Turn The Volume Up: ನ್ಯೂಯಾರ್ಕ್ನ ಮೇಯರ್ ಆಗುತ್ತಿದ್ದಂತೆ ಟ್ರಂಪ್ಗೆ ಎಚ್ಚರಿಕೆ ಕೊಟ್ಟ ಜೊಹ್ರಾನ್ ಮಮ್ದಾನಿ
ಮಂಗಳವಾರ ನಡೆದ ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಜಕೀಯ ಪ್ರತಿಸ್ಪರ್ಧಿ ಜೋಹ್ರಾನ್ ಮಮ್ದಾನಿ ಐತಿಹಾಸಿಕ ಗೆಲುವು ಸಾಧಿಸಿದರು. ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ ಮತ್ತು ರಿಪಬ್ಲಿಕನ್ ಕರ್ಟಿಸ್ ಸ್ಲಿವಾ ಅವರನ್ನು ಸೋಲಿಸಿದರು. 34 ವರ್ಷದ ಮಮ್ದಾನಿ ನ್ಯೂಯಾರ್ಕ್ ನಗರದ ಅತ್ಯಂತ ಕಿರಿಯ ಮತ್ತು ಮೊದಲ ಮುಸ್ಲಿಂ ಮೇಯರ್ ಆಗಲಿದ್ದಾರೆ. ಅವರ ಗೆಲುವಿನ ನಂತರ, ನ್ಯೂಯಾರ್ಕ್ ನಗರದ ಜೋಹ್ರಾನ್ ಮಮ್ದಾನಿ ಅವರ ಪ್ರಚಾರ ಕೇಂದ್ರ ಕಚೇರಿಯ ಹೊರಗೆ ನೂರಾರು ಬೆಂಬಲಿಗರು ಜಮಾಯಿಸಿ ಫ್ರೀ ಪ್ಯಾಲೆಸ್ತೀನ್ ಎಂದು ಘೋಷಣೆ ಕೂಗಿದರು.

ನ್ಯೂಯಾರ್ಕ್, ನವೆಂಬರ್ 05: ಭಾರತ ಮೂಲದ ಜೋಹ್ರಾನ್ ಮಮ್ದಾನಿ(Zohran Mamdani) ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು. 34 ವರ್ಷದ ಮಮ್ದಾನಿ ಭಾರತೀಯ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಮತ್ತು ಉಗಾಂಡಾದ ಬರಹಗಾರ ಮಹಮೂದ್ ಮಮ್ದಾನಿ ಅವರ ಪುತ್ರ. ಅವರು ಶೇಕಡಾ 50 ಕ್ಕಿಂತ ಹೆಚ್ಚು ಮತಗಳನ್ನು ಪಡೆದರು, ಮತ್ತು ಅವರ ಗೆಲುವು ಅಮೆರಿಕದಲ್ಲಿ ವಲಸಿಗರ ವಿರುದ್ಧ ಟ್ರಂಪ್ ಅವರ ಕಠಿಣ ನೀತಿಗಳಿಗೆ ಸೋಲು ಎಂದು ಪರಿಗಣಿಸಲಾಗುತ್ತಿದೆ.
ಅವರು ಮೇಯರ್ ಆಗಿ ಆಯ್ಕೆಯಾದ ಬಳಿಕ ಮಾಡಿದ ಮೊದಲ ಭಾಷಣದಲ್ಲಿ ಟ್ರಂಪ್ಗೆ ಎಚ್ಚರಿಕೆ ನೀಡಿದ್ದಾರೆ. ನೀವು ನನ್ನನ್ನು ನೋಡುತ್ತಿದ್ದೀರಿ ಎಂಬುದು ನನಗೆ ಗೊತ್ತಿದೆ ನಿಮಗಾಗಿ ನನ್ನ ನಾಲ್ಕು ಮಾತುಗಳಿವೆ ಗಮನವಿಟ್ಟು ಕೇಳಿ ‘ಟರ್ನ್ ದಿ ವಾಲ್ಯೂಮ್ ಅಪ್’ ಎಂದು ಹೇಳಿದ್ದಾರೆ. ಭವಿಷ್ಯ ನಮ್ಮ ಕೈಲಿದೆ ಎಂದರು. ಮಮ್ದಾನಿ ತಮ್ಮ ಭಾಷಣವನ್ನು ಬಾಲಿವುಡ್ ಚಿತ್ರ ಧೂಮ್ ನ ಶೀರ್ಷಿಕೆ ಗೀತೆ ಧೂಮ್ ಮಚಾಲೆಯೊಂದಿಗೆ ಮುಗಿಸಿದರು.
