AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂಯಾರ್ಕ್ ಮೇಯರ್ ಆಗಿ ಆಯ್ಕೆಯಾದ ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ಯಾರು? 

33 ವರ್ಷದ ಭಾರತೀಯ ಮೂಲದ ಮುಸ್ಲಿಂ ಮತ್ತು ಎಡಪಂಥೀಯ ಅಭ್ಯರ್ಥಿಯಾದ ಜೋಹ್ರಾನ್ ಮಮ್ದಾನಿ ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ಗೆದ್ದಿದ್ದಾರೆ. ಜೋಹ್ರಾನ್ ಈ ಮೂಲಕ ನ್ಯೂಯಾರ್ಕ್ ನಗರದ ಮೊದಲ ಭಾರತೀಯ-ಅಮೆರಿಕನ್ ಮತ್ತು ಮೊದಲ ಮುಸ್ಲಿಂ ಮೇಯರ್ ಆಗಿದ್ದಾರೆ. ಭಾರತೀಯ ಮೂಲದ ಮಮ್ದಾನಿ ಯಾರು? ಅವರ ಪೋಷಕರು ಯಾರು? ಭಾರತಕ್ಕೂ ಅವರಿಗೂ ಇರುವ ನಂಟು ಯಾವ ರೀತಿಯದ್ದು? ಎಂಬುದೆಲ್ಲದರ ಕುರಿತಾದ ವಿರವಾದ ಮಾಹಿತಿ ಇಲ್ಲಿದೆ.

ನ್ಯೂಯಾರ್ಕ್ ಮೇಯರ್ ಆಗಿ ಆಯ್ಕೆಯಾದ ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ಯಾರು? 
Zohran Mamdani
ಸುಷ್ಮಾ ಚಕ್ರೆ
|

Updated on:Jun 25, 2025 | 3:42 PM

Share

ನವದೆಹಲಿ, ಜೂನ್ 25: ಅಮೆರಿಕದ ನ್ಯೂಯಾರ್ಕ್ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾರತೀಯ ಮೂಲದ 33 ವರ್ಷದ ಜೋಹ್ರಾನ್ ಮಮ್ದಾನಿ (Zohran Mamdani) ಗೆಲುವು ಸಾಧಿಸಿದ್ದಾರೆ. ಈ ಚುನಾವಣೆಯಲ್ಲಿ ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ ವಿರುದ್ಧ ಜೋಹ್ರಾನ್ ಮಮ್ದಾನಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಜೋಹ್ರಾನ್ ನ್ಯೂಯಾರ್ಕ್ ನಗರದ ಮೊದಲ ಮುಸ್ಲಿಂ ಮತ್ತು ಭಾರತೀಯ-ಅಮೆರಿಕನ್ ಮೇಯರ್ ಆಗಲಿದ್ದಾರೆ. ಪ್ರಸಿದ್ಧ ಭಾರತೀಯ ಅಮೇರಿಕನ್ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಮತ್ತು ಭಾರತೀಯ ಮೂಲದ, ಉಗಾಂಡಾದ ಮಾರ್ಕ್ಸ್ವಾದಿ ವಿದ್ವಾಂಸ ಮಹಮೂದ್ ಮಮ್ದಾನಿ ಅವರ ಪುತ್ರನಾಗಿರುವ ಜೋಹ್ರಾನ್ ಮಮ್ದಾನಿ, ಡೆಮಾಕ್ರಟಿಕ್ ಮೇಯರ್ ಪ್ರಾಥಮಿಕ ಚುನಾವಣೆಯಲ್ಲಿ ತಮ್ಮ ಅದ್ಭುತ ಗೆಲುವಿಗೆ ತಮ್ಮ ಬೆಂಬಲಿಗರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಜೋಹ್ರಾನ್ ಮಮ್ದಾನಿ ಯಾರು?:

