ಭಾರತ-ಪಾಕಿಸ್ತಾನದ ಯುದ್ಧ ನಿಲ್ಲಿಸಿದ್ದು ನಾನೇ; ಮತ್ತೆ ಹಳೇ ರಾಗವನ್ನೇ ಹಾಡಿದ ಟ್ರಂಪ್
ಭಾರತ ಮತ್ತು ಪಾಕಿಸ್ತಾನದ ವ್ಯಾಪಾರದ ಕುರಿತು ಸರಣಿ ಫೋನ್ ಕರೆಗಳೊಂದಿಗೆ ನಾನು ಅದನ್ನು ಕೊನೆಗೊಳಿಸಿದೆ. 'ನೀವು ಪರಸ್ಪರ ಹೋರಾಡಲು ಹೋದರೆ, ನಾವು ಯಾವುದೇ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳುವುದಿಲ್ಲ' ಎಂದು ನಾನು ಹೇಳಿದೆ. ಅದಕ್ಕೆ ಅವರು 'ಇಲ್ಲ, ನಾವು ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಲು ಬಯಸುತ್ತೇವೆ. ನಾವು ಪರಮಾಣು ಯುದ್ಧವನ್ನು ನಿಲ್ಲಿಸಿದ್ದೇವೆ' ಎಂದು ಹೇಳಿದರು. ಕಳೆದ ವಾರ ಪಾಕಿಸ್ತಾನದ ಜನರಲ್ ನನ್ನ ಕಚೇರಿಯಲ್ಲಿದ್ದರು. ಪ್ರಧಾನಿ ಮೋದಿ ನನ್ನ ಉತ್ತಮ ಸ್ನೇಹಿತ. ಅವರು ಒಬ್ಬ ಬಹಳ ಸಂಭಾವಿತ ವ್ಯಕ್ತಿ ಎಂದು ಟ್ರಂಪ್ ಹೇಳಿದ್ದಾರೆ.
ನವದೆಹಲಿ, ಜೂನ್ 25: ನೊಬೆಲ್ ಶಾಂತಿ ಪ್ರಶಸ್ತಿ (Nobel Prize) ಗೆಲ್ಲುವ ಬಯಕೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ತಡೆದಿದ್ದೇನೆ ಎಂದು ಮತ್ತೆ ಹೇಳಿದ್ದಾರೆ. ಇಸ್ರೇಲ್-ಇರಾನ್ ನಡುವೆ ಕದನವಿರಾಮ ಒಪ್ಪಂದ ಮಾಡಿಸಿದ್ದು ನಾನೇ, ಭಾರತ ಮತ್ತು ಪಾಕಿಸ್ತಾನದ (India-Pakistan Conflict) ನಡುವೆ ಯುದ್ಧ ನಿಲ್ಲಿಸಿದ್ದು ಕೂಡ ನಾನೇ ಎಂದು ಅವರು ಪ್ರತಿಪಾದಿಸಿದ್ದಾರೆ. ವ್ಯಾಪಾರ ಮಾತುಕತೆಗಳನ್ನು ಬಳಸಿಕೊಂಡು ಭಾರತ-ಪಾಕ್ ಯುದ್ಧವನ್ನು ನಾನು ತಡೆದೆ ಎಂದು ಅವರು ಹೇಳಿದ್ದಾರೆ. ನೆದರ್ಲೆಂಡ್ನ ಹೇಗ್‌ನಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್, ವ್ಯಾಪಾರದ ಮೇಲೆ ಕೇಂದ್ರೀಕರಿಸಿದ ಸರಣಿ ಫೋನ್ ಕರೆಗಳ ಮೂಲಕ ಭಾರತ ಮತ್ತು ಪಾಕಿಸ್ತಾನದ ಸಂಘರ್ಷವನ್ನು ಪರಿಹರಿಸಿದ್ದೇನೆ ಎಂದು ಮತ್ತೊಮ್ಮೆ ಪುನರುಚ್ಛರಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ವ್ಯಾಪಾರದ ಕುರಿತು ಸರಣಿ ಫೋನ್ ಕರೆಗಳೊಂದಿಗೆ ನಾನು ಅದನ್ನು ಕೊನೆಗೊಳಿಸಿದೆ. ‘ನೀವು ಪರಸ್ಪರ ಹೋರಾಡಲು ಹೋದರೆ, ನಾವು ಯಾವುದೇ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳುವುದಿಲ್ಲ’ ಎಂದು ನಾನು ಹೇಳಿದೆ. ಅದಕ್ಕೆ ಅವರು ‘ಇಲ್ಲ, ನಾವು ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಲು ಬಯಸುತ್ತೇವೆ. ನಾವು ಪರಮಾಣು ಯುದ್ಧವನ್ನು ನಿಲ್ಲಿಸಿದ್ದೇವೆ’ ಎಂದು ಹೇಳಿದರು. ಕಳೆದ ವಾರ ಪಾಕಿಸ್ತಾನದ ಜನರಲ್ ನನ್ನ ಕಚೇರಿಯಲ್ಲಿದ್ದರು. ಪ್ರಧಾನಿ ಮೋದಿ ನನ್ನ ಉತ್ತಮ ಸ್ನೇಹಿತ. ಅವರು ಒಬ್ಬ ಬಹಳ ಸಂಭಾವಿತ ವ್ಯಕ್ತಿ ಎಂದು ಟ್ರಂಪ್ ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚಿಕ್ಕಬಳ್ಳಾಪುರ: 1 ಕೋಟಿ 11 ಲಕ್ಷ ರೂ ಮೌಲ್ಯದ ಕುದುರೆಗೆ ಅದ್ದೂರಿ ಸ್ವಾಗತ

ಸಿಬ್ಬಂದಿಯನ್ನ ಹೆದರಿಸಿ ಮಸಾಜ್ ಮಾಡಿಸಿಕೊಂಡ ಮುಖ್ಯಶಿಕ್ಷಕಿ: ವಿಡಿಯೋ ವೈರಲ್

ಬೀದರ್ನ ಐತಿಹಾಸಿಕ ಗುರುದ್ವಾರಕ್ಕೆ ಮತ್ತೊಮ್ಮೆ ಬಾಂಬ್ ಬೆದರಿಕೆ

ಬೆಂಗಳೂರಿನ ಹಲವೆಡೆ ಮಳೆ: ಸಿಲಿಕಾನ್ ಸಿಟಿ ಮತ್ತಷ್ಟು ಕೂಲ್ ಕೂಲ್