ತಮ್ಮ ಭಾಷಣವನ್ನು ಕೇಳಲು ಅವರು ಅಮೆರಿಕ ಅಧ್ಯಕ್ಷರನ್ನು ಕೇಳಿಕೊಂಡರು. ಜನಸಮೂಹ ಮಮ್ದಾನಿಗಾಗಿ ಹುರಿದುಂಬಿಸುತ್ತಿದ್ದಂತೆ, ಅವರು ಅಮೆರಿಕ ಅಧ್ಯಕ್ಷರನ್ನು ಸವಾಲು ಹಾಕಿದರು ಮತ್ತು ನ್ಯೂಯಾರ್ಕ್ ನಿವಾಸಿಗಳು ಅವರ ವಿರುದ್ಧ ಒಗ್ಗಟ್ಟಾಗಿದ್ದಾರೆ ಎಂದು ಹೇಳಿದರು. ನಗರದ ಅತ್ಯಂತ ಕಿರಿಯ ಮೇಯರ್ ಆಗಲಿದ್ದಾರೆ. ಅವರು ಜನವರಿ 1, 2026 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಉಗಾಂಡಾದ ಕಂಪಾಲಾದಲ್ಲಿ ಜನಿಸಿದರು.
ಮತ್ತಷ್ಟು ಓದಿ: Zohran Mamdani: ಭಾರತದ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಪುತ್ರ ಜೊಹ್ರಾನ್ ಮಮ್ದಾನಿ ನ್ಯೂಯಾರ್ಕ್ನ ನೂತನ ಮೇಯರ್
ಆದರೆ ನ್ಯೂಯಾರ್ಕ್ ನಗರದಲ್ಲಿ ತಮ್ಮ ಕುಟುಂಬದೊಂದಿಗೆ ಬೆಳೆದ ಮಮ್ದಾನಿ 2018 ರಲ್ಲಿ ಅಮೇರಿಕನ್ ಪೌರತ್ವ ಪಡೆದರು. ಅವರ ತಾಯಿ ಮೀರಾ ನಾಯರ್ ಒಬ್ಬ ಪ್ರಸಿದ್ಧ ಚಲನಚಿತ್ರ ನಿರ್ದೇಶಕಿ ಮತ್ತು ಅವರ ತಂದೆ ಮಹಮೂದ್ ಮಮ್ದಾನಿ ಕೊಲಂಬಿಯಾದಲ್ಲಿ ಪ್ರೊಫೆಸರ್ ಆಗಿದ್ದಾರೆ.
#WATCH | Newly-elected Mayor of New York City, Zohran Mamdani says, “Standing before you, I think of the words of Jawaharlal Nehru. A moment comes but rarely in history when we step out from the old to the new, when an age ends and when the soul of a nation long suppressed finds… pic.twitter.com/42Vef68kgj
— ANI (@ANI) November 5, 2025
ಪ್ರ ಚಾರದ ಸಮಯದಲ್ಲಿ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಮ್ದಾನಿಯ ವಿರುದ್ಧ ಕಠಿಣ ಭಾಷೆಯನ್ನು ಬಳಸಿದರು, ಅವರನ್ನು “ಎಡಪಂಥೀಯ ಹುಚ್ಚ” ಎಂದು ಕರೆದಿದ್ದರು. ನ್ಯೂಯಾರ್ಕ್ ಮೇಯರ್ ಚುನಾವಣೆಯಲ್ಲಿ ಸೋತರೆ ಅವರನ್ನು ನ್ಯೂಯಾರ್ಕ್ ನಗರದಿಂದ ಹೊರಹಾಕುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:45 am, Wed, 5 November 25