ಇದನ್ನೂ ಓದಿ
Image
ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಸೆರೆ ಹಿಡಿದಿದ್ದ ಪಾಕ್ ಮೇಜರ್ ಸಾವು
Image
ಬಾಹ್ಯಾಕಾಶದಿಂದ ಬಂದ ಶುಭಾಂಶು ಶುಕ್ಲಾರ ಮೊದಲ ಸಂದೇಶ
Image
ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ಒತ್ತೆಯಾಳಾಗಿರಿಸಿಕೊಂಡಿತ್ತು: ಮೋದಿ
Image
ಭಾರತ ಎಂದಿಗೂ ಸರ್ವಾಧಿಕಾರವನ್ನು ಸ್ವೀಕರಿಸುವುದಿಲ್ಲ; ಅಮಿತ್ ಶಾ

ಜೋಹ್ರಾನ್ ಮಮ್ದಾನಿಯ ಪೋಷಕರು ಭಾರತೀಯ ಮೂಲದವರು. ಸಲಾಮ್ ಬಾಂಬೆ! ಮತ್ತು ಮಾನ್ಸೂನ್ ವೆಡ್ಡಿಂಗ್‌ನಂತಹ ಚಲನಚಿತ್ರಗಳ ಮೂಲಕ ಜನಪ್ರಿಯರಾಗಿರುವ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಮತ್ತು ಭಾರತೀಯ ಮೂಲದ ಉಗಾಂಡಾದ ವಿದ್ವಾಂಸ ಮಹಮೂದ್ ಮಮ್ದಾನಿ ಅವರ ಮಗನೇ ಜೋಹ್ರಾನ್. ಅಕ್ಟೋಬರ್ 18, 1991ರಂದು ಉಗಾಂಡಾದ ಕಂಪಾಲಾದಲ್ಲಿ ಜನಿಸಿದ ಮಮ್ದಾನಿಯ ಪೋಷಕರು ಭಾರತೀಯ ಮೂಲದವರು. ಅವರು ತಮ್ಮ ಬಾಲ್ಯವನ್ನು ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ಕಳೆದರು. 7ನೇ ವಯಸ್ಸಿನಲ್ಲಿ ನ್ಯೂಯಾರ್ಕ್ ನಗರಕ್ಕೆ ತೆರಳುವ ಮೊದಲು ಸೇಂಟ್ ಜಾರ್ಜ್ ಗ್ರಾಮರ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ನಂತರ ಅವರು ಬ್ಯಾಂಕ್ ಸ್ಟ್ರೀಟ್ ಸ್ಕೂಲ್ ಫಾರ್ ಚಿಲ್ಡ್ರನ್ ಮತ್ತು ಬ್ರಾಂಕ್ಸ್ ಹೈಸ್ಕೂಲ್ ಆಫ್ ಸೈನ್ಸ್‌ನಿಂದ ಪದವಿ ಪಡೆದರು. 2014ರಲ್ಲಿ, ಅವರು ಬೌಡೊಯಿನ್ ಕಾಲೇಜಿನಿಂದ ಆಫ್ರಿಕಾನಾ ಸ್ಟಡೀಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಇದನ್ನೂ ಓದಿ: Axiom 4: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತರಿಕ್ಷಯಾನ ಶುರು

2018ರಲ್ಲಿ ಜೋಹ್ರಾನ್ ಅವರಿಗೆ ಅಮೆರಿಕದ ಪ್ರಜೆಯಾಗಿ ಪೌರತ್ವ ಸಿಕ್ಕಿತು. ಮಮ್ದಾನಿಯವರ ರಾಜಕೀಯ ಚಟುವಟಿಕೆಯು ಕಾಲೇಜಿನಲ್ಲಿ ಪ್ರಾರಂಭವಾಯಿತು. 2019ರಲ್ಲಿ ಅವರು ಆಸ್ಟೋರಿಯಾ ಮತ್ತು ಲಾಂಗ್ ಐಲ್ಯಾಂಡ್ ನಗರವನ್ನು ಒಳಗೊಂಡಿರುವ 36ನೇ ಜಿಲ್ಲೆಯನ್ನು ಪ್ರತಿನಿಧಿಸುವ ನ್ಯೂಯಾರ್ಕ್ ರಾಜ್ಯ ಅಸೆಂಬ್ಲಿಗೆ ಆಯ್ಕೆಯಾದರು. ಶಿಯಾ ಮುಸ್ಲಿಂ ಆಗಿರುವ ಜೋಹ್ರಾನ್ ಮಮ್ದಾನಿ ಈ ವರ್ಷದ ಆರಂಭದಲ್ಲಿ ಸಿರಿಯನ್ ಕಲಾವಿದೆ ರಾಮ ದುವಾಜಿಯನ್ನು ವಿವಾಹವಾಗಿದ್ದಾರೆ.

