
ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ (Masood Azhar) ಪಾಕಿಸ್ತಾನದಲ್ಲಿ ಇಲ್ಲ ಎಂದು ಪಾಕಿಸ್ತಾನದ ನಾಯಕ ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿದ್ದಾರೆ. ಭಾರತವು ಆತ ಪಾಕಿಸ್ತಾನದ ನೆಲದಲ್ಲಿ ಇದ್ದಾನೆ ಎಂದು ಮಾಹಿತಿ ನೀಡಿತ್ತು. ಒಂದು ವೇಳೆ ಇಲ್ಲಿ ಇದಿದ್ದರೆ ಅವನನ್ನು ನಾವೇ ಬಂಧಿಸುತ್ತಿದ್ದೇವು ಎಂದು ಹೇಳಿದ್ದಾರೆ. ಮಸೂದ್ ಅಜರ್ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬ, 2001ರ ಸಂಸತ್ ದಾಳಿ, 26/11 ಮುಂಬೈ ದಾಳಿ, 2016 ರ ಪಠಾಣ್‌ಕೋಟ್ ದಾಳಿ ಮತ್ತು 2019 ರ ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದ, 2019ರಲ್ಲಿ ವಿಶ್ವಸಂಸ್ಥೆಯು ಇತನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡಿತ್ತು. ಆ ಮೂಲಕ ಮಸೂದ್ ಅಜರ್ನ್ನು ಬಂಧನ ಮಾಡಲಾಗಿತ್ತು. ಆದರೆ 1999ರಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆ ಕಂದಹಾರ್ ವಿಮಾನ ಅಪಹರಣ ಮಾಡಿ, ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ಇರಿಸಿ, ಪ್ರಯಾಣಿಕರನ್ನು ಬಿಡಬೇಕಾದರೆ ಮಸೂದ್ ಅಜರ್ನ್ನು ಬಿಡಿ ಎಂದು ಬೆದರಿಕೆ ಹಾಕಿ ಬಿಡುಗಡೆ ಮಾಡಿಸಲಾಗಿತ್ತು.
ಅಜರ್ ಮತ್ತು ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ನ್ನು ಭಾರತಕ್ಕೆ ಹಸ್ತಾಂತರಿಸಬೇಕೆಂದು ಭಾರತ ಪಾಕಿಸ್ತಾನವನ್ನು ಒತ್ತಾಯಿಸುತ್ತಿದೆ. ಈ ಭಯೋತ್ಪಾದಕರು ಪಾಕಿಸ್ತಾನದಲ್ಲಿ ಇದ್ದರೆ ಎಂಬ ಮಾಹಿತಿ ದೃಢವಾಗಿದೆ. ಆದರೆ ಪಾಕಿಸ್ತಾನ ಇಲ್ಲ ಎಂದು ನಾಟಕ ಮಾಡುತ್ತಿದೆ ಎಂದು ಭಾರತ ಹೇಳಿದೆ. ಅಲ್ ಜಜೀರಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮುಖ್ಯಸ್ಥ ಬಿಲಾವಲ್ ಭುಟ್ಟೋ ಜರ್ದಾರಿ, ಸಯೀದ್ ಪಾಕಿಸ್ತಾನದಲ್ಲಿ ಸ್ವತಂತ್ರ ವ್ಯಕ್ತಿಯಲ್ಲ ಮತ್ತು ಅಜರ್ ಅಫ್ಘಾನಿಸ್ತಾನದಲ್ಲಿರಬಹುದು ಹೇಳಿದ್ದಾರೆ.
ಇನ್ನು ಈ ಸಂದರ್ಶನದಲ್ಲಿ ನ್ಯೂಯಾರ್ಕ್ ಟೈಮ್ಸ್ ವರದಿಯ ಕುರಿತಾಗಿ ಸಯೀದ್ ಸ್ವತಂತ್ರನಾಗಿದ್ದಾನೆ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಲಾವಲ್ ಭುಟ್ಟೋ ಜರ್ದಾರಿ, ಅದು ನಿಖರವಾಗಿ ಗೊತ್ತಿಲ್ಲ , ಹಫೀಜ್ ಸಯೀದ್ ಸ್ವತಂತ್ರ ವ್ಯಕ್ತಿ ಎಂಬುದು ವಾಸ್ತವಿಕವಾಗಿ ಸರಿಯಲ್ಲ. ಅವನು ಪಾಕಿಸ್ತಾನಿ ರಾಜ್ಯದ ವಶದಲ್ಲಿದ್ದಾನೆ. ಮಸೂದ್ ಅಜರ್ನ್ನು ಬಂಧಿಸಲು ಅಥವಾ ಗುರುತಿಸಲು ಸಾಧ್ಯವಾಗಿಲ್ಲ. ಅಫ್ಘಾನ್ನಲ್ಲಿ ನಡೆದ ತಾಲಿಬಾನ್ ದಾಳಿ ನಂತರ ಆತ ಅಫ್ಘಾನಿಸ್ತಾನದಲ್ಲಿದ್ದಾನೆ ಎಂಬುದು ನಮ್ಮ ನಂಬಿಕೆ ಎಂದು ಹೇಳಿದ್ದಾರೆ.
