರಿಕೆ ಹಾಕಿದ್ದರು.

Zohran Mamdani: ಭಾರತದ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಪುತ್ರ ಜೊಹ್ರಾನ್ ಮಮ್ದಾನಿ ನ್ಯೂಯಾರ್ಕ್​ನ ನೂತನ ಮೇಯರ್
ಜೋಹ್ರಾನ್

Updated on: Nov 05, 2025 | 10:58 AM

ನ್ಯೂಯಾರ್ಕ್​, ನವೆಂಬರ್ 05: ಅಮೆರಿಕದ ನ್ಯೂಯಾರ್ಕ್ ನಗರವು ಐತಿಹಾಸಿಕ ರಾಜಕೀಯ ಬದಲಾವಣೆಗೆ ಸಾಕ್ಷಿಯಾಗಿದೆ. ಭಾರತೀಯ ಮೂಲದ ಡೆಮಾಕ್ರಟಿಕ್ ಅಭ್ಯರ್ಥಿ ಜೋಹ್ರಾನ್ ಮಮ್ದಾನಿ(Zohran Mamdani) ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಅವರು ನ್ಯೂಯಾರ್ಕ್‌ನ ಮೊದಲ ಮುಸ್ಲಿಂ ಮೇಯರ್. ಮಮ್ದಾನಿಯವರ ಗೆಲುವು ಮಮ್ದಾನಿಯನ್ನು ನಿರಂತರವಾಗಿ ವಿರೋಧಿಸುತ್ತಿದ್ದ ಡೊನಾಲ್ಡ್ ಟ್ರಂಪ್‌ಗೆ ದೊಡ್ಡ ಹೊಡೆತವಾಗಿದೆ. ಮಮ್ದಾನಿ ಗೆದ್ದರೆ ನ್ಯೂಯಾರ್ಕ್‌ಗೆ ಹಣಕಾಸು ಒದಗಿಸುವುದನ್ನು ನಿಲ್ಲಿಸುವುದಾಗಿ ಅವರು ಬೆದರಿಕೆ ಹಾಕಿದ್ದರು.

ಬುಧವಾರ ಪ್ರಕಟವಾದ ಫಲಿತಾಂಶಗಳಲ್ಲಿ, ಮಮ್ದಾನಿ ತಮ್ಮ ಎರಡೂ ಪ್ರತಿಸ್ಪರ್ಧಿಗಳನ್ನು ಮೀರಿಸಿ ದೊಡ್ಡ ಗೆಲುವು ದಾಖಲಿಸಿದರು. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ನ್ಯೂಯಾರ್ಕ್ ಗವರ್ನರ್ ಆಂಡ್ರ್ಯೂ ಕ್ಯುಮೊ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಕರ್ಟಿಸ್ ಸ್ಲಿವಾ ಅವರನ್ನು ಜೋಹ್ರಾನ್ ಮಮ್ದಾನಿ ಸೋಲಿಸಿದರು. ಇದಕ್ಕೂ ಮೊದಲು, ಹಾಲಿ ಮೇಯರ್ ಎರಿಕ್ ಆಡಮ್ಸ್ ಸೆಪ್ಟೆಂಬರ್‌ನಲ್ಲಿ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದ್ದರು.

ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಚುನಾವಣೆ ನಡೆಯಿತು. ಅಕ್ಟೋಬರ್ 25 ರಂದು ಆರಂಭಿಕ ಮತದಾನ ಪ್ರಾರಂಭವಾಗಿ ಭಾನುವಾರ ಕೊನೆಗೊಂಡಿತು. ಡೊನಾಲ್ಡ್ ಟ್ರಂಪ್ ಅವರ ಎರಡನೇ ಅಧ್ಯಕ್ಷೀಯ ಅವಧಿಯಲ್ಲಿ ಇದು ಮೊದಲ ಪ್ರಮುಖ ಚುನಾವಣೆಯಾಗಿರುವುದರಿಂದ ಈ ಚುನಾವಣೆಯನ್ನು ಮಹತ್ವದ್ದಾಗಿ ಪರಿಗಣಿಸಲಾಗಿದೆ.