ಜೋಹ್ರಾನ್ ಅವರ ತಂದೆ ಮಹಮೂದ್ ಮಮ್ದಾನಿ ಉಗಾಂಡಾದಲ್ಲಿ ಜನಿಸಿದ ಭಾರತೀಯ ವಿದ್ವಾಂಸರಾಗಿದ್ದು, ವಸಾಹತುಶಾಹಿ, ರಾಜಕೀಯ ಹಿಂಸಾಚಾರ ಮತ್ತು ಆಫ್ರಿಕನ್ ಇತಿಹಾಸದ ಕುರಿತಾದ ಅವರ ಕೃತಿಗಳನ್ನು ಪ್ರಪಂಚದಾದ್ಯಂತದ ಶೈಕ್ಷಣಿಕ ವಲಯದಲ್ಲಿ ಪ್ರತಿನಿಧಿಸಲಾಗುತ್ತದೆ. ಅವರು ಕೊಲಂಬಿಯಾ ವಿಶ್ವವಿದ್ಯಾಲಯದಂತಹ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಪಾಠ ಕಲಿಸಿದ್ದಾರೆ. ಪ್ರಸ್ತುತ ಉಗಾಂಡಾದ ಮಕೆರೆರೆ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ರಿಸರ್ಚ್‌ನ ನಿರ್ದೇಶಕರಾಗಿದ್ದಾರೆ.

ಇದನ್ನೂ ಓದಿ: US Visa: ಅಮೆರಿಕ ವೀಸಾ ಬೇಕೆಂದರೆ ಈ ನಿಯಮ ಕಡ್ಡಾಯ, ನಿಮ್ಮ ಚಟುವಟಿಕೆಗಳ ಮೇಲಿರಲಿದೆ ಟ್ರಂಪ್ ಕಣ್ಣು

ಜೋಹ್ರಾನ್ ಅವರ ತಾಯಿ ಮೀರಾ ನಾಯರ್ ವಿಶ್ವಾದ್ಯಂತ ಸಿನಿಪ್ರಿಯರಿಗೆ ಪರಿಚಿತ ಹೆಸರು. ಭಾರತೀಯ-ಅಮೇರಿಕನ್ ನಿರ್ದೇಶಕಿಯಾಗಿರುವ ಇವರು ಸಲಾಮ್ ಬಾಂಬೆ!, ಮಾನ್ಸೂನ್ ವೆಡ್ಡಿಂಗ್, ದಿ ನೇಮ್‌ಸೇಕ್ ಮತ್ತು ಕ್ವೀನ್ ಆಫ್ ಕಾಟ್ವೆ ಮುಂತಾದ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಕಂಪಾಲಾ ಮತ್ತು ಕೇಪ್ ಟೌನ್‌ನಲ್ಲಿ ವಾಸಿಸುತ್ತಿದ್ದ ಇವರ ಕುಟುಂಬ ಜೋಹ್ರಾನ್ 7 ವರ್ಷದವನಿದ್ದಾಗ ನ್ಯೂಯಾರ್ಕ್ ನಗರಕ್ಕೆ ಸ್ಥಳಾಂತರಗೊಂಡಿತು. ನ್ಯೂಯಾರ್ಕ್‌ನಲ್ಲಿಯೇ ಜೋಹ್ರಾನ್ ಅವರು ಬ್ಯಾಂಕ್ ಸ್ಟ್ರೀಟ್ ಶಾಲೆ ಮತ್ತು ನಂತರ ಬ್ರಾಂಕ್ಸ್ ಹೈಸ್ಕೂಲ್ ಆಫ್ ಸೈನ್ಸ್‌ನಲ್ಲಿ ವ್ಯಾಸಂಗ ಮಾಡಿದರು. ನಂತರ ಬೌಡೊಯಿನ್ ಕಾಲೇಜಿನಲ್ಲಿ ಆಫ್ರಿಕಾನ ಸ್ಟಡೀಸ್ ಅಧ್ಯಯನ ಮಾಡಿದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:30 pm, Wed, 25 June 25