AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಡುರಸ್ತೆಯಲ್ಲೇ ಮೆಕ್ಸಿಕೋ ಅಧ್ಯಕ್ಷೆಗೆ ಮುತ್ತು ಕೊಡಲು ಪ್ರಯತ್ನಿಸಿದ ವ್ಯಕ್ತಿ!

ನಡುರಸ್ತೆಯಲ್ಲೇ ಮೆಕ್ಸಿಕೋ ಅಧ್ಯಕ್ಷೆಗೆ ಮುತ್ತು ಕೊಡಲು ಪ್ರಯತ್ನಿಸಿದ ವ್ಯಕ್ತಿ!

ಸುಷ್ಮಾ ಚಕ್ರೆ
|

Updated on:Nov 05, 2025 | 9:35 PM

Share

ಮೆಕ್ಸಿಕೋ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ರಸ್ತೆಯಲ್ಲಿ ಜನರನ್ನು ಭೇಟಿಯಾಗುತ್ತಿದ್ದಾಗ ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಅವರನ್ನು ಮುಟ್ಟಲು ಮತ್ತು ಮುತ್ತಿಡಲು ಪ್ರಯತ್ನಿಸಿದ್ದಾರೆ. ತಕ್ಷಣ ಅಧಿಕಾರಿಯೊಬ್ಬರು ಮಧ್ಯಪ್ರವೇಶಿಸಿ ಆ ವ್ಯಕ್ತಿಯನ್ನು ಎಳೆದುಕೊಂಡು ಹೋಗಿದ್ದಾರೆ. ಇದು ಉನ್ನತ ನಾಯಕರ ಭದ್ರತೆಯ ಬಗ್ಗೆ ಕಳವಳ ಹುಟ್ಟುಹಾಕಿದೆ. ಆದರೆ, ಮೆಕ್ಸಿಕೋ ಅಧ್ಯಕ್ಷೆ ಈ ಘಟನೆಯಿಂದ ವಿಚಲಿತರಾಗದೆ ಶಾಂತಿಯಿಂದ ವರ್ತಿಸಿ, ಜನರೊಂದಿಗೆ ಮತ್ತೆ ಮಾಮೂಲಿನಂತೆ ಮಾತಾಡತೊಡಗಿದ್ದಾರೆ. ಈ ಘಟನೆ ನಡೆದ ವೇಳೆ ಅವರ ಸುತ್ತ ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ.

ನವದೆಹಲಿ, ನವೆಂಬರ್ 5: ಮೆಕ್ಸಿಕೋ ನಗರದಲ್ಲಿ ನಡೆದ ಆಘಾತಕಾರಿ ಘಟನೆಯ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಮೆಕ್ಸಿಕೋ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ರಸ್ತೆಯಲ್ಲಿ ಜನರನ್ನು ಭೇಟಿಯಾಗುತ್ತಿದ್ದಾಗ ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಅವರನ್ನು ಮುಟ್ಟಲು ಮತ್ತು ಮುತ್ತಿಡಲು ಪ್ರಯತ್ನಿಸಿದ್ದಾರೆ. ತಕ್ಷಣ ಅಧಿಕಾರಿಯೊಬ್ಬರು ಮಧ್ಯಪ್ರವೇಶಿಸಿ ಆ ವ್ಯಕ್ತಿಯನ್ನು ಎಳೆದುಕೊಂಡು ಹೋಗಿದ್ದಾರೆ. ಇದು ಉನ್ನತ ನಾಯಕರ ಭದ್ರತೆಯ ಬಗ್ಗೆ ಕಳವಳ ಹುಟ್ಟುಹಾಕಿದೆ. ಆದರೆ, ಮೆಕ್ಸಿಕೋ ಅಧ್ಯಕ್ಷೆ ಈ ಘಟನೆಯಿಂದ ವಿಚಲಿತರಾಗದೆ ಶಾಂತಿಯಿಂದ ವರ್ತಿಸಿ, ಜನರೊಂದಿಗೆ ಮತ್ತೆ ಮಾಮೂಲಿನಂತೆ ಮಾತಾಡತೊಡಗಿದ್ದಾರೆ. ಈ ಘಟನೆ ನಡೆದ ವೇಳೆ ಅವರ ಸುತ್ತ ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published on: Nov 05, 2025 09:31 PM