ರಾತ್ರಿ ಬಾಲಕಿಯರ ಹಾಸ್ಟೆಲ್ಗೆ ನುಗ್ಗಿ ಹುಡುಗಿಯರ ಬಟ್ಟೆ ಮುಟ್ಟಿ ವಾಸನೆ ನೋಡಿ ಖುಷಿಪಡೋ ಯುವಕ! ಸಿಸಿಟಿವಿ ವಿಡಿಯೋ ವೈರಲ್
ಯುವಕನೊಬ್ಬ ಬಾಲಕಿಯರ ವಸತಿ ನಿಲಯಕ್ಕೆ ರಾತ್ರಿ ವೇಳೆ ನುಗ್ಗಿ ಬಾಲಕಿಯರ ಬಟ್ಟೆ ಮುಟ್ಟಿ, ವಾಸನೆ ನೋಡಿ ಖುಷಿಪಟ್ಟ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಚಿಕ್ಕಬಳ್ಳಾಪುರದ ಅಂಬೇಡ್ಕರ್ ಬಾಲಕಿಯರ ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ. ಸದ್ಯ ವಾರ್ಡನ್ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಿಕ್ಕಬಳ್ಳಾಪುರ, ನವೆಂಬರ್ 5: ಚಿಕ್ಕಬಳ್ಳಾಪುರ ನಗರದಲ್ಲಿ ನಡೆದ ವಿಚಿತ್ರ ಘಟನೆಯೊಂದರ ಸಿಸಿಟಿವಿ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಗರದ ಅಂಬೇಡ್ಕರ್ ಬಾಲಕಿಯರ ವಸತಿ ನಿಲಯಕ್ಕೆ ರಾತ್ರಿ ವೇಳೆ ಯುವಕನೊಬ್ಬ ನುಗ್ಗಿ ಬಾಲಕಿಯರ ಬಟ್ಟೆ ಮುಟ್ಟಿ, ವಾಸನೆ ನೋಡಿ ಖುಷಿಪಟ್ಟ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಡ್ರೇಪಾಳ್ಯದ ಚೇತನ್ ಎಂಬಾತ ಈ ಕೃತ್ಯ ಎಸಗಿದ್ದು, ಈ ಕುರಿತು ಹಾಸ್ಟೆಲ್ ವಾರ್ಡನ್ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿದ ಬಳಿಕ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Latest Videos