ಮತ್ತಷ್ಟು ಓದಿ:  ಪಾಕಿಸ್ತಾನದ ಪಿಆರ್; ನ್ಯೂಯಾರ್ಕ್ ಮೇಯರ್ ಅಭ್ಯರ್ಥಿ ಜೋಹ್ರಾನ್ ಮಮ್ದಾನಿ ವಿರುದ್ಧ ಕಾಂಗ್ರೆಸ್, ಬಿಜೆಪಿ ವಾಗ್ದಾಳಿ

 

ಜೋಹ್ರಾನ್ ಮಮ್ದಾನಿ ಯಾರು?

34 ವರ್ಷದ ಜೋಹ್ರಾನ್ ಮಮ್ದಾನಿ ಉಗಾಂಡಾದಲ್ಲಿ ಜನಿಸಿ ನ್ಯೂಯಾರ್ಕ್ ನಗರದಲ್ಲಿ ಬೆಳೆದರು. ಅವರು ನ್ಯೂಯಾರ್ಕ್ ರಾಜ್ಯ ಅಸೆಂಬ್ಲಿಯ ಸದಸ್ಯರಾಗಿದ್ದಾರೆ ಮತ್ತು ತಮ್ಮನ್ನು ತಾವು ಡೆಮಾಕ್ರಟಿಕ್ ಸಮಾಜವಾದಿ ಎಂದು ಗುರುತಿಸಿಕೊಳ್ಳುತ್ತಾರೆ. ಜೋಹ್ರಾನ್ ಪ್ರಸಿದ್ಧ ಭಾರತೀಯ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಮತ್ತು ಉಗಾಂಡಾದ ಭಾರತೀಯ ಮೂಲದ ಬರಹಗಾರ ಮಹಮೂದ್ ಮಮ್ದಾನಿ ಅವರ ಮಗ. ಅವರ ವಿಜಯವನ್ನು ಅಮೆರಿಕದಲ್ಲಿರುವ ಭಾರತೀಯ ವಲಸಿಗರಿಗೆ ಹೆಮ್ಮೆಯ ಕ್ಷಣವೆಂದು ಪರಿಗಣಿಸಲಾಗುತ್ತಿದೆ.

ಬೀದಿಗಳಲ್ಲಿ ಡಬಲ್ ಪಾರ್ಕಿಂಗ್‌ನಿಂದ ಉಂಟಾಗುವ ಸಮಸ್ಯೆಗಳನ್ನು ತೆಗೆದುಹಾಕಲು ಪ್ರಾಥಮಿಕ ಲೇನ್‌ಗಳು ಮತ್ತು ಬಸ್‌ಗಳಿಗೆ ಲೋಡಿಂಗ್ ವಲಯಗಳನ್ನು ರಚಿಸುವುದಾಗಿಯೂ ಅವರು ಘೋಷಿಸಿದ್ದರು.

ಅವರ ತಂದೆ ಮಹಮೂದ್ ಮಮ್ದಾನಿ ಗುಜರಾತಿ ಮೂಲದವರು ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಜೋಹ್ರಾನ್ 1991 ರಲ್ಲಿ ಉಗಾಂಡಾದ ರಾಜಧಾನಿ ಕಂಪಾಲಾದಲ್ಲಿ ಜನಿಸಿದರು. ಅವರು ಏಳನೇ ವಯಸ್ಸಿನಲ್ಲಿ ನ್ಯೂಯಾರ್ಕ್‌ಗೆ ತೆರಳಿದರು. ಜೋಹ್ರಾನ್ ಏಳು ವರ್ಷಗಳ ಹಿಂದೆ ಯುಎಸ್ ಪೌರತ್ವವನ್ನು ಪಡೆದರು. ಅವರು 2014 ರಲ್ಲಿ ಬೋಡೆನ್ ಕಾಲೇಜಿನಿಂದ ಪದವಿ ಪಡೆದರು ಮತ್ತು 2018 ರಲ್ಲಿ ಯುಎಸ್ ಪೌರತ್ವವನ್ನು ಪಡೆದರು.