ಒಂದು ವೇಳೆ ಭಾರತ ಮಸೂದ್ ಅಜರ್ ಪಾಕಿಸ್ತಾನದ ಯಾವ ಭಾಗದಲ್ಲಿ ಇದ್ದಾನೆ ಎಂಬುದನ್ನು ಹೇಳಲಿ, ಖಂಡಿತ ನಾವು ಅವನನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ. ಭಾರತವು ಅಜರ್ ಬಗ್ಗೆ ಮಾಹಿತಿಯನ್ನು ನೀಡಬೇಕೆಂದು ಪಾಕಿಸ್ತಾನ ಏಕೆ ನಿರೀಕ್ಷಿಸುತ್ತದೆ ಎಂದರೆ, ನೀವು ಯಾವುದೇ ದೇಶದೊಂದಿಗೆ ಭಯೋತ್ಪಾದನಾ ನಿಗ್ರಹ ಸಹಕಾರವನ್ನು ಹೊಂದಿರುವಾಗ ಈ ಕೆಲಸವನ್ನು ಮಾಡಲೇಬೇಕು. ಈ ಹಿಂದೆ ಭಯೋತ್ಪಾದಕರು ಲಂಡನ್ ದಾಳಿಗಳನ್ನು ತಡೆಯುವಲ್ಲಿ, ನ್ಯೂಯಾರ್ಕ್‌ನಲ್ಲಿ ದಾಳಿಗಳನ್ನು ತಡೆಯುವಲ್ಲಿ, ಪಾಕಿಸ್ತಾನದಲ್ಲಿ ದಾಳಿಗಳನ್ನು ತಡೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಹೇಳಿದರು. ಮಸೂದ್ ಅಜರ್ ವಿಷಯಕ್ಕೆ ಬಂದರೆ, ಅವನು ಅಫ್ಘಾನಿಸ್ತಾನದಲ್ಲಿರುಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತೀಯರಿಗೆ ಪ್ರಜಾಪ್ರಭುತ್ವವೆಂದರೆ ಜೀವನ ವಿಧಾನ; ಟ್ರಿನಿಡಾಡ್ ಮತ್ತು ಟೊಬಾಗೋ ಸಂಸತ್ನಲ್ಲಿ ಪ್ರಧಾನಿ ಮೋದಿ
ಇನ್ನು ಏಪ್ರಿಲ್ 22 ರಂದು ಭಾರತದ ಪಹಲ್ಗಾಮ್ ಮೇಲೆ ದಾಳಿಯನ್ನು ನಡೆಸಿದ ಪಾಕಿಸ್ತಾನ ಭಯೋತ್ಪಾದಕರಿಗೆ ಆಪರೇಷನ್ ಸಿಂಧೂರದ ಮೂಲಕ ಉತ್ತರವನ್ನು ನೀಡಲಾಗಿತ್ತು. ಈ ದಾಳಿಯನ್ನು ಪಾಕಿಸ್ತಾನದ ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾದ ಪ್ರಧಾನ ಕಚೇರಿ ಮತ್ತು ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ಮೇಲೆ ಗುರಿಯಾಗಿಸಿತ್ತು. ಈ ದಾಳಿಯಿಂದ ತನ್ನ ಕುಟುಂಬದ 10 ಸದಸ್ಯರು ಮತ್ತು ತನ್ನ ನಾಲ್ವರು ಸಹಾಯಕರು ಸಾವನ್ನಪ್ಪಿದ್ದಾರೆ ಎಂದು ಅಜರ್ ಹೇಳಿದ್ದ ಎಂದು ಬಿಲಾವಲ್ ಭುಟ್ಟೋ ಜರ್ದಾರಿ ಹೇಳಿದ್ದಾರೆ.
ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