ಅಮೆರಿಕದ ಅಧ್ಯಕ್ಷರಂತೆ, ನ್ಯೂಯಾರ್ಕ್ ನಗರದ ಮೇಯರ್ ಅಧಿಕಾರಾವಧಿ ನಾಲ್ಕು ವರ್ಷಗಳು, ಮತ್ತು ಒಬ್ಬ ವ್ಯಕ್ತಿಯು ಈ ಹುದ್ದೆಯನ್ನು ಎರಡು ಬಾರಿ ಮಾತ್ರ ಹೊಂದಬಹುದು.

ಯಾರಿಗೆ ಎಷ್ಟು ಮತಗಳು ಬಂದಿವೆ

ಮಮ್ದಾನಿ ನ್ಯೂಯಾರ್ಕ್​ ಮೇಯರ್ ಚುನಾವಣೆಯಲ್ಲಿ 948,202 ಮತಗಳನ್ನು (ಶೇಕಡಾ 50.6) ಗಳಿಸುವ ಮೂಲಕ ಗೆಲುವು ಸಾಧಿಸಿದ್ದಾರೆ. ಶೇಕಡಾ 83 ರಷ್ಟು ಮತಗಳನ್ನು ಪಡೆದಂತಾಗಿದೆ. ಅವರು ಹಲವಾರು ತಿಂಗಳುಗಳಿಂದ NYC ಮೇಯರ್ ಚುನಾವಣೆಯಲ್ಲಿ ಮುಂಚೂಣಿಯಲ್ಲಿದ್ದರು ಮತ್ತು ಮಂಗಳವಾರ ರಿಪಬ್ಲಿಕನ್ ಅಭ್ಯರ್ಥಿ ಕರ್ಟಿಸ್ ಸ್ಲಿವಾ ಮತ್ತು ರಾಜಕೀಯ ಹೆವಿವೇಯ್ಟ್ ಮಾಜಿ ನ್ಯೂಯಾರ್ಕ್ ರಾಜ್ಯ ಗವರ್ನರ್ ಆಂಡ್ರ್ಯೂ ಕ್ಯುಮೊ ಅವರನ್ನು ಸೋಲಿಸಿದ್ದಾರೆ.  ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಟ್ರಂಪ್ ಬೆಂಬಲವನ್ನು ಹೊಂದಿದ್ದರು. ಕ್ಯುಮೊ 776,547 ಮತಗಳನ್ನು (ಶೇಕಡಾ 41.3) ಪಡೆದರೆ, ಸ್ಲಿವಾ 137,030 ಮತಗಳನ್ನು ಪಡೆದರು.

1969 ರ ನಂತರ ಮೊದಲ ಬಾರಿಗೆ ಎರಡು ಮಿಲಿಯನ್ ಮತಗಳು ಚಲಾವಣೆಯಾಗಿವೆ ಎಂದು NYC ಚುನಾವಣಾ ಮಂಡಳಿ ತಿಳಿಸಿದೆ, ಮ್ಯಾನ್‌ಹ್ಯಾಟನ್ 444,439 ಮತಗಳೊಂದಿಗೆ ಮುನ್ನಡೆ ಸಾಧಿಸಿದೆ, ನಂತರ ಬ್ರಾಂಕ್ಸ್ (187,399), ಬ್ರೂಕ್ಲಿನ್ (571,857), ಕ್ವೀನ್ಸ್ (421,176) ಮತ್ತು ಸ್ಟೇಟನ್ ಐಲ್ಯಾಂಡ್ (123,827) ಇವೆ.

 

ಅಂತಾರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 9:14 am, Wed, 5 November 25